/newsfirstlive-kannada/media/post_attachments/wp-content/uploads/2025/04/sea_cucumber_1.jpg)
ಭೂಮಿ ಮೇಲಿನ ಜೀವಿಗಿಂತ ನೀರಿನಲ್ಲಿರುವ ಜೀವಿಗಳು ಹೆಚ್ಚು ಔಷಧಿ ಗುಣ ಹೊಂದಿರುತ್ತವೆ ಎಂದು ತಿಳಿದ ಮಾನವ ಅವುಗಳ ಮೇಲೆಯೂ ಪ್ರಭಾವ ಬೀರಿದೆ. ಹೀಗೆ ಪ್ರಭಾವದಿಂದ ಕೆಲ ಜೀವಿಗಳು ಅಳಿವಿನಂಚಿನಲ್ಲಿವೆ. ಇದರಲ್ಲಿ ಸಮುದ್ರದ ಸೌತೆ ಕೂಡ ಒಂದಾಗಿದೆ. ಇವುಗಳ ಬೆಲೆ ಕೋಟಿ ಕೋಟಿ ರೂಪಾಯಿ ಆದರೂ ಭಾರತದಲ್ಲಿ ಮಾರಟ ಮಾಡುವಂತಿಲ್ಲ. ಆದರೆ ದೇಶ- ವಿದೇಶಗಳಲ್ಲಿ ಸಮುದ್ರಸೌತೆ ಬೆಲೆ ಮಾತ್ರ ಭಾರೀ ದುಬಾರಿ ಇದ್ದಿದ್ದರಿಂದ ಕಳ್ಳಸಾಗಣೆ ನಡೆಯುತ್ತಿರುತ್ತದೆ.
ಸಮುದ್ರ ಸೌತೆ ಸಾಮಾನ್ಯ ಜೀವಿಯಂತೆ ಎಲ್ಲ ಕಡೆ ಕಂಡುಬರುವುದಿಲ್ಲ. ಒಂದೆರಡು ಸಿಕ್ಕರೂ ಇದು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು. ನೂರಾರು ಕೆ.ಜಿಗಟ್ಟಲೇ ಸಿಕ್ಕರೇ ನೀವು ಕೋಟ್ಯಧೀಶರಾಗಬಹುದು. ಹೀಗಾಗಿಯೇ ಸಮುದ್ರಸೌತೆಗಳನ್ನ ವಿದೇಶಗಳಿಗೆ ಕಳ್ಳಸಾಗಣೆ ಮಾಡಲಾಗುತ್ತದೆ. ಇವು ವಿಶಿಷ್ಟ ಜೀವಿಗಳಾಗಿದ್ದರಿಂದ ಕೆಲವೊಮ್ಮೆ ಸಮುದ್ರ ಈಜುಪಟುಗಳು ತಮ್ಮ ಪ್ರಾಣಪಣಕ್ಕಿಟ್ಟು ಹಿಡಿಯಲು ನೀರಿನ ಆಳಕ್ಕೆ ಹೋಗ್ತಾರೆ.
ಇಡೀ ಸಮುದ್ರಸೌತೆಗಳಲ್ಲೇ ಜಪಾನ್ ಸಮುದ್ರಸೌತೆ ಬಹಳ ವಿಶಿಷ್ಟವಾಗಿರುತ್ತದೆ. ಇವು ಭಾರತದಲ್ಲಿ ತಮಿಳುನಾಡಿನ ಕರಾವಳಿ ಪ್ರದೇಶ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಮಾತ್ರ ತೀರ ಆಳದಲ್ಲಿ ಕಂಡುಬರುತ್ತವೆ. ಸಮುದ್ರದೊಳಗೆ ಇವುಗಳನ್ನು ನೋಡಿದರೆ ನಮಗೆ ನೆನಪಾಗೋದೆ ಸೌತೆಕಾಯಿ. ಇವು ಸೇಮ್ ಟು ಸೇಮ್ ಸೌತೆಕಾಯಿ ಇರುವಂತೆ ಇರುವುದರಿಂದ ಇವುಗಳನ್ನು ಸಮುದ್ರಸೌತೆ ಎಂದು ಕರೆಯುತ್ತಾರೆ. ಸಿಲಿಂಡರ್ನಂತೆ ಇದ್ದು ತುಂಬಾ ಮೃದುವಾಗಿರುತ್ತವೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ
ಜಲಚರ ಪರಿಸರ ವ್ಯವಸ್ಥೆಗೆ ಸಮುದ್ರ ಸೌತೆ ಬಹಳ ಮುಖ್ಯವಾಗಿದ್ದು ಪರಿಸರ ರಕ್ಷಣೆ ಮಾಡುತ್ತವೆ. ಸಮುದ್ರದ ಆಳದಲ್ಲಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದರ ಜೊತೆಗೆ ಇವುಗಳಲ್ಲಿ ಔಷಧೀಯ ಗುಣ ಇರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಸಮುದ್ರ ಸೌತೆಗಳನ್ನ ಹೆಚ್ಚಾಗಿ ಚೀನಾ ಹಾಗೂ ದಕ್ಷಿಣ ಏಷ್ಯಾ ಭಾಗದಲ್ಲಿ ಔಷಧಕ್ಕಾಗಿ ಬಳಸಲಾಗುತ್ತದೆ. ಇವುಗಳನ್ನು ಮೀನಿನಂತೆ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಮನುಷ್ಯರಲ್ಲಿ ಹೆಚ್ಚುತ್ತದೆ. ಸಂಧಿವಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಸಮುದ್ರಸೌತೆ ಉತ್ತಮ ಆಹಾರ ಎಂದು ಹೇಳಲಾಗುತ್ತದೆ.
ಇತರ ಜೀವಿಗಳಿಗೆ ಹೋಲಿಸಿದರೆ ಇವು ಅಧಿಕ ಪ್ರಮಾಣದ ಪ್ರೋಟೀನ್ ಹೊಂದಿರುವುದರಿಂದ ಹೆಚ್ಚಾಗಿ ಶ್ರೀಮಂತರು ಆಹಾರವಾಗಿ ಸೇವಿಸುತ್ತಾರೆ. ಇದಲ್ಲದೆ ಸಮುದ್ರಸೌತೆಗಳ ಚರ್ಮ ಫ್ಯೂಕೋಸಿಲೇಟೆಡ್ (Fucosylated), ಗ್ಲೈಕೋಸಾಮಿನೋಗ್ಲೈಕನ್ (glycosaminoglycan) ಎಂಬ ರಾಸಾಯನಿಕವನ್ನು ಹೆಚ್ಚಿಗೆ ಹೊಂದಿರುತ್ತವೆ. ಇದೇ ರಾಸಾಯನಿಕ ಸಂಧಿವಾತದಂತಹ ಕೀಲು ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಇದನ್ನೂ ಓದಿ:ಖರ್ಜೂರ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು.. ಇವರು ತಿನ್ನಲೇಬಾರದಾ..?
ಔಷಧ ಕಂಪನಿಗಳಲ್ಲಿ ಉಪಯೋಗ
ಯುರೋಪ್ ರಾಷ್ಟ್ರಗಳಲ್ಲಿ ಇವುಗಳನ್ನು ಕೆಲ ಕ್ಯಾನ್ಸರ್ ಚಿಕಿತ್ಸೆ ಹಾಗೂ ರಕ್ತ ಹೆಪ್ಪುಗಟ್ಟುವಿಕೆ ತಡೆಯಲು ಬಳಸಲಾಗುತ್ತದೆ. ಒಂದು ಕಾಲದಲ್ಲಿ ಆಹಾರದಲ್ಲಿ ಬಳಸಲಾಗುತ್ತಿದ್ದ ಇವುಗಳನ್ನು ಈಗ ಯೋರೋಪ್ ರಾಷ್ಟ್ರಗಳಲ್ಲಿ ಔಷಧ ಕಂಪನಿಗಳಲ್ಲಿ ಉಪಯೋಗಿಸಲಾಗುತ್ತದೆ. ಇದರಿಂದಲೇ ಇವುಗಳಿಗೆ ಎಲ್ಲೆಡೆ ಭಾರೀ ಬೇಡಿಕೆ ಇದೆ. ಕೆಲ ದೇಶಗಳು ಹೆಚ್ಚಾಗಿ ಇವುಗಳನ್ನು ಬಳಸಿದ್ದರಿಂದ ಈ ಪ್ರಭೇದಗಳು ಅಳಿವಿನಂಚಿಗೆ ತಲುಪಿವೆ.
ಕೋಟಿ ಕೋಟಿ ರೂಪಾಯಿಗೆ ಬೆಲೆ ಬಾಳಿದರೂ ಭಾರತದ ಮಾರುಕಟ್ಟೆಯಲ್ಲಿ ಇವುಗಳನ್ನು ಮಾರಾಟ ಮಾಡುವಂತಿಲ್ಲ. ಸಂರಕ್ಷಿತ ಜೀವಿಗಳ ಜಾತಿಗಳ ಪಟ್ಟಿಗೆ ಸೇರಿಸಿದ್ದರಿಂದ ಮಾರಾಟ ಮಾಡಿದ್ರೆ ಕಾನೂನು ಬಾಹಿರವಾಗುತ್ತದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಅವುಗಳನ್ನು ಹಿಡಿಯುವುದು, ಮಾರಾಟ ಮಾಡುವುದು, ರಫ್ತು ಮಾಡುವುದು ಕಾನೂನುಬಾಹಿರವಾಗಿದೆ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳಿಗೆ ಬೇಡಿಕೆ ಇರುವುದರಿಂದ ಕಳ್ಳಸಾಗಣೆಕೆ ನಡೆಯುತ್ತಲೇ ಇರುತ್ತದೆ ಎಂದು ಹೇಳಲಾಗುತ್ತದೆ.
The @IndiaCoastGuard intercepts an illegal consignment of sea cucumbers worth Rs 80 lakh off South Uchipuli near Rameshwaram. Acting on intelligence, ACV H-197 recovers five drums containing 200 kg of sea cucumbers. pic.twitter.com/R01R4erbDJ
— All India Radio News (@airnewsalerts)
The @IndiaCoastGuard intercepts an illegal consignment of sea cucumbers worth Rs 80 lakh off South Uchipuli near Rameshwaram. Acting on intelligence, ACV H-197 recovers five drums containing 200 kg of sea cucumbers. pic.twitter.com/R01R4erbDJ
— All India Radio News (@airnewsalerts) March 31, 2025
">March 31, 2025
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ