/newsfirstlive-kannada/media/post_attachments/wp-content/uploads/2025/02/JOBS_EXAMS.jpg)
ಸುಪ್ರೀಂ ಕೋರ್ಟ್ನಲ್ಲಿ ಫೆಬ್ರವರಿ 5 ರಂದು 241 ಕಿರಿಯ ನ್ಯಾಯಾಲಯದ ಸಹಾಯಕ (Junior Court Assistant) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿತ್ತು. ಈಗಾಗಲೇ ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಪ್ರತಿಷ್ಠಿತ ಸುಪ್ರೀಂ ಕೋರ್ಟ್, ಪರೀಕ್ಷೆ ನಡೆಸುವ ದಿನಾಂಕವನ್ನು ಇದೀಗ ಘೋಷಣೆ ಮಾಡಿದೆ.
ಈ ಹಿಂದೆ ಸುಪ್ರೀಂ ಕೋರ್ಟ್ನ ಕಿರಿಯ ನ್ಯಾಯಾಲಯದ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿರುವಂತ ಅಭ್ಯರ್ಥಿಗಳಿಗಾಗಿ ಪರೀಕ್ಷೆಯ ದಿನಾಂಕವನ್ನು ಇಲ್ಲಿ ನೀಡಲಾಗಿದೆ. ಪರೀಕ್ಷೆ ನಡೆಯುವ ದಿನಾಂಕ ಅನೌನ್ಸ್ ಮಾಡಿದ್ದರಿಂದ ಓದಿನ ಕಡೆಗೆ ಆಕಾಂಕ್ಷಿಗಳು ಹೆಚ್ಚಿನ ಗಮನ ಹರಿಸಬೇಕು. ಈ ಹುದ್ದೆಗಳಿಗೆ ಫೆಬ್ರುವರಿ 5 ರಂದು ಅರ್ಜಿ ಆಹ್ವಾನ ಮಾಡಿದ್ದ ನ್ಯಾಯಾಲಯ ಮಾರ್ಚ್ 03ಕ್ಕೆ ಅರ್ಜಿ ಸಲ್ಲಿಕೆಯ ಕೊನೆ ಮಾಡಿತ್ತು.
ಇದನ್ನೂ ಓದಿ:ನೌಕಾಪಡೆಯ ವೈದ್ಯಕೀಯ ಸಹಾಯಕ ಹುದ್ದೆಗಳಿಗೆ ಈ ಕೂಡಲೇ ಅಪ್ಲೇ ಮಾಡಿ.. ಸಂಬಳ ಎಷ್ಟು?
13 ಏಪ್ರಿಲ್ 2025ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ದಿನಾಂಕವನ್ನು ತಿಳಿಸಿದೆ. ಸದ್ಯ ಎಕ್ಸಾಂ ದಿನವನ್ನು ತಿಳಿಸಿರುವ ಕಾರಣ ಅರ್ಜಿ ಸಲ್ಲಿಸುವವರು ಹೆಚ್ಚಿನ ಮಟ್ಟದಲ್ಲಿ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು. ಉದ್ಯೋಗಕ್ಕೆ ಆಯ್ಕೆ ಪ್ರಕ್ರಿಯೆ 4 ಹಂತಗಳಲ್ಲಿ ನಡೆಯಲಿದೆ. ಇದರಲ್ಲಿ ಮೊದಲನೇಯದು 100 ಅಂಕಗಳಿಗೆ ಲಿಖಿತ ಪರೀಕ್ಷೆ ಆಗಿದೆ. ಇದರ ಜೊತೆಗೆ ಕಂಪ್ಯೂಟರ್ ಜ್ಞಾನ Objective Type Test (25 ಪ್ರಶ್ನೆಗಳು), ಕಂಪ್ಯೂಟರ್ ಟೈಪಿಂಗ್ 35 WPM ಹಾಗೂ Descriptive Test ಆಯ್ಕೆ ಪ್ರಕ್ರಿಯೆಯ ಹಂತಗಳು ಆಗಿವೆ.
ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕು ಎಂದರೆ ಸುಪ್ರೀಕೋರ್ಟ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಪರಿಶೀಲನೆ ಮಾಡಿಕೊಳ್ಳಬಹುದು. (sci.gov.in.). ಇನ್ನುಳಿದಂತೆ ಈ ಉದ್ಯೋಗಗಳ ಪೂರ್ಣ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಬಹುದು.
ಇದನ್ನೂ ಓದಿ:ಸುಪ್ರೀಂ ಕೋರ್ಟ್ನಲ್ಲಿ 241 ಉದ್ಯೋಗಗಳು.. ಈ ದಿನಾಂಕದ ಒಳಗೆ ಅವಕಾಶ ಇದೆ
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ