/newsfirstlive-kannada/media/post_attachments/wp-content/uploads/2025/04/exam.jpg)
ಚೆನ್ನೈ: ಮುಟ್ಟು (periods) ಆಗಿದ್ದಕ್ಕೆ 8ನೇ ತರಗತಿಯ ದಲಿತ ವಿದ್ಯಾರ್ಥಿನಿಯನ್ನು ಕ್ಲಾಸ್ ರೂಂ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಅಮಾನವೀಯ ಘಟನೆ ಕೊಯಮತ್ತೂರಿನ (Coimbatore )ಖಾಸಗಿ ಶಾಲೆಯಲ್ಲಿ ನಡೆದಿದೆ.
ಇದನ್ನೂ ಓದಿ: 9 ಸಾವಿರಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್ ಹುದ್ದೆಗಳು.. SSLC ಪಾಸ್ ಆಗಿದ್ರೆ ಸಾಕು…!
ಕಿನಾಥುಕಡವು ತಾಲೂಕಿನ ಸೆಂಗೊಟ್ಟೈ ಪಾಳ್ಯ ಗ್ರಾಮದಲ್ಲಿರುವ ಸ್ವಾಮಿ ಚಿದ್ಭವಂದ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿನಿ 8ನೇ ತರಗತಿ ಓದುತ್ತಿದ್ದಳು. ಏಪ್ರಿಲ್ 5 ರಂದು ವಿದ್ಯಾರ್ಥಿನಿಗೆ ಮುಟ್ಟು ಆಗಿತ್ತು. ಏಪ್ರಿಲ್ 7ರಂದು ವಿಜ್ಞಾನ ಪರೀಕ್ಷೆಯ ವೇಳೆ ತರಗತಿಯ ಹೊರಗೆ ಕೂರಿಸಿದ್ದಾರೆ ಎಂದು ವಿದ್ಯಾರ್ಥಿನಿ ತನ್ನ ತಾಯಿಗೆ ತಿಳಿಸಿದ್ದಾರೆ.
ಏಪ್ರಿಲ್ 9ರಂದು ಪರೀಕ್ಷೆಗೆ ವಿದ್ಯಾರ್ಥಿನಿಯ ತಾಯಿ ಶಾಲೆಗೆ ತೆರಳಿದ್ದು, ಮಗಳನ್ನು ತರಗತಿಯ ಹೊರಗೆ ಕೂರಿಸಿರುವುದನ್ನ ಗಮನಿಸಿದ್ದಾರೆ. ಆಗ ತನ್ನ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಾ, ವಿದ್ಯಾರ್ಥಿನಿಯ ತಾಯಿ ಆಕೆಯ ಬಳಿಗೆ ಬಂದು ಏನಾಯಿತು ಎಂದು ಕೇಳಿದ್ದಾರೆ. ಆಗ ವಿದ್ಯಾರ್ಥಿನಿ ಪ್ರಾಂಶುಪಾಲರು ಹೊರಗೆ ಕೂರಿಸಿದ್ದರು ಎಂದು ಹೇಳಿದ್ದಾಳೆ. ಅದಕ್ಕೆ ಅಸಮಾಧಾನಗೊಂಡ ತಾಯಿ ವಿದ್ಯಾರ್ಥಿನಿಯನ್ನು ತನ್ನ ಮುಟ್ಟಿನ ಸಮಯದಲ್ಲಿ ಹೊರಗೆ ಕೂರಿಸಿ ಪರೀಕ್ಷೆ ಬರೆಯುವಂತೆ ಏಕೆ ಹೇಳಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಶಾಲಾ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ