ಹಲ್ಲುಗಳ ಹುಳುಕು, ನೋವು, ಮುರಿದ್ರೆ ಚಿಂತೆ ಬೇಡ.. ವಿಜ್ಞಾನಿಗಳಿಂದ ನಿಮಗೆ ಗುಡ್​ನ್ಯೂಸ್​!

author-image
Bheemappa
Updated On
ಹಲ್ಲುಗಳ ಹುಳುಕು, ನೋವು, ಮುರಿದ್ರೆ ಚಿಂತೆ ಬೇಡ.. ವಿಜ್ಞಾನಿಗಳಿಂದ ನಿಮಗೆ ಗುಡ್​ನ್ಯೂಸ್​!
Advertisment
  • ಡೆಂಟಲ್ ​ಕೇರ್​ ಸೆಂಟರ್​ಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುತ್ತಾ?
  • ಯಾವ ನೋವು ಬಂದ್ರೂ ಮನುಷ್ಯನಿಗೆ ಹಲ್ಲು ನೋವು ಬರಬಾರದು
  • ಹಲ್ಲುಗಳ ಹುಳುಕುಗೆ, ನೋವಿಗೆ ಡೆಂಟಲ್ ಸಿಮೆಂಟ್​ ಹಾಕಿಸಬೇಕಿಲ್ಲ

ಮನುಷ್ಯನಿಗೆ ಯಾವ ನೋವು ಬಂದರೂ ಹಲ್ಲು ನೋವು ಬರಬಾರದು ಎಂದು ಅದನ್ನು ಅನುಭವಿಸಿದವ್ರೆ ಹೇಳುತ್ತಾರೆ. ಹಲ್ಲು ನೋವು ಬಂದರೆ ನಾವು ಎಲ್ಲಿ ಇದ್ದರೂ ತಕ್ಷಣಕ್ಕೆ ವೈದ್ಯರನ್ನ ಸಂಪರ್ಕಿಸಿ ಚಿಕಿತ್ಸೆ ಪಡೆಯಲೇಬೇಕು. ಹಲ್ಲು ನೋವು ಕಾಣಿಸಿದರೆ ಡೆಂಟಲ್ ಸಿಮೆಂಟ್ ಅಥವಾ ಪರ್ಯಾಯವಾಗಿ ಡೆಂಟಲ್​ ಇಂಪ್ಲಾಂಟ್ ಸರ್ಜರಿ ಮಾಡುತ್ತಿದ್ದರು. ಆದರೆ ಇನ್ಮೇಲೆ ಇದೆಲ್ಲ ಮಾಡೋ ಅವಶ್ಯಕತೆ ಇಲ್ಲ. ಏಕೆಂದರೆ..

publive-image

ವಿಶ್ವದಾದ್ಯಂತ ಇರುವ ಡೆಂಟಲ್​ಕೇರ್​ ಸೆಂಟರ್​ಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಲಿದೆ. ನೀವು ಹೇಗೆಂದು ಯೋಚಿಸುತ್ತಿದ್ರೆ, ಉತ್ತರ ಮಾತ್ರ ಹೀಗಿದೆ. ಲಂಡನ್​ನ ಕಿಂಗ್ಸ್​ ಕಾಲೇಜಿನ ವಿಜ್ಞಾನಿಗಳು ಪ್ರಯೋಗಲಾಯದಲ್ಲಿ ನೈಸರ್ಗಿಕವಾದಂತ ಮನುಷ್ಯನ ಹಲ್ಲುಗಳು ಮುರಿದು ಹೋದ್ರೆ, ಉದುರಿ ಹೋದರೆ ಅಂತಹ ಹಲ್ಲುಗಳನ್ನು ಮತ್ತೆ ಅದೇ ಸ್ಥಳದಲ್ಲಿ ಬೆಳೆಸಬಹುದು ಎಂಬುದನ್ನು ಇದೀಗ ಕಂಡುಕೊಂಡಿದ್ದಾರೆ.

ಲಂಡನ್​ನ ಕಿಂಗ್ಸ್ ಕಾಲೇಜಿನ ಸಂಶೋಧಕರ ಟೀಮ್ ಹಾಗೂ ನಗರದ ಇಂಪೀರಿಯಲ್ ಕಾಲೇಜಿನ ಸಹಯೋಗದೊಂದಿಗೆ ಇಂತಹ ಸಂಶೋಧನೆ ಸಕ್ಸಸ್ ಆಗಿದೆ. ಇದು ಡೆಂಟಲ್​ ವಿಜ್ಞಾನದಲ್ಲೇ ಅತ್ಯಂತ ದೊಡ್ಡ ಯಶಸ್ವಿಯಾದ ಕಾರ್ಯವಾಗಿದೆ. ಮಾನವ ಹಲ್ಲುಗಳಿಗೆ ಏನಾದರೂ ಆಗಿ ಹಾನಿಯಾದ್ರೆ ಅದಕ್ಕೆ ಡೆಂಟಲ್ ಸಿಮೆಂಟ್ ಅಥವಾ ಪರ್ಯಾಯ ಡೆಂಟಲ್​ ಇಂಪ್ಲಾಂಟ್ ಬಳಕೆ ಮಾಡಲಾಗುತ್ತಿತ್ತು. ಆದ್ರೆ ಈಗ ಇದರ ಬದಲಿಗೆ ಹೊಸ ಹಲ್ಲನ್ನೇ ಬೆಳೆಸಬಹುದಾಗಿದೆ. ಹೊಸದಾಗಿ ಬರುವ ಹಲ್ಲುಗಳು ಸುದೀರ್ಘವಾಗಿ ಬಾಳಿಕೆ ಬರುತ್ತವೆ. ಜೊತೆಗೆ ಸ್ಟ್ರಾಂಗ್ ಆಗಿದ್ದು ಯಾವುದೇ ಸಮಸ್ಯೆಗಳು ಇವುಗಳಿಗೆ ಬರುವುದಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಸಮುದ್ರಸೌತೆ ಬೆಲೆ ಕೋಟಿ ಕೋಟಿ, ಆರೋಗ್ಯಕ್ಕೆ ಅತ್ಯುತ್ತಮ ಆಹಾರ.. ಆದ್ರೆ ದೇಶದಲ್ಲಿ ತಿನ್ನುವಂತಿಲ್ಲ, ಯಾಕೆ?

publive-image

ವಿಜ್ಞಾನಿಗಳು ಕಂಡುಕೊಂಡಂತೆ ವಿಧಾನವು, ಜೈವಿಕ ವಸ್ತುಗಳು (Biomaterials) ಮತ್ತು ಬೆಳವಣಿಗೆಯ ಅಂಶಗಳನ್ನು (Growth factors) ಬಳಕೆ ಮಾಡಲಾಗುತ್ತಿದೆ. ಮಾನವನ ನೈಸರ್ಗಿಕ ಹಲ್ಲು ಇರುವಂತೆ ಮತ್ತೊಂದು ಹಲ್ಲನ್ನು ಈ ಮೇಲಿನ ಅಂಶಗಳು ಅಭಿವೃದ್ಧಿ ಪಡಿಸುತ್ತವೆ. ಈ ವಿಧಾನದ ಪ್ರಕಾರ ಜೈವಿಕವಾಗಿ (Bioengineer) ಹಲ್ಲನ್ನು ಮತ್ತೆ ಪುನರುತ್ಪಾದಕ ಮಾಡುವುದಾಗಿದೆ. ಮುಖ್ಯವಾಗಿ ಹಲ್ಲಿನ ಎಪಿಥೀಲಿಯಂ (Epithelium) ಹಾಗೂ ಮೆಸೆನ್‌ಕೈಮ್ (Mesenchyme) ಮಧ್ಯದ ಕ್ರಿಯೆಗಳನ್ನು ಪುನಃ ಪ್ರಾರಂಭಿಸುವುದು ಅಗತ್ಯ ಎಂದು ಅಧ್ಯಯನ ಹೇಳುತ್ತದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment