/newsfirstlive-kannada/media/post_attachments/wp-content/uploads/2024/10/BLACK-PEPPER.jpg)
ಕರಿಮೆಣಸು 13-14ನೇ ಶತಮಾನದಲ್ಲಿ ಪಾಶ್ಚಾತ್ಯ ಜಗತ್ತು ಇದನ್ನು ಕಪ್ಪು ಬಂಗಾರವೆಂದೆ ಕರೆಯುತ್ತಿತ್ತು. ಇದಕ್ಕಿದ್ದ ಬೇಡಿಕೆಯಿಂದಲೇ ವಿಶ್ವದ ಅನೇಕ ಅನ್ಯ ರಾಷ್ಟ್ರಗಳು ಭಾರತದತ್ತ ಧಾವಿಸಿ ಬಂದವು. ಮಸಾಲೆ ಪದಾರ್ಥಕ್ಕೋಸ್ಕರವೇ ಈ ದೇಶದಲ್ಲಿ ಏನೆಲ್ಲಾ ನಡೆಯಿತು ಅನ್ನೋದು ಈಗ ಇತಿಹಾಸ ಬಿಡಿ. ಆದ್ರೆ, ಕರಿಮೆಣಸು ಒಂದು ಕಾಲದಲ್ಲಿ ಭಾರತದಿಂದ ಅತಿಹೆಚ್ಚು ದುಡ್ಡಿಗೆ ವಿದೇಶಗಳಿಗೆ ರಫ್ತಾಗುತ್ತಿದ್ದ ಒಂದು ಪದಾರ್ಥ. ಖಾರದ ಜಗತ್ತಿನಲ್ಲಿ ತನ್ನದೇ ಸ್ಥಾನ ಪಡೆದುಕೊಂಡಿದ ಈ ಕರಿಮೆಣಸು. ಆದ್ರೆ ಒಂದು ನೆನಪಿರಲಿ ಕರಿಮೆಣಸು ಕೇವಲ ಅಡುಗೆ ಮನೆಗೆ, ಪಾಕ ತಯಾರಿಕೆಗೆ ಮಾತ್ರ ಸೀಮಿತವಾಗಿಲ್ಲ. ಇದರ ಆರೋಗ್ಯದ ಪ್ರಯೋಜನಗಳು ಅಸೀಮಿತ. ಕ್ಯಾನ್ಸರ್ನಂತ ಕ್ಯಾನ್ಸರ್ನ್ನೇ ಬರದಂತೆ ತಡೆಯುವ ಶಕ್ತಿ ಈ ಕಪ್ಪು ಬಂಗಾರಕ್ಕಿದೆ. ಇದನ್ನು ಕಿಂಗ್ ಆಫ್ ಸ್ಪೈಸಿ ಎಂತಲೇ ಪಾಶ್ಚಾತ್ಯ ಜಗತ್ತು ಮತ್ತೊಂದು ಹೆಸರಿನಿಂದ ಕರೆಯುತ್ತದೆ. ಅಂದ್ರೆ ಖಾರಗಳ ರಾಜ ಅಂತ.
ಇದನ್ನೂ ಓದಿ:ಫ್ರೆಂಚ್ ಫ್ರೈಸ್ ತಿನ್ನುವ ಮುನ್ನ ಇತ್ತ ಗಮನಿಸಿ; ನಿಮ್ಮ ಆ ನೆಚ್ಚಿನ ತಿಂಡಿ ಎಷ್ಟು ಸಿಗರೇಟ್ಗೆ ಸಮ ಗೊತ್ತಾ?
ಸಾವಿರಾರು ವರ್ಷಗಳ ಹಿಂದೆಯೇ ಕರಿಮೆಣಸನ್ನು ಆಯುರ್ವೇದ ಹಲವು ರೋಗಗಳಿಗೆ ಮದ್ದಾಗಿ ಉಪಯೋಗಿಸಿದೆ. ಇಂದಿಗೂ ಕೂಡ ಕರಿಮೆಣಸಿನ ಪ್ರಯೋಜನಗಳನ್ನು ಅನೇಕ ವೈದ್ಯರು ಹೇಳುತ್ತಲೇ ಇರುತ್ತಾರೆ. ಕಾರಣ ಅದರೊಳಗಿರುವ ಔಷಧಿ ಗುಣಗಳು. ಇಂದಿಗೂ ಜಗತ್ತು ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಎನ್ನುತ್ತದೆ.
ಉರಿಯೂತದಿಂದ ನಿಮಗೆ ಸಿಗಲಿದೆ ಮುಕ್ತಿ
ಈ ಉರಿಯೂತದಂತಹ ಸಮಸ್ಯೆಗಳು ತನ್ನ ಜೊತೆಗೆ ಅನೇಕ ಸಮಸ್ಯೆಗಳನ್ನು ತಂದಿಡುತ್ತದೆ. ಸಂಧಿವಾತ, ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಹಾಗೂ ಕ್ಯಾನ್ಸರ್ನಂತಹ ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ಇಂತಹ ಸಮಸ್ಯೆಗಳಿಗೆ ಅನೇಕ ಪ್ರಯೋಗಾಲಯಗಳು ವರದಿಯ ಪ್ರಕಾರ ಈ ಸಮಸ್ಯೆಗೆ ಕರಿಮೆಣಸು ಸೇವಿಸಲು ಸಲಹೆ ನೀಡುತ್ತಾರೆ. ಕರಿಮೆಣಸಿಲ್ಲಿರುವ ಅಂಶಗಳು ಈ ಉರಿಯೂತದಂತಹ ಸಮಸ್ಯೆಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಪ್ರಯೋಗಾಲಯದಲ್ಲಿ ನಡೆದ ಇಲಿಯ ಮೇಲಿನ ಪ್ರಯೋಗ ಇದಕ್ಕೆ ದೊಡ್ಡ ಸಾಕ್ಷಿ. ಉರಿಯೂತವಿರುವ ಇಲಿಯ ಮೇಲೆ ಕರಿಮೆಣಸನ್ನು ಪ್ರಯೋಗಿಸಿ ನೋಡಿದಾಗ ಜಾಯಿಂಟ್ ಸ್ವೆಲ್ಲಿಂಗ್ ಹಾಗೂ ಉರಿಯೂತದಿಂದ ಕಾಣಿಸುವ ರಕ್ತದ ಕಲೆಗಳು ಕಡಿಮೆಯಾಗಿರುವುದು ಸ್ಪಷ್ಟವಾಗಿದೆ. ಹೀಗಾಗಿ ಇದೊಂದು ಉರಿಯೂತ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂದು ವೈದ್ಯರೇ ಸ್ಪಷ್ಟ ಪಡಿಸಿದ್ದಾರೆ.
ಮೆದುಳಿನ ಕಾರ್ಯಕ್ಕೆ ಬಹಳ ಸಹಾಯಕಾರಿ ಈ ಮೆಣಸು
ಕರಿಮೆಣಸು ನಮ್ಮ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಅನೇಕ ಪ್ರಯೋಗಾಲಯಗಳು ಸಾಬೀತು ಮಾಡಿವೆ.ಪ್ರಮುಖವಾಗಿ ಮೆದುಳಿನಿಂದ ಉಂಟಾಗು ಸಮಸ್ಯೆಗಳಾದ ಅಲ್ಜಮೈರ್ಸ, ಪಾರ್ಕಿನ್ಸನ್ ಗಳಂತಹ ಸಮಸ್ಯೆಗಳನ್ನು ಕ್ಷೀಣಿಸುವಂತೆ ಮಾಡುವ ಶಕ್ತಿ ಕರಿಮೆಣಸಿನಲ್ಲಿದೆ. ಒಂದು ಅಧ್ಯಯನ ಹೇಳುವ ಪ್ರಕಾರ ಅಲ್ಜಮೈರ್ಸ್ನಿಂದ ಬಳಲುತ್ತಿದ್ದವರ ಮೇಲೆ ಈ ಕರಿಮೆಣಸಿನ ಔಷಧಿಯನ್ನು ಪ್ರಯೋಗ ಮಾಡಿದಾಗ ಅವರ ಜ್ಞಾಪಕ ಶಕ್ತಿ ಸುಧಾರಣೆಯಾಗಿದ್ದು ಕಂಡು ಬಂದಿದೆ.
ಸಕ್ಕರೆ ಕಾಯಿಲೆಗೆ ರಾಮಬಾಣ ಕರಿಮೆಣಸು
ಈ ವಿಷಯವೂ ಕೂಡ ಒಂದು ಇಲಿಯ ಮೇಲೆ ನಡೆದ ಪ್ರಯೋಗದ ಆಧಾರದಲ್ಲಿ ಹೇಳಲಾಗುತ್ತದೆ. ಇಲಿಯ ದೇಹದಲ್ಲಿ ಗ್ಲುಕೋಸ್ ನೀಡಿದ ಬಳಿಕ ಕರಿಮೆಣಿಸಿನ ಔಷಧಿ ನೀಡಿದಾಗ ರಕ್ತದಲ್ಲಿ ಸಕ್ಕರೆ ಅಂಶವು ಕಡಿಮೆಯಾಗಿದ್ದು ಕಂಡು ಬಂದಿದೆ. ಇದು ಮಾತ್ರವಲ್ಲ ಕರಿಮೆಣಸು ನಿತ್ಯ ಆಹಾರದಲ್ಲಿ ಬಳಸುವುದರಿಂದ 8 ವಾರದಲ್ಲಿ ತೂಕ ಇಳಿಸಿಕೊಂಡ 86 ಜನರು ಇದ್ದಾರೆ ಎಂದು ಅಧ್ಯಯನವೊಂದು ಹೇಳಿದೆ.86 ಜನರ ಮೇಲೆ ನಡೆದ ಈ ಪ್ರಯೋಗ ಯಶಸ್ವಿ ಕೂಡ ಆಗಿದೆ. ಅದು ಮಾತ್ರವಲ್ಲ ಇದು ಸಕ್ಕರೆ ಕಾಯಿಲೆ ಇದ್ದವರಲ್ಲಿ ಇನ್ಸುಲೀನ್ ಸೆನ್ಸಿಟಿವಿಟಿ ಕಡಿಮೆ ಮಾಡುತ್ತದೆ ಎಂದು ಕೂಡ ಹೇಳಲಾಗಿದೆ
ಕೊಲೆಸ್ಟ್ರಾಲ್ ಕರಗಿಸುವಲ್ಲಿ ಕರಿಮೆಣಸು ಕಿಂಗ್
ಅತಿಹೆಚ್ಚು ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿದ್ದರೆ ಅದನ್ನು ಕರಗಿಸುವುದರಲ್ಲಿ ಕರಿಮೆಣಸಿನ ಪಾತ್ರ ತುಂಬಾ ದೊಡ್ಡದಿದೆ ಎನ್ನುತ್ತವೆ ಹಲವು ಅಧ್ಯಯನಗಳು. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ನಮ್ಮ ಹತ್ತಿರ ಸುಳಿಯುವುದಿಲ್ಲ. ಈ ವಿಚಾರದಲ್ಲಿ ಒಟ್ಟು 42 ಅಧ್ಯಯನಗಳನ್ನು ಕೈಗೊಳ್ಳಲಾಗಿದೆ. ಅವುಗಲ ಪ್ರಕಾರ ಬ್ಲ್ಯಾಕ್ ಪೆಪ್ಪರ್ ರಕ್ತದಲ್ಲಿನ ಕೊರೆಸ್ಟ್ರಾಲ್ನ್ನು ಕಡಿಮೆ ಮಾಡುವುದರಲ್ಲಿ ಭಾರೀ ಪರಿಣಾಮಕಾರಿ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಹೇಳಲಾಗಿದೆ.
ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ
ಹಲವು ಸಂಶೋಧನೆಗಳು ಈಗಾಗಲೇ ಹೇಳಿರುವಂತೆ ಕರಿಮೆಣಸಿನಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಇದೆ ಎಂಬುದು. ಟೆಸ್ಟ್ಟ್ಯೂಬ್ ಅಧ್ಯಯನ ಪ್ರಕಾರ ಕರಿಮೆಣಸಿನಿಂದ ಸ್ತನ ಕ್ಯಾನ್ಸರ್, ಪ್ರೋಸ್ಟೆಟ್ ಮತ್ತು ಕೆನಲ್ ಕ್ಯಾನ್ಸರ್ಗಳ ಸೆಲ್ಗಳನ್ನು ನಾಶ ಮಾಡಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ನಿತ್ಯ ಐದು ಕರಿಮೆಣಸು ನಾವು ಸೇವಿಸಿದರೆ ನಮಗೆ ಜನ್ಮದಲ್ಲಿಯೇ ಕ್ಯಾನ್ಸರ್ ಬರಲು ಸಾಧ್ಯವಿಲ್ಲ ಎಂದು ಆಯುರ್ವೇದಿಕ ತಜ್ಞರು ಕೂಡ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ