/newsfirstlive-kannada/media/post_attachments/wp-content/uploads/2024/10/School-bus.jpg)
ಶಾಲಾ ಬಸ್ವೊಂದು ನದಿಗೆ ಉರುಳಿದ ಘಟನೆ ಛತ್ತೀಸ್ಗಡದ ಶಕ್ತಿ ಜಿಲ್ಲೆಯಲ್ಲಿ ನಡೆದಿದೆ. 18 ಮಕ್ಕಳನ್ನು ಸಾಗಿಸುತ್ತಿದ್ದ ಶಾಲಾ ಬಸ್ ಸೋನೆ ನದಿಗೆ ಉರುಳಿದೆ. ಗ್ರಾಮಸ್ಥರು ಸರಿಯಾದ ಸಮಯದಲ್ಲಿ ನೀರಿಗೆ ಹಾರಿ ಮಕ್ಕಳನ್ನು ರಕ್ಷಿಸಿದ್ದಾರೆ.
ಪಿಸೌದ್ ಪ್ರದೇಶದಲ್ಲಿ ಇಂದು ಮುಂಜಾನೆ 8 ಗಂಟೆ ಸುಮಾರಿಗೆ ಶಾಲಾ ಬಸ್ ನದಿಗೆ ಉರುಳಿ ಬಿದ್ದಿದೆ. ಸೋನೆ ನದಿಗೆ ನಿರ್ಮಿಸಲಾದ ಸೇತುವೆ ಮೇಲೆ ಬಸ್ ಹಾದು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ ಎನ್ನಲಾಗುತ್ತಿದೆ. ಚಾಲಕ ಪಾನಮತ್ತನಾಗಿದ್ದನು ಎಂದು ಸ್ಥಳೀಯರು ಆರೋಪಿಸುತ್ತಿದ್ದು, ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗ್ರಾಮಸ್ಥರಿಂದ ಉಳಿಯಿತು ಮಕ್ಕಳ ಜೀವ
ಸ್ಥಳೀಯರು ಬಸ್ ನೀರಿಗೆ ಬಿದ್ದಿರುವುದನ್ನು ಗಮನಿಸಿ ಕೂಡಲೇ ರಕ್ಷಣೆಗೆ ಮುಂದಾಗಿದ್ದಾರೆ. ಕೂಡಲೇ ನೀರಿಗೆ ಹಾರಿ ಎಲ್ಲಾ ಮಕ್ಕಳನ್ನು ರಕ್ಷಿಸಿದ್ದಾರೆ. ಸದ್ಯ ಎಲ್ಲಾ ಮಕ್ಕಳು ಆಸ್ಪತ್ರೆಯಲ್ಲಿದ್ದು, ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪಾನ್ ಮಸಾಲಾ ಜಾಹೀರಾತನ್ನು ತಿರಸ್ಕರಿಸಿದ ಖ್ಯಾತ ನಟ! 10 ಕೋಟಿ ರೂಪಾಯಿ ಆಫರ್ ಕೊಟ್ರು ಬೇಡ ಎಂದ್ರು!
ಸ್ಟೀರಿಂಗ್ ವೈಫಲ್ಯ ಆರೋಪ
ಸ್ಟೀರಿಂಗ್ ವೈಫಲ್ಯದಿಂದ ನಿಯಂತ್ರಿಸಲಾಗದೆ ಬಸ್ ನೀರಿಗೆ ಬಿದ್ದಿದೆ ಎಂದು ಕಸ್ಟಡಿಗೆ ಒಳಗಾದ ಚಾಲಕ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸ್ಥಳೀಯರು ನಾನಾ ಕಾರಣ ಹೇಳುತ್ತಿದ್ದಾರೆ.
ಇದನ್ನೂ ಓದಿ: Cyclone Dana: ಸ್ಮಾರ್ಟ್ಫೋನ್ನಲ್ಲಿ ಚಂಡಮಾರುತ ಚಲನೆಯನ್ನೇ ಟ್ರ್ಯಾಕ್ ಮಾಡಿ! ಹೇಗೆ ಗೊತ್ತಾ?
ಶಾರ್ಟ್ಕಟ್ ದಾರಿಯಿಂದಾಗಿ ಅನಾಹುತ?
ಬಸ್ ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಹಲವರು ದೂರುತ್ತಿದ್ದಾರೆ. ಶಾಲೆಗೆ ಹೋಗಲು ಬೇರೆ ದಾರಿಯಿದ್ದು, ಚಾಲಕ ಶಾರ್ಟ್ಕಟ್ ಆಗಿ ಕಿರಿದಾದ ಸೇತುವೆ ಮೇಲೆ ಬಸ್ ಚಲಾಯಿಸಿದ್ದಾನೆ ಇದರಿಂದಾಗಿ ಬಸ್ ಅಪಘಾತಕ್ಕೀಡಾಗಿ ಎಂದು ಆರೋಪಿಸಿದ್ದಾರೆ. ಜೊತೆಗೆ ಚಾಲಕ ಮದ್ಯಪಾನ ಮಾಡಿರಬೇಕು ಎಂದು ದೂರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ