newsfirstkannada.com

ಶಾಲಾ ವಾಹನದಲ್ಲಿ ಕಾಣಿಸಿಕೊಂಡ ಬೆಂಕಿ; ಮಕ್ಕಳನ್ನು ಸ್ಕೂಲ್​ಗೆ ಕರೆದೊಯ್ಯುವ ವೇಳೆ ಎದುರಾದ ದೊಡ್ಡ ಅನಾಹುತ

Share :

Published June 3, 2024 at 12:12pm

Update June 3, 2024 at 12:13pm

  ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಸ್ಕೂಲ್​ ಬಸ್​

  ಸ್ಕೂಲ್​ ಬಸ್​​ ಎಂಜಿನ್​ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ

  ಈ ಅವಘಡದಲ್ಲಿ ಮಕ್ಕಳಿಗೆ ಏನಾಯ್ತು? ಇಲ್ಲಿದೆ ಮಾಹಿತಿ

ಧಾರವಾಡ: ಮಕ್ಕಳನ್ನು ಕರೆದೊಯ್ಯುವ ವೇಳೆ ಶಾಲಾ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಧಾರವಾಡದ ಕೋರ್ಟ್ ವೃತ್ತದಲ್ಲಿ ಬೆಳಕಿಗೆ ಬಂದಿದೆ. ತಕ್ಷಣ ಎಚ್ಚೆತ್ತ ವಾಹನ ಚಾಲಕ ಎದುರಾಗುತ್ತಿದ್ದ ಭಾರೀ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

ನವಲೂರು ಬಳಿಯ ಖಾಸಗಿ ಶಾಲಾ ವಾಹನ ಇದಾಗಿದ್ದು, ಮಕ್ಕಳನ್ನ ಕರೆದುಕೊಂಡು ಶಾಲೆಗೆ ಹೋಗುವಾಗ ವಾಹನದ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಕೆಲವೇ ಮಕ್ಕಳು ವಾಹನದಲ್ಲಿದ್ದ ಕಾರಣ ಎಲ್ಲರನ್ನು ಕೆಳಗಿಸಿದ ಚಾಲಕ ಜಾಗರೂಕತೆ ಮೆರೆದಿದ್ದಾರೆ. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಾಹನ ಸವಾರರಿಗೆ ಬರೆ.. ಇಂದಿನಿಂದ ಟೋಲ್ ದರ ದುಪ್ಪಟ್ಟು ಹೆಚ್ಚಳ

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಲಾ ವಾಹನದಲ್ಲಿ ಕಾಣಿಸಿಕೊಂಡ ಬೆಂಕಿ; ಮಕ್ಕಳನ್ನು ಸ್ಕೂಲ್​ಗೆ ಕರೆದೊಯ್ಯುವ ವೇಳೆ ಎದುರಾದ ದೊಡ್ಡ ಅನಾಹುತ

https://newsfirstlive.com/wp-content/uploads/2024/06/School-bus.jpg

Load More