/newsfirstlive-kannada/media/post_attachments/wp-content/uploads/2025/06/China-smuggling-biological-materials-2.jpg)
ಅಮೆರಿಕಾ, ಚೀನಾದ ಮಧ್ಯೆ ಒಂದಲ್ಲ ಒಂದು ವಿಷಯಕ್ಕೆ ಪೈಪೋಟಿ ಜೊತೆಗೆ ಶೀತಲ ಸಮರ ನಡೆಯುತ್ತಲೇ ಇರುತ್ತೆ. ಇತ್ತೀಚೆಗೆ ಸುಂಕ ಸಮರ ನಡೆದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿಗೆ ಸವ್ವಾಸೇರು ಅನ್ನೋ ರೀತಿ ಸವಾಲು ಹಾಕಿದ್ದರು. ಸುಂಕ ಸಮರ ತಣ್ಣಗಾಯ್ತು ಅನ್ನುವಷ್ಟರಲ್ಲೇ ಅಮೆರಿಕಾದ ಮೇಲೆ ಚೀನಾ ಬಯೋಲಾಜಿಕಲ್ ವಾರ್ ನಡೆಸುತ್ತಿರುವ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಚೀನಾ, ಅಮೆರಿಕಾದ ಮೇಲೆ ಮಾರಕ ಜೈವಿಕ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಅಮೆರಿಕಾದಲ್ಲಿ ಬಯೋಲಾಜಿಕಲ್ ಸ್ಮಗ್ಲಿಂಗ್ ಮಾಡುತ್ತಿದ್ದ ಚೀನಾದ ಓರ್ವ ವಿಜ್ಞಾನಿಯನ್ನು ಬಂಧಿಸಲಾಗಿದೆ. ಬಂಧಿತ ವಿಜ್ಞಾನಿಯನ್ನು ಚೆಂಗಕ್ಸುಹಾನ್ ಹನ್ ಎನ್ನಲಾಗಿದೆ. ಈಕೆ ಚೀನಾದ ವುಹಾನ್ ಲ್ಯಾಬ್‌ಗೆ ಸಂಬಂಧಿಸಿದ ವಿಜ್ಞಾನಿ ಎಂದು ತಿಳಿದು ಬಂದಿದೆ.
ಚೀನಾ ವಿಜ್ಞಾನಿ ಚೆಂಗಕ್ಸುಹಾನ್ ಹನ್ ಜಂತುಹುಳು ಮಾದರಿಯ ಹುಳವನ್ನು ಸ್ಮಗ್ಲಿಂಗ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಯೂನಿರ್ವಸಿಟಿ ಆಫ್ ಮಿಚಿಗನ್‌ಗೆ ಜಂತುಹುಳ ಪ್ಯಾಕೇಜ್ ಕಳಿಸಿದ್ದ ಚೆಂಗಕ್ಸುಹಾನ್ ಹನ್, ಅಮೆರಿಕಾ ಅಧಿಕಾರಿಗಳಿಗೆ ಸುಳ್ಳು ಹೇಳಿಕೆ ನೀಡಿ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ಐಫೋನ್ಗೆ ಈಗ iOS 26 ಸಪೋರ್ಟ್, ಲಿಕ್ವಿಡ್ ಗ್ಲಾಸ್ನಿಂದ ಇಂಟಲಿಜೆನ್ಸ್ವರೆಗೆ.. ಅಪ್ಡೇಟ್ಸ್ ಕೊಟ್ಟ ಆ್ಯಪಲ್..!
ಚೆಂಗಕ್ಸುಹಾನ್ ಹನ್ ಅವರು ವುಹಾನ್‌ನಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದು, ಡೆಟ್ರಾಯಿಟ್ ಏರ್‌ಪೋರ್ಟ್‌ಗೆ ಬರುತ್ತಿದ್ದಂತೆ ಅಮೆರಿಕಾ FBI ಬಂಧಿಸಿದೆ. ಅಮೆರಿಕಾದಲ್ಲಿ ಬಯೋಲಾಜಿಕಲ್ ವಾರ್‌ಗೆ ಯತ್ನಿಸಿದ 3ನೇ ಚೀನಾ ನಾಗರಿಕ ಇವರಾಗಿದ್ದಾರೆ. ಚೆಂಗಕ್ಸುಹಾನ್ ಹನ್ ಅವರು ಮಿಚಿಗನ್ ಯೂನಿರ್ವಸಿಟಿಗೆ ನಾಲ್ಕು ಪ್ಯಾಕೇಜ್‌ಗಳನ್ನು ಕಳಿಸಿದ್ದಾರೆ.
ಕಳೆದ ವಾರ ಯಂಗಕ್ವಿಂಗ್ ಜಿಯಾನ್, ಆಕೆಯ ಬಾಯ್ ಫ್ರೆಂಡ್ ಜುನಾಯಾಂಗ್ ಲಿಯೂ ಅವರು ಇದೇ ರೀತಿ ಬಯೋಲಾಜಿಕಲ್ ವಾರ್‌ಗೆ ಮುಂದಾಗಿದ್ದರು. ಬೆಳೆ ನಾಶಕ ಫಂಗಸ್ ಅನ್ನು ಅಮೆರಿಕಾಕ್ಕೆ ಸಾಗಿಸಲು ಯತ್ನಿಸುತ್ತಿದ್ದಾಗ ಜುನಾಯಾಂಗ್ ಲಿಯೂ, ಯಂಗಕ್ವಿಂಗ್ ಜಿಯಾನ್ ಅವರನ್ನು ಬಂಧಿಸಲಾಗಿತ್ತು.
ಏನಿದು ಬಯೋಲಾಜಿಕಲ್ ವಾರ್?
ಬಯೋಲಾಜಿಕಲ್ ವಾರ್ ಅಂದ್ರೆ ಸದ್ದಿಲ್ಲದೇ ಮತ್ತೊಂದು ದೇಶದ ಆಹಾರ ಸರಬರಾಜಿನ ಮೇಲೆ ಜೈವಿಕ ಅಸ್ತ್ರ ಪ್ರಯೋಗ ಮಾಡುವುದು. ಪ್ಲ್ಯಾನ್ ಮಾಡಿ ಅಮೆರಿಕಾದ ಆಹಾರ ಸರಬರಾಜು ಮೇಲೆ ಫಂಗಸ್ ಹರಡಲು ಯತ್ನಿಸಲಾಗುತ್ತೆ. ಆಹಾರದಲ್ಲಿ ಈ ಹುಳಗಳು ಸೇರಿದ್ರೆ ಹುಳ ಮನುಷ್ಯನ ದೇಹದ ಒಳಗೆ ಸೇರಿ ಇಡೀ ದೇಹವನ್ನೇ ತಿಂದು ಹಾಕುತ್ತೆ. ಫಂಗಸ್‌ನಿಂದಾಗಿ ಮನುಷ್ಯ ಸಾಯುತ್ತಾನೆ. ಕ್ರಮೇಣ ಸಾವು-ನೋವುಗಳ ಪ್ರಮಾಣ ಹೆಚ್ಚಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ