/newsfirstlive-kannada/media/post_attachments/wp-content/uploads/2025/01/us-girl.jpg)
8 ವರ್ಷದ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಬಲಿಯಾಗಿರೋ ಘಟನೆ ಅಮೆರಿಕದಲ್ಲಿ ನಡೆದಿದೆ. ಹೌದು, ಸೆರೆನಿಟಿ ಕ್ಯಾಂಪೋಸ್ ಎಂಬ ವಿದ್ಯಾರ್ಥಿನಿ ಟೆಕ್ಸಾಸ್‌ನ ಬೋರ್ಗರ್‌ನಲ್ಲಿ ಗೇಟ್‌ವೇ ಎಲಿಮೆಂಟರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಳು.
ಇದನ್ನೂ ಓದಿ: ದೇವರ ಮೇಲೆ ಬಹಳ ನಂಬಿಕೆ.. ಟ್ರಾವೆಲ್ ಎಂದರೆ ಇಷ್ಟ; ಭವಿಷ್ಯದ ಕನಸು ಕಟ್ಟಿಕೊಂಡಿದ್ದ ಯುವತಿ ದಾರುಣ ಅಂತ್ಯ
ಆಗ ವಿದ್ಯಾರ್ಥಿಯನ್ನು ಶಾಲೆಯಿಂದ ಮನೆಗೆ ಬಿಟ್ಟಿದ್ದಾನೆ. ಇದೇ ವೇಳೆ ಕಾರಿನಿಂದ ಇಳಿಯುತ್ತಿದ್ದ ವಿದ್ಯಾರ್ಥಿನಿಯ ಕೋಟ್ ಕಾರಿನ ಬಾಗಿಲಿಗೆ ಸಿಕ್ಕಿಹಾಕಿಕೊಂಡಿದೆ. ಇದನ್ನು ಗಮನಿಸದ ಚಾಲಕ ಹಾಗೇ ಕಾರನ್ನು ಚಲಿಸಿಕೊಂಡು ಹೋಗಿದ್ದಾನೆ. ಇದರಿಂದಾಗಿ ಅವಳು ಕೆಳಗಡೆ ಬಿದ್ದ ಪರಿಣಾಮ ಆಕೆಗೆ ಗಂಭೀರ ಗಾಯಗಳಾಗಿದ್ದವು ಆ ಕೂಡಲೇ ಹಿರಿಯ ಶಾಲಾ ಶಿಕ್ಷಕರು ವಿದ್ಯಾರ್ಥಿನಿಯ ಜೀವ ಉಳಿಸಲು ಆ ಕೂಡಲೇ ಗೋಲ್ಡನ್ ಪ್ಲೇನ್ಸ್ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಎಷ್ಟೇ ಪ್ರಯತ್ನಿಸಿದ್ದರು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ, ವಿದ್ಯಾರ್ಥಿನಿ ಸೆರೆನಿಟಿ ಕ್ಯಾಂಪೋಸ್ ಗೌರವಾರ್ಥವಾಗಿ ಗೇಟ್‌ವೇ ಎಲಿಮೆಂಟರಿ ಮುಂಭಾಗದಲ್ಲಿರುವ ಸ್ಮಾರಕದಲ್ಲಿ ಇರಿಸಲು ವಾಲ್‌ಮಾರ್ಟ್ 40 ಸ್ಟಫ್ಡ್ ಪ್ರಾಣಿಗಳನ್ನು ದಾನ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ