ಚೀನಾದಲ್ಲಿ ಮತ್ತೊಂದು ಹೊಸ ವೈರಸ್.. ದೊಡ್ಡ ಸಾಂಕ್ರಾಮಿಕದ ಎಚ್ಚರಿಕೆ ಕೊಟ್ಟ ವಿಜ್ಞಾನಿಗಳು..!

author-image
Ganesh
Updated On
ಚೀನಾದಲ್ಲಿ ಮತ್ತೊಂದು ಹೊಸ ವೈರಸ್.. ದೊಡ್ಡ ಸಾಂಕ್ರಾಮಿಕದ ಎಚ್ಚರಿಕೆ ಕೊಟ್ಟ ವಿಜ್ಞಾನಿಗಳು..!
Advertisment
  • ಚೀನಾದಲ್ಲಿ ಮತ್ತೊಂದು ಬಾವಲಿ ಕೊರೊನಾ ವೈರಸ್
  • ಇದು ಕೂಡ ಮನುಷ್ಯರಿಗೆ ಹರಡುವ ಅಪಾಯ ಇದೆ
  • HKU5-CoV-2 ತುಂಬಾ ಡೇಂಜರ್ ಎಂದ ವಿಜ್ಞಾನಿಗಳು

ಚೀನಾ ಹಬ್ಬಿಸಿದ್ದ Covid-19 ಹಾನಿಯಿಂದ ಜಗತ್ತು ಇನ್ನೂ ಸರಿಯಾಗಿ ಚೇತರಿಸಿಕೊಂಡಿಲ್ಲ. ಅನೇಕ ದೇಶಗಳು ಹೊರ ಬರಲಾಗದೇ ಈಗಲೂ ಪರದಾಡುತ್ತಿವೆ. ಇದೀಗ ಅದೇ ವೈರಸ್​​ಗಳ ತವರೂರು ಚೀನಾದಲ್ಲಿ ಮತ್ತೊಂದು ಅಪಾಯಕಾರಿ ವೈರಸ್ ಪತ್ತೆಯಾಗಿದೆ. ಅದೂ ಸಹ ಕೊರೊನಾದಂತೆ ಬಾವಲಿಗಳಿಂದಲೇ ಹುಟ್ಟಿಕೊಂಡಿದ್ದು, ಮನುಷ್ಯರ ಮೇಲೂ ದಾಳಿ ಮಾಡಲಿದೆ ಅಂತಾ ಸಂಶೋಧಕರು ಎಚ್ಚರಿಸಿದ್ದಾರೆ.

ಈ ಹೊಸ ವೈರಸ್​ಗೆ ವಿಜ್ಞಾನಿಗಳು HKU5-CoV-2 ಎಂದು ಹೆಸರಿಟ್ಟಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ.. COVID-19ಗೆ ಕಾರಣವಾದ ವೈರಸ್ SARS-CoV-2 ನಂತೆಯೇ ಇದು ಮನುಷ್ಯರಿಗೆ ಹರಡುತ್ತದೆ. ಆದರೆ ಇಲ್ಲಿಯವರೆಗೆ HKU5-CoV-2 ಮನುಷ್ಯರಿಗೆ ಹಬ್ಬಿಲ್ಲ.

ಇದನ್ನೂ ಓದಿ: ಮುಗ್ಧ ಮನಸ್ಸಿನ ಮಕ್ಕಳ ಜೊತೆ ಮೋಕ್ಷಿತಾ; ಸ್ಪೆಷಲ್‌ ವಿಡಿಯೋ ನೋಡಿದ ಅಭಿಮಾನಿಗಳು ಭಾವುಕ!

publive-image

ಬಾವಲಿ ಕೊರೊನಾ ವೈರಸ್​ ಬಗ್ಗೆ ಅಧ್ಯಯ ನಡೆಸಿದ್ದ ‘ಬ್ಯಾಟ್‌ವುಮನ್’ (batwoman) ಎಂದು ಕರೆಯಲ್ಪಡುವ ಪ್ರಸಿದ್ಧ ವೈರಾಲಜಿಸ್ಟ್ ಶಿ ಝೆಂಗ್ಲಿ (Shi Zhengli) ಈ ಅಧ್ಯಯನದ ನೇತೃತ್ವ ವಹಿಸಿದ್ದರು. ಜೊತೆಗೆ ಸಂಸ್ಥೆಗಳ ತಜ್ಞರು ಕೂಡ ಅಧ್ಯಯನದಲ್ಲಿ ಭಾಗಿಯಾಗಿದ್ದರು. ಪತ್ತೆಯಾದ ಹೊಸ ವೈರಸ್ ಮೆರ್ಬೆಕೊವೈರಸ್ ಉಪಜಾತಿಗೆ ಸೇರಿದೆ. ಹಾಂಗ್ ಕಾಂಗ್‌ನಲ್ಲಿರುವ ಜಪಾನಿ ಪೈಪಿಸ್ಟ್ರೆಲ್ ಬಾವಲಿಗಳಲ್ಲಿ ಪತ್ತೆಯಾಗಿದ್ದ HKU5 ಕೊರೊನಾ ವೈರಸ್‌ನ ಹೊಸ ವಂಶಾವಳಿ. ಬಾವಲಿಗಳಲ್ಲಿ ಕಾಣಿಸಿಕೊಳ್ಳುವ ಈ ವೈರಸ್​, ಮನುಷ್ಯರಿಗೂ ತಾಗುವ ಅಪಾಯವಿದೆ. ಆದರೆ ಇಲ್ಲಿಯವರೆಗೆ ಯಾರಿಗೂ ವೈರಸ್​ನ ಸೋಂಕು ತಗುಲಿಲ್ಲ. ಮುಂದಿನ ದಿನಗಳಲ್ಲಿ ಅಪಾಯ ಇರಬಹುದು ಅನ್ನೋದು ವಿಜ್ಞಾನಿಗಳ ಎಚ್ಚರಿಕೆ

COVID-19ನ ಪ್ರಮುಖ ರೂಪಾಂತರಗಳು

  • ಅಲ್ಫಾ (Alpha .1.1.7)
  •  ಬೀಟಾ (B.1.351)
  •  ಗಾಮಾ (Gamma.1)
  •  ಡೆಲ್ಟಾ (Delta.1.617.2)
  •  ಓಮಿಕ್ರಾನ್ (B.1.1.529) ಮತ್ತು ಅದರ ಉಪ-ರೂಪಾಂತರಗಳಾದ BA.2, BA.5 ಮತ್ತು XBB

ಕೊರೊನಾ ನಿಯಂತ್ರಣ ಹೇಗೆ..?

  • ಶೇಕಡಾ 60 ರಷ್ಟು ಆಲ್ಕೋಹಾಲ್ ಇರುವ ಹ್ಯಾಂಡ್ ಸ್ಯಾನಿಟೈಸರ್ ಬಳಕೆ
  •  ಕನಿಷ್ಠ 20 ಸೆಕೆಂಡುಗಳ ಕಾಲ ಸೋಪ್ ಮತ್ತು ಕೈಗಳನ್ನು ತೊಳೆಯುವುದು
  •  ಸಾರ್ವಜನಿಕ, ಜನದಟ್ಟಣೆ ಪ್ರದೇಶಗಳಿಂದ ದೂರ ಇರೋದು
  •  ಅನಿವಾರ್ಯ ಸಂದರ್ಭಗಳಲ್ಲಿ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಳ್ಳಿ
  •  ಲಸಿಕೆ ಪಡೆಯುವುದು, ಅಗತ್ಯ ಬಿದ್ದಾಗ ಬೂಸ್ಟರ್ ಡೋಸ್ ಪಡೆಯುವುದು
  •  ಅನಾರೋಗ್ಯ ಅನಿಸಿದರೆ ಮನೆಯಲ್ಲಿರಿ
  •  ಅನಾರೋಗ್ಯ ಪೀಡಿತರೊಂದಿಗೆ ನೇರ ಸಂಪರ್ಕ ತಪ್ಪಿಸಿ

ಇದನ್ನೂ ಓದಿ: Jio ನೀಡಿರುವ ಈ ಆಫರ್​ ಭಾರೀ ಟ್ರೆಂಡಿಂಗ್.. ದಿನಕ್ಕೆ 125 GB..! 4 ಒಳ್ಳೊಳ್ಳೆ ಪ್ಲಾನ್​​ಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment