ಶಾಲಾ ​ಮಕ್ಕಳನ್ನು ಕರೆದೊಯ್ಯುವ ವೇಳೆ ಹೃದಯಾಘಾತ.. ಸ್ಕೂಲ್​​ ಬಸ್​ ಚಾಲಕ ಸಾವು, 20 ಮಕ್ಕಳ ಪರಿಸ್ಥಿತಿ?

author-image
AS Harshith
Updated On
ನಾಳೆ ಭಾರತ್ ಬಂದ್‌ಗೆ ಕರೆ.. ಪ್ರತಿಭಟನೆಗೆ ಯಾರೆಲ್ಲಾ ಬೆಂಬಲ? ಶಾಲಾ-ಕಾಲೇಜುಗಳು ಬಂದ್​?
Advertisment
  • ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಹೃದಯಾಘಾತ
  • 20 ಮಕ್ಕಳನ್ನು ಶಾಲಾ ಬಸ್​ನಲ್ಲಿ ಕರೆದೊಯ್ಯುತ್ತಿದ್ದ 49 ವರ್ಷದ ಚಾಲಕ
  • ಶ್ರದ್ಧಾಂಜಲಿ ಸಮರ್ಪಿಸಿದ ಮುಖ್ಯಮಂತ್ರಿ.. 5 ಲಕ್ಷ ಪರಿಹಾರ ಘೋಷಣೆ

ಸ್ಕೂಲ್​​ ಬಸ್​ ಚಾಲಕ ಇದ್ದಕ್ಕಿದ್ದಂತೆಯೇ ಹೃದಯಾಘಾತಕ್ಕೆ ಬಲಿಯಾದ ಘಟನೆ ಬೆಳಕಿಗೆ ಬಂದಿದೆ. ಮಕ್ಕಳನ್ನು ಕರೆದೊಯ್ಯುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಚಾಲಕನಿಗೆ ಹಾರ್ಟ್​​ ಅಟ್ಯಾಕ್​ ಸಂಭವಿಸುತ್ತಿದ್ದಂತೆ ಆತ ಬಸ್​ ನಿಲ್ಲಿಸಿ 20 ವಿದ್ಯಾರ್ಥಿಗಳ ಜೀವ ಉಳಿಸಿದ್ದಾನೆ. ಕೊನೆಗೆ ಉಸಿರು ನಿಲ್ಲಿಸಿದ್ದಾನೆ.

ತಮಿಳಿನಾಡಿನಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ವೆಲ್ಲಕೋಯಿಲ್​ ಕೆಸಿಪಿ ನಗರದಲ್ಲಿ ವಾಸಿಸುತ್ತಿದ್ದ ಸೋಮಲಯ್ಯಪ್ಪನ್​​​ (49) ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಇದನ್ನೂ ಓದಿ: ಗಂಡನ ಜತೆ ಬೇಬಿ ಬಂಪ್​​ ಲುಕ್​ನಲ್ಲಿ ಮಿಲನಾ ನಾಗರಾಜ್​​.. ಎಷ್ಟು ಕ್ಯೂಟ್​ ನೀವು ಎಂದ ಫ್ಯಾನ್ಸ್​!

ಸೋಮಲಯ್ಯಪ್ಪನ್ ಅಯ್ಯನೂರಿನಲ್ಲಿ ಖಾಸಗಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಕೆಲಸಕ್ಕೆ ಸೇರಿದ್ದರು. ಪತ್ನಿ ಲತಾ ಸ್ಕೂಲ್​ ಬಸ್​ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸ್ಕೂಲ್​ ಬಸ್​​ ಚಾಲಕ ಹೃದಯಾಘಾತದಿಂದ ತನ್ನ ಪ್ರಾಣ ಕಳೆದುಕೊಳ್ಳುವ ವೇಳೆ 20 ಮಕ್ಕಳ ಜೀವ ಉಳಿಸಿದ್ದಾರೆ. ಬಸ್​ ನಿಲ್ಲಿಸಿ ಶಾಲಾ ಮಕ್ಕಳ ಜೀವ ಕಾಪಾಡಿದ್ದಾರೆ. ಬಸ್​ ಚಾಲಕ ಮಾಡಿದ ಈ ಕೆಲಸವನ್ನು ಎಲ್ಲರೂ ಹೊಗಳುತ್ತಿದ್ದಾರೆ.


">July 25, 2024

ಇದನ್ನೂ ಓದಿ: ಕೊಲೆಯಾದ ವ್ಯಕ್ತಿ ತೊಡೆ ಮೇಲೆ ಬರೋಬ್ಬರಿ 22 ಹೆಸರು ಪತ್ತೆ.. ಬೆಚ್ಚಿಬಿದ್ದ ಪೊಲೀಸ್ರು!

ಇನ್ನು ಈ ವಿಚಾರ ತಿಳಿದು ಸಿಎಂ ಎಂ.ಕೆ ಸ್ಟಾಲಿನ್​​ ಚಾಲಕನಿಗೆ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ. ಮೃತವ್ಯಕ್ತಿ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment