ಬಂಗಾರ, ಮುತ್ತು, ರತ್ನ, ಹವಳ.. 3 ಕೋಣೆ, 6 ಪೆಟ್ಟಿಗೆಗಳಲ್ಲಿ ರತ್ನ ಭಂಡಾರದ ಶೋಧ ಕಾರ್ಯ ಹೇಗಿದೆ?

author-image
Veena Gangani
Updated On
ರತ್ನ ಭಂಡಾರದ ರಹಸ್ಯ.. 46 ವರ್ಷದ ಬಳಿಕ ಬಾಗಿಲು ತೆರೆದಾಗ ನಿಗೂಢ ಶಬ್ಧ, ವಿಸ್ಮಯ; ಆಗಿದ್ದೇನು?
Advertisment
  • ರತ್ನ ಭಂಡಾರ ಕೊಠಡಿಯಲ್ಲಿ ಏನಿದೆ ಎಂಬುದೇ ಸಾಕಷ್ಟು ಭಕ್ತರ ಕುತೂಹಲ
  • ಭಂಡಾರ ಕೊಠಡಿಯಲ್ಲಿ ಶೋಧ ನಡೆಸುತ್ತಿರುವ 16 ಜನರ ವಿಶೇಷ ತಂಡ
  • 6 ಪೆಟ್ಟಿಗೆಗಳನ್ನು ರತ್ನ ಭಂಡಾರ ಕೊಠಡಿಯೊಳಗೆ ಸಾಗಿಸಿದ ಸಿಬ್ಬಂದಿ

ಒಡಿಶಾದ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ ಈಗ ಇಡೀ ದೇಶದ ಕುತೂಹಲದ ಕೇಂದ್ರ ಬಿಂದುವಾಗಿದೆ.  ಬರೋಬ್ಬರಿ 46 ವರ್ಷಗಳ ಬಳಿಕ ಒಡಿಶಾದ ಪುರಿ ಜಗನ್ನಾಥ ಮಂದಿರದಲ್ಲಿರುವ ರತ್ನ ಭಂಡಾರದ ಕೊಠಡಿ ಓಪನ್​ ಮಾಡಲಾಗಿದೆ. ಮಧ್ಯಾಹ್ನ 1.48ರ ಶುಭ ಮುಹೂರ್ತದಲ್ಲಿ ರತ್ನ ಭಂಡಾರದ ಒಟ್ಟು 4 ಬಾಗಿಲುಗಳನ್ನು ಓಪನ್​ ಮಾಡಲಾಗಿದೆ.  ಇದೀಗ ರತ್ನ ಭಂಡಾರ ಕೋಣೆಯಲ್ಲಿ ಅಧಿಕಾರಿಗಳಿಂದ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ:REAKING: ಪುರಿ ಜಗನ್ನಾಥನ ರತ್ನ ಭಂಡಾರದ ಬಾಗಿಲು ತೆಗೆಯುತ್ತಿದ್ದಂತೆ ಮೂರ್ಛೆ ಹೋದ ಎಸ್‌ಪಿ

publive-image

ಈ ರತ್ನ ಭಂಡಾರವನ್ನು ತೆರೆಯರು 16 ಜನರ ವಿಶೇಷ ತಂಡ ರಚನೆ ಮಾಡಲಾಗಿತ್ತು. ರತ್ನ ಭಂಡಾರ ಕೊಠಡಿಯಲ್ಲಿ ಏನಿದೆ ಎಂಬುದೇ ಸಾಕಷ್ಟು ಜನರಿಗೆ ಕುತೂಹಲ ಇತ್ತು. ಈ ರಹಸ್ಯವನ್ನು ಅರಿಯಲು ಲಕ್ಷಾಂತರ ಕೋಟಿ ಭಕ್ತರು ಕುತೂಹಲದಿಂದ ಕಾಯುತ್ತಿದ್ದಾರೆ. ಹೀಗಾಗಿ ಪುರಿ ಜಗನ್ನಾಥ ದೇವಾಲಯದ ಹೊರಗಡೆ ನೂರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿಕೊಂಡಿದ್ದಾರೆ. ಹೀಗಾಗಿ ದೇಗುಲದ ಬಳಿ ಬಂದ ಭಕ್ತರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

ಇದನ್ನೂ ಓದಿ:ನೆರಳು ಎಲ್ಲಿಯೂ ಬೀಳಲ್ಲ, ಗಾಳಿಯ ವಿರುದ್ಧ ಹಾರಾಡುತ್ತೆ ಧ್ವಜ.. ವಿಜ್ಞಾನಕ್ಕೂ 5 ಸವಾಲು ಪುರಿ ಜಗನ್ನಾಥನ ಸನ್ನಿಧಿ..!

publive-image

ರಹಸ್ಯ ಕೋಣೆಯಲ್ಲಿ ವಸ್ತುಗಳನ್ನ ಸಾಗಿಸಲು ದೇವಾಲಯದ ಸಮಿತಿ ಒಟ್ಟು ಮರ ಹಾಗೂ ಕಬ್ಬಿಣದಿಂದ ತಯಾರಾಗಿರೋ 6 ಪೆಟ್ಟಿಗೆಗಳನ್ನ ತೆಗೆದುಕೊಂಡು ಹೋಗಿದೆ. ಅಲ್ಲಿ ಸಿಕ್ಕಿರುವ ಅತ್ಯಮೂಲ್ಯ ವಸ್ತುಗಳನ್ನು ಸಾಗಿಸೋದಕ್ಕೆ ಬಳಕೆ ಮಾಡಲಾಗುತ್ತದೆ. ಪುರಿ ಜಗನ್ನಾಥ ದೇವಸ್ಥಾನದಲ್ಲಿ ಒಟ್ಟು ಮೂರು ರಹಸ್ಯ ಕೋಣೆಗಳು ಇವೆ. ಮೊದಲ ಕೋಣೆಯಲ್ಲಿವೆ ದೇವಸ್ಥಾನದ ಆಭರಣಗಳು ಇವೆಯಂತೆ. 2ನೇ ಕೋಣೆಯಲ್ಲಿವೆ ಅಪಾರವಾದ ವಜ್ರ, ವೈಡೂರ್ಯ ಇವೆ. ಇನ್ನ, ರಹಸ್ಯವಾಗಿಯೋ ಉಳಿದಿದೆ ದೇಗುಲದ 3ನೇ ಕೋಣೆ ಇದಾಗಿದೆ.

publive-image

ರತ್ನ ಭಂಡಾರ ರಹಸ್ಯ

ರಹಸ್ಯ ಕೋಣೆ 01

ಹೊರಗಿನ ಕೋಣೆಯಲ್ಲಿವೆ ದೇವಸ್ಥಾನದಲ್ಲಿ ಬಳಸುವ ಆಭರಣಗಳು
ದೇವಸ್ಥಾನದಲ್ಲಿ ಬಳಸುವ ಚಿನ್ನ, ಬೆಳ್ಳಿಯ ಆಭರಣಗಳು ಲಭ್ಯವಿದೆ

ರಹಸ್ಯ ಕೋಣೆ 02

ನಕಲಿ ಕೀ ಬಳಸಿ ಕೋಣೆಯನ್ನು ಓಪನ್ ಮಾಡಲಾಗಿದೆ
ಕೋಣೆಯಲ್ಲಿವೆ ಬಂಗಾರ, ಮುತ್ತು, ರತ್ನ, ಹವಳ, ಬೆಳ್ಳಿ ಸಾಮಾಗ್ರಿಗಳು
ರಾಜರು ದಾನವಾಗಿ ಕೊಟ್ಟಿರೋ ಅಪಾರವಾದ ವಜ್ರ-ವೈಢೂರ್ಯಗಳಿವೆ
1979ರಲ್ಲಿ ಬರೋಬ್ಬರಿ 70 ದಿನಗಳ ಕಾಲ ಸಂಪತ್ತಿನ ಮೌಲ್ಯ ಲೆಕ್ಕಾಚಾರ
ಸಂಪತ್ತಿನ ಎಣಿಕೆ ಕಾರ್ಯ ನಡೆಸುತ್ತಿರೋ ಸಮಿತಿಯ 16 ಜನರ ತಂಡ

ರಹಸ್ಯ ಕೋಣೆ 03

ರಹಸ್ಯವಾಗಿಯೋ ಉಳಿದಿರೋ ದೇಗುಲದ 3ನೇ ಕೋಣೆ
ಈ ಮೂರನೇ ರತ್ನಭಂಡಾರ ಕೋಣೆಗಿದೆ ‘ನಾಗಬಂಧ’ ರಕ್ಷಣೆ
ಇದೇ ಕೊಠಡಿಯಿಂದ ಹಿಂದೆ ಹಾವು ಬುಸುಗುಡುವ ಶಬ್ಧ ಕೇಳಿತ್ತಂತೆ
ಈ ಕೋಣೆಯಿಂದ ಸುರಂಗ ಮಾರ್ಗವೂ ಇದೆ ಎಂಬ ನಂಬಿಕೆ ಇದೆ
ಇದುವರೆಗೂ ಯಾರ ಪ್ರವೇಶಕ್ಕೂ ಸಾಧ್ಯವಾಗಿದ ನಿಗೂಢ ಕೊಠಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment