ಕೊರೊನಾ ಆತಂಕದ ಮಧ್ಯೆ ಇಂದಿನಿಂದ ಶಾಲೆ ಆರಂಭ; ಪೋಷಕರು ಓದಲೇಬೇಕಾದ ಸ್ಟೋರಿ ಇದು!

author-image
admin
Updated On
ಕೊರೊನಾ ಆತಂಕದ ಮಧ್ಯೆ ಇಂದಿನಿಂದ ಶಾಲೆ ಆರಂಭ; ಪೋಷಕರು ಓದಲೇಬೇಕಾದ ಸ್ಟೋರಿ ಇದು!
Advertisment
  • ರಾಜ್ಯದಲ್ಲಿ ಕೊರೊನಾ ಮೂರಂಕಿ ದಾಟುತ್ತಿದ್ದಂತೆ ಆತಂಕ ದುಪ್ಪಟ್ಟು
  • ಮಕ್ಕಳಿಗೆ ಜ್ವರ, ಶೀತ, ಕೆಮ್ಮು ಅಥವಾ ವಾಂತಿ ಇದ್ದರೆ ಹುಷಾರ್‌!
  • ಬೆಂಗಳೂರಲ್ಲಿ ಮಕ್ಕಳ ಸ್ವಾಗತಕ್ಕೆ ಸರ್ಕಾರದಿಂದ ದೊಡ್ಡ ಕಾರ್ಯಕ್ರಮ

ರಾಜ್ಯದಲ್ಲಿ ಕೊರೊನಾ ಸೆಂಚುರಿ ಸಿಡಿಸಿ ಮುನ್ನುಗುತ್ತಿದೆ. ಈ ಮಧ್ಯೆ ದೇಶಕ್ಕೆ ಹೊಸ ತಳಿಗಳೂ ಲಗ್ಗೆ ಇಟ್ಟಿದ್ದು, ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ. ಈ ಆತಂಕದ ನಡುವೆಯೇ ರಾಜ್ಯದಲ್ಲಿ ಇಂದಿನಿಂದ ಶಾಲೆಗಳು ಆರಂಭವಾಗ್ತಿದ್ದು, ಶಿಕ್ಷಣ ಇಲಾಖೆ ಏನ್​ ಕ್ರಮ ತೆಗೆದುಕೊಂಡಿದೆ? ಪೋಷಕರು, ಮಕ್ಕಳಿಗೆ ಉಪಯುಕ್ತ ಮಾಹಿತಿ ಇಲ್ಲಿದೆ.

ಕ್ರೂರಿ ಕೊರೊನಾಗೆ ಕಣ್ಣಿಲ್ಲ. ವಯಸ್ಸು ಕೇಳಲ್ಲ, ಲಿಂಗವೂ ನೋಡಲ್ಲ. ಪುಟಾಣಿ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ತನ್ನ ವಕ್ರದೃಷ್ಟಿಯನ್ನ ಹಾಕಿ ಬಿಡುತ್ತೆ. ಈ ಹಿಂದೆ ಕೂಡ ಮಕ್ಕಳ ಮೇಲೆ ಅಟ್ಟಹಾಸ ಮೆರೆದಿತ್ತು. ಇದೀಗ ಮತ್ತೆ ಎಂಟ್ರಿ ಕೊಟ್ಟಿದ್ದು, ಸದ್ದಿಲ್ಲದೆ ಸೋಂಕಿತರ ಸಂಖ್ಯೆಯನ್ನು ಏರಿಸಿಕೊಳ್ತಿದೆ. ಈ ಬೆನ್ನಲ್ಲೇ ಇಂದಿನಿಂದ ರಾಜ್ಯದಲ್ಲಿ ಶಾಲೆಗಳು ಆರಂಭವಾಗುತ್ತಿದೆ.

publive-image

ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಎಚ್ಚರಿಕೆ!
ರಾಜ್ಯದಲ್ಲಿ ಕೊರೊನಾ ಮೂರಂಕಿ ದಾಟುತ್ತಿದ್ದಂತೆ ಆತಂಕ ದುಪ್ಪಟ್ಟು ಆಗಿದೆ. ಈ ಮಧ್ಯೆಯೇ ಪೋಷಕರು ಕಳವಳಗೊಂಡಿದ್ದಾರೆ. ಸದ್ಯಕ್ಕೆ ಶಿಕ್ಷಣ ಇಲಾಖೆಯಿಂದ ಗೈಡ್​ಲೈನ್ಸ್​ ಬಿಡುಗಡೆಯಾಗಿಲ್ಲ. ಆದ್ರೆ, ಶಿಕ್ಷಣ ಇಲಾಖೆ ಪೋಷಕರಿಗೆ ಮತ್ತು ಶಾಲೆಗಳಿಗೆ ಕೆಲ ಸೂಚನೆಯನ್ನ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಯಾರೂ ಗಾಬರಿ ಪಡಬೇಕಾಗಿಲ್ಲ. ಆದರೆ ಜವಾಬ್ದಾರಿ ಮರೆಯಬಾರದು ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನ ಫಾಲೋ ಮಾಡಬೇಕು ಎಂದು ಹೇಳಿದ್ದಾರೆ.

ಪೋಷಕರಿಗೆ ಶಾಲೆಯ ಸೂಚನೆ ಏನು?
ಶಾಲೆಗಳಿಗೆ ಶಿಕ್ಷಣ ಇಲಾಖೆ ಎಚ್ಚರಿಕೆಯ ಸಂದೇಶ ನೀಡಿದ್ರೆ, ರಾಜ್ಯದ ಸಂಬಂಧಿತ ಶಾಲೆಗಳು ಪೋಷಕರಿಗೆ ಈಗಾಗಲೇ ಮಕ್ಕಳ ಸ್ವಾಗತಕ್ಕೆ ಮೆಸೇಜ್‌ಗಳನ್ನು ಕಳುಹಿಸಿದೆ.

ದಿನಾಂಕ 29ರಂದು ಶಾಲೆ ಪುನಾರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಹಾಜರಾಗಬೇಕು. ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಮಾಸ್ಕ್ ಧರಿಸುವುದನ್ನ ಕಡ್ಡಾಯಗೊಳಿಸಲಾಗಿದೆ.
ಸ್ವಚ್ಛತೆಯ ಜೊತೆಗೆ ಆಗಾಗ ಕೈ ತೊಳೆಯುವುದು ಬಹಳ ಮುಖ್ಯವಾಗಿದೆ. ಹೀಗಾಗಿ ಮಕ್ಕಳಿಗೆ ಶುದ್ಧ ನೀರಿನ ವ್ಯವಸ್ಥೆ, ಸ್ಯಾನಿಟೈಸರ್‌ಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

publive-image

ಪ್ರಮುಖವಾಗಿ ಆರೋಗ್ಯ ಇಲಾಖೆಯ ಸೂಚನೆಯಲ್ಲಿ ಯಾವ ಮಕ್ಕಳಿಗೆ ಜ್ವರ, ಶೀತ, ಕೆಮ್ಮು ಅಥವಾ ವಾಂತಿ ಗುಣಲಕ್ಷಣಗಳಿದ್ರೆ ರಜೆ ತೆಗೆದುಕೊಳ್ಳಿ. ಮಕ್ಕಳ ಅನಾರೋಗ್ಯದ ಬಗ್ಗೆ ಶಿಕ್ಷಕರಿಗೆ ತಿಳಿಸಿದರೆ ಸಾಕು ಅನ್ನೋ ಸಂದೇಶವನ್ನು ಶಾಲೆಗಳು ಶಿಕ್ಷಕರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಕ್ಷಮೆ ಕೇಳಲ್ಲ.. ಕನ್ನಡ, ತಮಿಳು ಭಾಷಾ ವಿವಾದಕ್ಕೆ ಕಮಲ್ ಹಾಸನ್ ಹೊಸ ಟ್ವಿಸ್ಟ್; ಹೇಳಿದ್ದೇನು? 

ಕೊರೊನಾ ಎಂಟ್ರಿ ಮಧ್ಯೆಯೇ ಇಂದು ಮಕ್ಕಳನ್ನ ಶಾಲೆಗಳಿಗೆ ಸ್ವಾಗತಿಸಲಾಗುತ್ತಿದೆ. ಮಧು ಬಂಗಾರಪ್ಪ ಶಿಕ್ಷಣ ಸಚಿವರಾಗಿ 2 ವರ್ಷ ಪೂರೈಸಿರೋ ಜೊತೆಗೆ ಇಂದು ಈ ವರ್ಷದ ಶಾಲೆಗಳು ಆರಂಭವಾಗ್ತಿದೆ. ರಾಜ್ಯ ಸರ್ಕಾರ ಇಂದು ಬೆಂಗಳೂರಲ್ಲಿ ಮಕ್ಕಳ ಸ್ವಾಗತಕ್ಕೆ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕೊರೊನಾ ಆತಂಕದ ನಡುವೆಯೇ ಇಂದಿನಿಂದ ಶಾಲೆ ಆರಂಭವಾಗ್ತಿದೆ. ಪೋಷಕರು, ಮಕ್ಕಳು, ಶಿಕ್ಷಕರು ಅವರ ಎಚ್ಚರದಲ್ಲಿ ಅವರು ಇರೋದು ಒಳ್ಳೆಯದು. ಇಂತಹ ಸಂದರ್ಭದಲ್ಲಿ ಪೋಷಕರು ಜ್ವರ, ಶೀತ, ಕೆಮ್ಮು ಅಥವಾ ವಾಂತಿ ಲಕ್ಷಣವಿರೋ ಮಕ್ಕಳನ್ನು ಶಾಲೆಗೆ ಕಳುಹಿಸದಿರುವುದು ಬಹಳ ಒಳ್ಳೆಯದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment