/newsfirstlive-kannada/media/post_attachments/wp-content/uploads/2025/02/NAMMA-METRO-2-1.jpg)
ಬೆಂಗಳೂರು ಜನರ ಸಂಚಾರ ನಾಡಿ ‘ನಮ್ಮ ಮೆಟ್ರೋ’ ದಿನೇ ದಿನೆ ಅಪ್ಡೇಟ್ ಆಗ್ತಿದೆ. ಲೇಟೆಸ್ಟ್ ವಿಚಾರ ಏನೆಂದರೆ ಹಳದಿ ಮಾರ್ಗಕ್ಕೆ ಎರಡನೇ ಚಾಲಕ ರಹಿತ ರೈಲು ಸೇರ್ಪಡೆಯಾಗಿದೆ. ಭಾರತ ನಿರ್ಮಿತ ಮೊದಲ ಡ್ರೈವರ್ಲೆಸ್ ಮೆಟ್ರೋ ಇದಾಗಿದೆ.
ಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸಲು ಹಳದಿ ಮಾರ್ಗಕ್ಕೆ ಚಾಲಕ ರಹಿತ ರೈಲಿನ 6 ಬೋಗಿಗಳು ಭಾನುವಾರ ಬೆಂಗಳೂರು ತಲುಪಿವೆ. ಹೆಬ್ಬಗೋಡಿ ಡಿಪೋದಲ್ಲಿ ಜೋಡಿಸಿಕೊಳ್ಳುವ ಕಾರ್ಯ ನಡೆದಿದೆ. ಆರ್.ವಿ ರಸ್ತೆ-ಬೊಮ್ಮಸಂದ್ರ 19.15 ಕಿಲೋ ಮೀಟರ್ ಮಾರ್ಗಕ್ಕಾಗಿ ಚೀನಾದ ಸಿಆರ್ಆರ್ಸಿ ಮೊದಲ ರೈಲನ್ನು ಪೂರೈಸಿತ್ತು.
ಇದೀಗ ಎರಡನೇ ರೈಲನ್ನು ಕೋಲ್ಕತ್ತದ ತಿತಿಘರ್ ರೈಲ್ ಸಿಸ್ಟಂ ಲಿ. ಪೂರೈಸಿದೆ. ರಸ್ತೆ ಮಾರ್ಗದ ಮೂಲಕ ರೈಲಿನ ಬೋಗಿಗಳು ಬೆಂಗಳೂರು ತಲುಪಿವೆ. ಈ ರೈಲನ್ನು ಬಳಸಿಕೊಂಡು ಹಳದಿ ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆ ನಡೆಸಲಾಗುತ್ತದೆ. ಅಂತಿಮ ಸಿಗ್ನಲಿಂಗ್ ಪರೀಕ್ಷೆ ಮುಗಿದ ಬಳಿಕ ಮಾರ್ಚ್ನಲ್ಲಿ ಇತರೆ ಪರೀಕ್ಷೆಗಳು ನಡೆಯಲಿವೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್.. ಪ್ರಯಾಣ ದರ 46% ಹೆಚ್ಚಳ; ಎಷ್ಟಿತ್ತು? ನಾಳೆಯಿಂದ ಎಷ್ಟಾಗುತ್ತೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ