Advertisment

ಇದ್ದಕ್ಕಿದ್ದಂತೆಯೇ ಕುಸಿದ 2 ಅಂತಸ್ತಿನ ಶಾಲೆ.. 22 ಸಾವು, 132 ವಿದ್ಯಾರ್ಥಿಗಳ ರಕ್ಷಣೆ

author-image
AS Harshith
Updated On
ಇದ್ದಕ್ಕಿದ್ದಂತೆಯೇ ಕುಸಿದ 2 ಅಂತಸ್ತಿನ ಶಾಲೆ.. 22 ಸಾವು, 132 ವಿದ್ಯಾರ್ಥಿಗಳ ರಕ್ಷಣೆ
Advertisment
  • ತರಗತಿ ನಡೆಯುತ್ತಿದ್ದ ವೇಳೆ ಕುಸಿದ ಬಿದ್ದ ಶಾಲಾ ಕಟ್ಟಡ
  • ಅವಶೇಷದ ಕೆಳಗೆ ಸಿಲುಕ್ಕಿದ್ದ 100ಕ್ಕೂ ಹೆಚ್ಚು ಮಕ್ಕಳು
  • ಇಂಥಾ ಶಾಲೆಯನ್ನು ಮುಚ್ಚಬೇಕು ಎಂದು ಜನರ ಒತ್ತಾಯ

ತರಗತಿ ನಡೆಯುತ್ತಿದ್ದ ವೇಳೆ ಎರಡು ಅಂತಸ್ತಿನ ಶಾಲೆ ಕುಸಿದು ಬಿದ್ದ ಘಟನೆ ನಡೆದಿದೆ. ಪರಿಣಾಮ 22 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಅವಶೇಷದ ಕೆಳಗೆ 100ಕ್ಕೂ ಹೆಚ್ಚು ಮಕ್ಕಳು ಸಿಲುಕ್ಕಿದ್ದು, ಅವರಿಗಾಗಿ ರಕ್ಷಣಾ ತಂಡ ಶೋಧ ಕಾರ್ಯ ನಡೆಸಿ ಹೊರತೆಗೆದಿದ್ದಾರೆ.

Advertisment

ಉತ್ತರ-ಮಧ್ಯ ನೈಜೀರಿಯಾದಲ್ಲಿ ಈ ದುರ್ಘಟನೆ ನಡೆದಿದೆ. ಬುಸಾ ಬುಜಿ ಸಮುದಾಯದ ಸೇಂಟ್ಸ್​ ಅಕಾಡೆಮಿ ಶಾಲೆ ಕುಸಿದು ಬಿದ್ದಿದೆ. ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ ಕೆಲವೇ ಗಂಟೆಗಳಲ್ಲಿ ನೆಲಕ್ಕುರುಳಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್​​ನ ಸಹೋದರಿ ಜೊತೆ ರಿಂಕು ಸಿಂಗ್.. ಯಾರು ಈ ಮಿಸ್ಟರಿ ಗರ್ಲ್..!

ಕಟ್ಟಡ ಕುಸಿದ ಪರಿಣಾಮ 154 ವಿದ್ಯಾರ್ಥಿಗಳು ಅವಶೇಷದ ಕೆಳಗೆ ಸಿಲುಕ್ಕಿದ್ದರು. ಆದರೆ ಅವರಲ್ಲಿ 132 ಮಂದಿಯನ್ನು ರಕ್ಷಿಸಲಾಗಿದೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 22 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

Advertisment

ಇದನ್ನೂ ಓದಿ: ಬರೋಬ್ಬರಿ 1000 ಕೋಟಿ.. Kalki 2898 AD ರೆಕಾರ್ಡ್‌ ಬ್ರೇಕ್‌; ಕಲ್ಕಿ 2 ಶೂಟಿಂಗ್ ಯಾವಾಗ?

ಶಾಲೆಯ ನಿರ್ಮಾಣ ದುರ್ಬಲವಾಗಿದ್ದು, ನದಿ ಬದಿಯಲ್ಲಿ ಶಾಲೆಯನ್ನು ನಿರ್ಮಿಸಲಾಗಿತ್ತು. ಈ ಕಾರಣಕ್ಕೆ ಶಾಲೆ ಕುಸಿದು ಬಿದ್ದಿದೆ. ಸದ್ಯ ಇಂತಹ ಶಾಲೆಗಳು ನೈಜೀರಿಯಾದಲ್ಲಿ ಹಲವಾರಿದ್ದು, ಶೀಘ್ರವೇ ಮುಚ್ಚಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment