newsfirstkannada.com

ರಾಮಮಂದಿರ ನಿರ್ಮಾಣದಲ್ಲಿ KGF ವಿಜ್ಞಾನಿ ಟೀಮ್​ನಿಂದ ಬಹುದೊಡ್ಡ ಕೊಡುಗೆ.. ಏನದು ಗೊತ್ತಾ?

Share :

Published January 20, 2024 at 7:42am

    ಕೆಜಿಎಫ್​ನಲ್ಲಿರುವ NIRM ಲ್ಯಾಬ್​ನಲ್ಲಿ ಪರೀಕ್ಷಿಸಿರುವುದು ಏನು?

    ಮಂದಿರ ನಿರ್ಮಾಣದ ಹಿಂದೆ ಕೋಲಾರದ ಬಹುದೊಡ್ಡ ಕೊಡುಗೆ

    ಕರ್ನಾಟಕ, ತೆಲಂಗಾಣ, ಆಂಧ್ರ, ರಾಜಸ್ಥಾನದ ಕಲ್ಲು ಗುಡಿಗೆ ಬಳಕೆ‌

ಕೋಲಾರ: ರಾಮ ಮಂದಿರದಲ್ಲಿ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಇನ್ನೇನು ಒಂದು ದಿನ ಇದ್ದು ದೇವಾಲಯದ ನಿರ್ಮಾಣದಲ್ಲಿ ಕೆಜಿಎಫ್​ನ ಹಿರಿಯ ವಿಜ್ಞಾನಿ ರಾಜನ್ ಬಾಬು ಅವರ ತಂಡದ ಬಹುದೊಡ್ಡ ಕೊಡುಗೆ ಇದೆ.

ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಹಿಂದೆ ಚಿನ್ನದ ನಾಡು ಕೋಲಾರದ ಬಹುದೊಡ್ಡ ಕೊಡುಗೆ ಇದೆ. ಕೆಜಿಎಫ್​ನವರಾದ ಹಿರಿಯ ವಿಜ್ಞಾನಿ ರಾಜನ್ ಬಾಬು ಅವರ ತಂಡ ಮಂದಿರ ನಿರ್ಮಾಣಕ್ಕೆ ಬಳಸಿರುವ ಒಂದೊಂದು ಕಲ್ಲಿನ ಗುಣಮಟ್ಟವನ್ನು ಪರೀಕ್ಷಿಸಿ ಅಂತಿಮ ಮಾಡಿದ್ದಾರೆ. ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ ಕಲ್ಲನ್ನು ಕೋಲಾರದ ವಿಜ್ಞಾನಿ ಅಂತಿಮಗೊಳಿಸಿರುವುದು ಇಲ್ಲಿ ಎಲ್ಲರು ಸ್ಮರಿಸಿಕೊಳ್ಳಬೇಕಾದ ಸಂಗತಿ ಆಗಿದೆ.

ರಾಮ‌ಮಂದಿರ ನಿರ್ಮಾಣಕ್ಕೆ ಬಳಸುವ ಒಂದೊಂದು ಕಲ್ಲಿನ ಗುಣಮಟ್ಟವನ್ನು ಪರೀಕ್ಷಿಸಿ ಅಂತಿಮ ಮಾಡಿದ್ದು ಇದೇ ಚಿನ್ನದ ನಾಡಿನ ಕೆಜಿಎಫ್​ನ ಹಿರಿಯ ವಿಜ್ಞಾನಿ ರಾಜನ್ ಬಾಬು ಟೀಮ್​. ಮಂದಿರಕ್ಕೆ ಬಳಸಿದ ಸಂಪೂರ್ಣ ವಸ್ತುಗಳ ಗುಣಮಟ್ಟವನ್ನು ಕೆಜಿಎಫ್​ನಲ್ಲಿರುವ NIRM ಲ್ಯಾಬ್​ನಲ್ಲಿ ಪರೀಕ್ಷಿಸಲಾಗಿದೆ. ರಾಮ ಮಂದಿರಕ್ಕೆ ಕರ್ನಾಟಕ, ತೆಲಂಗಾಣ, ಆಂಧ್ರ, ರಾಜಸ್ಥಾನ ರಾಜ್ಯಗಳ ಕಲ್ಲನ್ನು ಬಳಕೆ‌ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಮಂದಿರ ನಿರ್ಮಾಣದಲ್ಲಿ KGF ವಿಜ್ಞಾನಿ ಟೀಮ್​ನಿಂದ ಬಹುದೊಡ್ಡ ಕೊಡುಗೆ.. ಏನದು ಗೊತ್ತಾ?

https://newsfirstlive.com/wp-content/uploads/2024/01/KLR_AYODHYA_1.jpg

Load More