/newsfirstlive-kannada/media/post_attachments/wp-content/uploads/2025/02/SCHOOL-STUDENTS.jpg)
ಸುಮಾರು 30ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ರಸ್ತೆಯಲ್ಲಿ ಬಿಂದಾಸ್ ಆಗಿ ಮೆರವಣಿಗೆ ಮಾಡಿರುವ ಶಾಲಾ ಮಕ್ಕಳ ವಿಡಿಯೋವೊಂದು ಈಗ ವೈರಲ್ ಆಗಿದ್ದು. ಮಕ್ಕಳ ವಿರುದ್ಧ ತನಿಖೆಗೆ ಪೊಲೀಸರು ಮುಂದಾಗಿದ್ದು, ಕಾರ್ ಮಾಲೀಕರ ವಿರುದ್ಧವೂ ಕೂಡ ಕ್ರಮಕ್ಕೆ ಸಜ್ಜಾಗಿದ್ದಾರೆ.
ಗುಜರಾತ್ನ ಸುರತ್ನಲ್ಲಿರುವ ಜಹಾಂಗೀಪುರದಲ್ಲಿ ನಡೆದ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಮವಸ್ತ್ರ ಧರಿಸಿದ ಶಾಲಾ ವಿದ್ಯಾರ್ಥಿಗಳು ಐಷಾರಾಮಿ ಕಾರುಗಳು ಅಂದ್ರೆ ಬಿಎಂಡಬ್ಲ್ಯೂ ಮತ್ತು ಮರ್ಸಿಡಿಸ್ ಸೇರಿ ಹಲವು ಐಷಾರಾಮಿ ಕಾರುಗಳನ್ನು ರಸ್ತೆ ತುಂಬಾ ಮೆರವಣಿಗೆ ನಡೆಸಿ ರೀಲ್ಸ್ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ. ವಿಷಯ ಡೆಪ್ಯೂಟಿ ಕಮಿಷನರ್ವರೆಗೂ ಹೋಗಿದ್ದು. ನಡೆದ ಬೆಳವಣಿಗೆಗೆ ಬಗ್ಗೆ ಟ್ರಾಫಿಕ್ ಕಮಿಷನರ್ ಅನಿತಾ ವನಾನಿ ಮಾಹಿತಿ ಪಡದಿರುವುದಾಗಿ ಹೇಳಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತಕ್ಷಣವೇ ಕ್ರಮಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ:ಅಸಲಿಗೆ ಅದೆಷ್ಟು ವಿಶಾಲವಾಗಿತ್ತು ನಮ್ಮ ಅಖಂಡ ಭಾರತ; ಇದರ ಅಸಲಿ ಕಹಾನಿ ನಿಮಗೆ ಗೊತ್ತಾ?
ಮಾಧ್ಯಮಗಳ ಜೊತೆ ಮಾತನಾಡಿದ ಪೊಲೀಸ್ ಅಧಿಕಾರಿಗಳು ಶಾಲೆಯೊಂದರ ಬಳಿ ಈ ಒಂದು ವಿಡಿಯೋ ಶೂಟ್ ಮಾಡಲಾಗಿದೆ. ಈಗಾಗಲೇ ನಾವು ಕಾರ್ ಮಾಲೀಕರ ವಿಳಾಸಕ್ಕೆ ಸಮನ್ಸ್ ಕಳುಹಿಸುವ ಕಾರ್ಯ ಆರಂಭ ಮಾಡಿದ್ದೇವೆ. ಒಂದು ಬಾರಿ ತನಿಖೆ ಮುಗಿದ ಬಳಿಕ ಮುಂದಿನ ಕಾನೂನು ಕ್ರಮವನ್ನು ವಿದ್ಯಾರ್ಥಿಗಳಿಗೆ ವಾಹನಗಳನ್ನು ನೀಡಿದವರ ವಿರುದ್ಧ ಕೈಗೊಳ್ಳಲಾಗುವುದು ಎಂದು ಟ್ರಾಫಿಕ್ ಪೊಲೀಸ್ ಕಮಿಷನರ್ ವನಾನಿ ಹೇಳಿದ್ದಾರೆ.
રોલા પાડવા સ્કૂલની ફેરવેલમાં વિદ્યાર્થીઓ લક્ઝુરિયસ કાર લઈ પહોંચ્યા
આ કાફલો કોઈ મંત્રી અથવા ઉદ્યોગપતિનો નથી પણ આ કાફલો સ્કૂલમાં ફેરવેર પાર્ટીમાં જતા વિદ્યાર્થીઓનો છે
સુરતની ફાઉન્ટન હેડ સ્કૂલમાં ધો.12 ની વિદ્યાર્થીઓની યોજાયેલ ફેરવેલ પાર્ટીમાં વિદ્યાર્થીઓ 30 જેટલી બીએમડબલ્યુ,… pic.twitter.com/cC1Il0vxgd
— Jay Acharya ( Journalist ) (@AcharyaJay22_17)
રોલા પાડવા સ્કૂલની ફેરવેલમાં વિદ્યાર્થીઓ લક્ઝુરિયસ કાર લઈ પહોંચ્યા
આ કાફલો કોઈ મંત્રી અથવા ઉદ્યોગપતિનો નથી પણ આ કાફલો સ્કૂલમાં ફેરવેર પાર્ટીમાં જતા વિદ્યાર્થીઓનો છે
સુરતની ફાઉન્ટન હેડ સ્કૂલમાં ધો.12 ની વિદ્યાર્થીઓની યોજાયેલ ફેરવેલ પાર્ટીમાં વિદ્યાર્થીઓ 30 જેટલી બીએમડબલ્યુ,… pic.twitter.com/cC1Il0vxgd— Jay Acharya ( Journalist ) (@AcharyaJay22_17) February 10, 2025
">February 10, 2025
ವಿಡಿಯೋ ವಿಚಾರದಲ್ಲಿ ವಿದ್ಯಾರ್ಥಿಗಳ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಕಮಿನರ್ ವನಾನಿ ಟ್ರೆಂಡ್ಗಳು ಬೆಳೆಯುತ್ತಿರುವುದರಿಂದ ವಿದ್ಯಾರ್ಥಿಗಳು ಇಂತಹ ರೀಲ್ಸ್ಗಳ ಮೊರೆ ಹೋಗುತ್ತಾರೆ. ಇದು ಕೇವಲ ಅವರ ಜೀವಗಳ ಮೇಲೆ ಅಪಾಯವನ್ನುಂಟು ಮಾಡದೆ. ರಸ್ತೆಯಲ್ಲಿ ಹೋಗುವವರ ಜೀವಕ್ಕೂ ಅಪಾಯವುಂಟಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಏರ್ ಶೋನಲ್ಲಿ Made in Tumakuru ಹೆಲಿಕಾಪ್ಟರ್ ಆಕರ್ಷಣೆ; ನಮ್ಮ ನೆಲದ ಈ ಹಕ್ಕಿಯ ವಿಶೇಷತೆ ಏನು?
ಇನ್ನು ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು. ಟ್ರಾಫಿಕ್ ನಿಯಮ ಉಲ್ಲಂಘನೆ ಹಾಗೂ ಸಾರ್ವಜನಿಕ ಸುರಕ್ಷತೆಯ ವಿಚಾರದಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ವಿಡಿಯೋದಲ್ಲಿರುವ ಎಲ್ಲರ ವಿರುದ್ಧವೂ ಕಠಿ ಕ್ರಮ ಕೈಗೊಳ್ಳಲಾಗುವುದು ಈಗಾಗಲೇ ವಿಡಿಯೋದಲ್ಲಿ ಕಾಣಸಿಕೊಂಡವರ ಗುರುತುಪತ್ತೆಯ ಕಾರ್ಯವನ್ನು ನಮ್ಮ ಪೊಲೀಸರು ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ