ಶಾಲೆಯ ಮೊದಲನೇ ಮಹಡಿಯ ಕ್ಲಾಸ್ ರೂಮ್ನಲ್ಲಿ ಅನಾಹುತ
ಗೋಡೆ ಕುಸಿದು ಬಿದ್ದ ರಭಸಕ್ಕೆ ಮಹಡಿ ಮೇಲಿಂದ ಬಿದ್ದ ಮಕ್ಕಳು
ಆಕಸ್ಮಿಕವಾಗಿ ಒಂದು ಬದಿಯ ಗೋಡೆ ಕುಸಿದು ಬಿದ್ದ ದೃಶ್ಯ ಸೆರೆ
ಗಾಂಧಿನಗರ: ಶಾಲೆಯ ಮೊದಲನೇ ಮಹಡಿಯ ಕ್ಲಾಸ್ ರೂಮ್ನಲ್ಲಿ ಕುಳಿತು ಊಟ ಮಾಡುವಾಗ ಗೋಡೆ ಕುಸಿದು ಬಿದ್ದ ಪರಿಣಾಮ 5 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಜರಾತ್ನ ವಡೋದರದ ಶ್ರೀ ನಾರಾಯಣ ವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ನಮ್ಮ ನಡುವಿನ ಗಾಸಿಪ್ ನಿಜ.. ಒಟ್ಟಾಗಿ ಬದುಕಲು ಆಗಲಿಲ್ಲ- ನಟಾಶಾ ಬಗ್ಗೆ ಹಾರ್ದಿಕ್ ಏನಂದರು?
ವಡೋದರಾದ ಶ್ರೀ ನಾರಾಯಣ ವಿದ್ಯಾಲಯದಲ್ಲಿ ಎಂದಿನಂತೆ ತರಗತಿ ಆರಂಭವಾಗಿದ್ದವು. ಅದರಂತೆ ಮಧ್ಯಾಹ್ನದ ವೇಳೆ ಎಲ್ಲಾ ಮಕ್ಕಳನ್ನು ಊಟಕ್ಕೆ ಬಿಡಲಾಗಿತ್ತು. ಈ ವೇಳೆ 7ನೇ ತರಗತಿ ಮಕ್ಕಳು ಮೊದಲನೇ ಮಹಡಿಯ ಕೊಠಡಿಯಲ್ಲಿ 12:30ರ ಸುಮಾರಿಗೆ ಕುಳಿತು ಊಟ ಮಾಡುತ್ತಿದ್ದರು. ಆಗ ಆಕಸ್ಮಿಕವಾಗಿ ಒಂದು ಬದಿಯ ಗೋಡೆ ಕುಸಿದು ಬಿದ್ದಿದೆ. ಇದರಿಂದ ಕೊಠಡಿಯಲ್ಲಿದ್ದ ಸುಮಾರು ಮಕ್ಕಳ ಪೈಕಿ 5 ವಿದ್ಯಾರ್ಥಿಗಳಿಗೆ ಗಂಭೀರವಾದ ಗಾಯಗಳು ಆಗಿವೆ. ಮಕ್ಕಳ ಸೈಕಲ್ ಮೇಲೆ ಗೋಡೆ ಬಿದ್ದಿದ್ದರಿಂದ 10 ರಿಂದ 12 ಸೈಕಲ್ ನಜ್ಜುಗುಜ್ಜಾಗಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮಹಿಳೆಗೆ ಕಿಸ್ ಮಾಡಲು ಹೋದ ಜೋ ಬೈಡನ್.. US ಪ್ರೆಸಿಡೆಂಟ್ ಕನ್ಫ್ಯೂಸ್ ಆಗಿದ್ದೆಲ್ಲಿ?
#Vadodra: A classroom wall on the first floor of a trust run school Shree Narayan Vidhyalay suddenly collapsed when the students were having lunch in break causing injuries to a class 7 student and minor injuries to 5 others on Friday, Vadodra Gujarat. #GujaratModel pic.twitter.com/Tv8XvgHlBM
— Saba Khan (@ItsKhan_Saba) July 20, 2024
ಸದ್ಯ ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಗಾಯಗೊಂಡಂತಹ ಮಕ್ಕಳ ಪೋಷಕರು ಶಾಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಶಾಲೆಯನ್ನು ಟ್ರಸ್ಟ್ವೊಂದು ನಡೆಸುತ್ತಿದೆ. ಮಾಹಿತಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದರು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ