/newsfirstlive-kannada/media/post_attachments/wp-content/uploads/2024/12/Manmohan-Singh-2.jpg)
ದೇಶದ ಅತ್ಯಂತ ಮೇಧಾವಿ ಪ್ರಧಾನಿ, ಖ್ಯಾತ ಅರ್ಥಶಾಸ್ತ್ರಜ್ಞ, ಉದಾರೀಕರಣದ ಹರಿಕಾರ ಎಂಬ ಖ್ಯಾತಿ ಪಡೆದಿದ್ದ ಡಾ.ಮನಮೋಹನ್ ಸಿಂಗ್ 1932, ಸೆಪ್ಟೆಂಬರ್ 26 ರಂದು ಜನಿಸಿದ್ದರು. ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬ್ನ ಗಾವ್ ಎಂಬ ಹಳ್ಳಿ ಇವರ ಮೂಲ.
ತಂದೆ ಗುರುಮುಖ್ ಸಿಂಗ್ ಮತ್ತು ತಾಯಿ ಅಮೃತ್ ಕೌರ್. ಬಾಲ್ಯದಲ್ಲಿರುವಾಗಲೇ ಸಿಂಗ್ ತಮ್ಮ ತಾಯಿಯನ್ನು ಕಳೆದುಕೊಂಡರು. ಹೀಗಾಗಿ ಅವರು ಅಜ್ಜಿಯ ಆರೈಕೆಯಲ್ಲಿ ಬೆಳೆದರು. ದೇಶ ವಿಭಜನೆಯ ಬಳಿಕ ಮನಮೋಹನ್ ಸಿಂಗ್ ಕುಟುಂಬಕ್ಕೆ ಅಮೃತಸರಕ್ಕೆ ವಲಸೆ ಬಂದಿತು.
ವಿಶೇಷ ಅಂದತೆ ಪಾಕಿಸ್ತಾನದ ಗಾಹ್ ಗ್ರಾಮದಲ್ಲಿ ಮನಮೋಹನ್ ಸಿಂಗ್ ಹೆಸರಲ್ಲಿ ಶಾಲೆಯೊಂದು ಇದೆ. ಸಿಂಗ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇದೇ ಶಾಲೆಯಲ್ಲಿ ಪಡೆದುಕೊಂಡಿದ್ದರು. ಹೀಗಾಗಿ ಅವರು ಮೊದಲ ಬಾರಿಗೆ ಪ್ರಧಾನಿಯಾದಾಗ ಹುಟ್ಟೂರಲ್ಲಿ ಸಂಭ್ರಮದ ಮನೆ ಮಾಡಿತ್ತು.
ಇದನ್ನೂ ಓದಿ:ದೇಶದ ಅರ್ಥವ್ಯವಸ್ಥೆ ಸುಧಾರಣೆಯ ಶಿಲ್ಪಿ ಅಸ್ತಂಗತ.. ಸದೃಢ ಭಾರತಕ್ಕೆ ಭದ್ರ ಬುನಾದಿ ಹಾಕಿದ್ದ ಡಾ.ಸಿಂಗ್
ಅಲ್ಲಿನ ಪಂಜಾಬ್ ಪ್ರಾಂತ್ಯದ ಸರ್ಕಾರ 2007ರಲ್ಲಿ ಗೌರವಾರ್ಥವಾಗಿ ಗಹ್ ಗ್ರಾಮದಲ್ಲಿರುವ ಬಾಲಕರ ಶಾಲೆಗೆಗೆ ಮನಮೋಹನ್ ಸಿಂಗ್ ಬಾಲಕರ ಶಾಲೆ ಎಂದು ನಾಮಕರಣ ಮಾಡಿದೆ. 92 ವರ್ಷ ವಯಸ್ಸಿನ ಡಾ. ಮನಮೋಹನ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಅವರನ್ನು ಕಳೆದ ರಾತ್ರಿ ದೆಹಲಿಯ ಏಮ್ಸ್ಗೆ ಕರೆತರಾಗಿತ್ತು. ಬಳಿಕ ಅವರನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ಇದನ್ನೂ ಓದಿ:ದೇಶದ ಅರ್ಥ ವ್ಯವಸ್ಥೆಯ ದಿಕ್ಕನ್ನೇ ಬದಲಿಸಿದ ನಾಯಕ; ಸಿಂಗ್ ಪ್ರಧಾನಿಯಾಗಿ ತೆಗೆದುಕೊಂಡ ದಿಟ್ಟ 10 ನಿರ್ಧಾರಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ