ತಹಶೀಲ್ದಾರ್ ಕಚೇರಿಯಲ್ಲಿಯೇ SDA ಸಾ*ವು.. ಡೆತ್​ನೋಟ್​​​ನಲ್ಲಿ ಸಚಿವೆಯ ಪಿಎ ಹೆಸರು ಉಲ್ಲೇಖ

author-image
AS Harshith
Updated On
ತಹಶೀಲ್ದಾರ್ ಕಚೇರಿಯಲ್ಲಿಯೇ SDA ಸಾ*ವು.. ಡೆತ್​ನೋಟ್​​​ನಲ್ಲಿ ಸಚಿವೆಯ ಪಿಎ ಹೆಸರು ಉಲ್ಲೇಖ
Advertisment
  • ಕಚೇರಿಯ ಫ್ಯಾನ್​ಗೆ ನೇಣು ಹಾಕಿಕೊಂಡ SDA
  • ಡೆತ್​ ನೋಟ್​ ಬರೆದಿಟ್ಟುಕೊಂಡು SDA ನೌಕರ ಆ*ತ್ಮಹತ್ಯೆ
  • ಡೆತ್​ನೋಟ್​ನಲ್ಲಿ ಯಾರೆಲ್ಲಾ ಹೆಸರು ಇದೆ ಗೊತ್ತಾ?

ಬೆಳಗಾವಿ: ತಹಶೀಲ್ದಾರ್ ಕಚೇರಿಯಲ್ಲಿಯೇ SDA ಆ*ತ್ಮಹತ್ಯೆ ಮಾಡಿಕೊಂಡ ಅಚ್ಚರಿಯ ಘಟನೆ ನಡೆದಿದೆ. ರಿಸಾಲ್ದಾರ್ ಗಲ್ಲಿಯಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿಯೇ ವ್ಯಕ್ತಿ ನೇಣಿಗೆ ಶರಣಾಗಿದ್ದಾರೆ.

ಆ*ತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನ ರುದ್ರಣ್ಣ ಯಡವಣ್ಣ ಎಂದು ಗುರುತಿಸಲಾಗಿದೆ. ಕಚೇರಿಯ ಫ್ಯಾನ್​ಗೆ ನೇಣು ಹಾಕಿಕೊಂಡು ಪ್ರಾಣಬಿಟ್ಟಿದ್ದಾರೆ.

[caption id="attachment_95411" align="alignnone" width="800"]publive-image ಆ*ತ್ಮಹತ್ಯೆ ಮಾಡಿಕೊಂಡ ರುದ್ರಣ್ಣ ಯಡವಣ್ಣ[/caption]

ಸಾವಿಗೀಡಾಗ ರುದ್ರಣ್ಣ ಯಡವಣ್ಣನವರು ತಹಶೀಲ್ದಾರ್ ಬಸವರಾಜ ನಾಗರಾಳ ಕಚೇರಿಯಲ್ಲಿ SDA ನೌಕರನಾಗಿ  ಕಾರ್ಯನಿರ್ವಹಿಸುತ್ತಿದ್ದರು. ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ನೇರವಾಗಿ ಬರೆಯುವ ಮೂಲಕ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮದುವೆ ಕಾಗದ ಹಂಚಿ ಮನೆಗೆ ಬರುವ ವೇಳೆ ಹ*ತ್ಯೆ.. ನಡು ರಸ್ತೆಯಲ್ಲೇ ಬರ್ಬರವಾಗಿ ಕೊ*ಲೆಯಾದ ಕಾನ್ಸ್​​ಸ್ಟೇಬಲ್

ರುದ್ರಣ್ಣ  ಸಾವಿಗೂ ಮುನ್ನ ವಾಟ್ಸ್​ಆ್ಯಪ್​ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಪಿಎ ಮತ್ತು ತಹಶೀಲ್ದಾರ್​ ಹೆಸರು ಉಲ್ಲೇಖಿಸಿದ್ದಾರೆ. ನನ್ನ ಸಾವಿಗೆ ತಹಶೀಲ್ದಾರ್ ಬಸವರಾಜ ನಾಗರಾಳ ಮತ್ತು ಸಚಿವೆಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಸೋಮು ಕಾರಣ ಅಂತಾ ಬರೆದು ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment