newsfirstkannada.com

9ನೇ ಕ್ಲಾಸ್‌ ವಿದ್ಯಾರ್ಥಿನಿ ಜೊತೆ ಗುಟ್ಟಾಗಿ ಮದುವೆಯಾದ ‘ಪೋಲಿ’ ಶಿಕ್ಷಕ; ಆಮೇಲೆ ಏನಾಯ್ತು?

Share :

19-08-2023

    15 ವರ್ಷದ ವಿದ್ಯಾರ್ಥಿನಿಗೆ ಮದುವೆಯಾದ ಶಾಲಾ ಶಿಕ್ಷಕ

    ಬೆಳಗಾವಿ ಜಿಲ್ಲೆಯ ಶಿಕ್ಷಕ ಸಂದೀಪ ಕುಮಾರ್ ಅಜೂರೆ

    ಶಾಲೆ ಶುರುವಾಗುತ್ತಿದ್ದಂತೆ ಮದುವೆ ಪುರಾಣ ಬೆಳಕಿಗೆ

ಬೀದರ್: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಜೊತೆ ಶಾಲಾ ಶಿಕ್ಷಕನೊಬ್ಬ ಗುಟ್ಟಾಗಿ ಮದುವೆಯಾಗಿರೋ ಘಟನೆ ಭಾಲ್ಕಿ ತಾಲೂಕಿನ ಗ್ರಾಮಯೊಂದರಲ್ಲಿ ನಡೆದಿದೆ. ಈ ಸಂಬಂಧ ಶಿಕ್ಷಕನ ವಿರುದ್ಧ ಮೇಹಕರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಶಿಕ್ಷಕ ಸಂದೀಪ ಕುಮಾರ್ ಅಜೂರೆ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯ ಜೊತೆ ಮದುವೆಯಾಗಿದ್ದ. ಶಿಕ್ಷಕ ಮೂಲತಃ ಬೆಳಗಾವಿ ಜಿಲ್ಲೆಯ ನಿವಾಸಿ. ಈಗಾಗಲೇ ಶಿಕ್ಷಕನಿಗೆ ಮದುವೆಯಾಗಿ ಒಂದು ಮಗು ಕೂಡ ಇದೆ. ಇದರ ನಡುವೆಯೂ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಪುಸಲಾಯಿಸಿ ಬೇಸಿಗೆ ರಜೆ ಸಂದರ್ಭದಲ್ಲಿ ಮದುವೆ ಮಾಡಿಕೊಂಡಿದ್ದಾನೆ. ಮಾರ್ಚ್ ತಿಂಗಳಲ್ಲಿ ಮದುವೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಈ ಶಾಲೆ ಶುರುವಾಗುತ್ತಿದ್ದಂತೆ ಶಿಕ್ಷಕನ ಮದುವೆ ಪುರಾಣ ಬೆಳಕಿಗೆ ಬಂದಿದೆ. ಸದ್ಯ ಈ ಕುರಿತು ಮೇಹಕರ ಪೊಲೀಸ್ ಅಧಿಕಾರಿಗಳು ಶಿಕ್ಷಕನನ್ನು ಕರೆಸಿ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

9ನೇ ಕ್ಲಾಸ್‌ ವಿದ್ಯಾರ್ಥಿನಿ ಜೊತೆ ಗುಟ್ಟಾಗಿ ಮದುವೆಯಾದ ‘ಪೋಲಿ’ ಶಿಕ್ಷಕ; ಆಮೇಲೆ ಏನಾಯ್ತು?

https://newsfirstlive.com/wp-content/uploads/2023/08/bidar.jpg

Load More