/newsfirstlive-kannada/media/post_attachments/wp-content/uploads/2025/04/Madhu-Bangarappa-2nd-puc-Exam-result.jpg)
ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. 2024-25ನೇ ಸಾಲಿನಲ್ಲಿ ಶೇಕಡಾ 73.45 ರಷ್ಟು ವಿದ್ಯಾರ್ಥಿಗಳು ಈ ಬಾರಿ ಉತೀರ್ಣರಾಗಿದ್ದಾರೆ. ಅದರಲ್ಲೂ ಪ್ರಮುಖವಾಗಿ ಈ ಬಾರಿ ಕಲಾ, ವಾಣಿಜ್ಯ ವಿಭಾಗಕ್ಕಿಂತ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಶೇಕಡಾ 82.54ರಷ್ಟು ಮಕ್ಕಳು ಪಾಸ್ ಆಗಿದ್ದಾರೆ.
ಇದನ್ನೂ ಓದಿ:Newsfirst ಜ್ಞಾನ ಸಂಗಮಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಏನು ಉಪಯೋಗ?
ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟ ಮಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಬಾರಿ ಪಾಸ್ ಆಗದ ವಿದ್ಯಾರ್ಥಿಗಳಿಗೆ ಒಂದು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಫಲಿತಾಂಶದಲ್ಲಿ ಯಾರ್ ಯಾರು ಪರೀಕ್ಷೆ ಪಾಸ್ ಆಗಿದ್ದಾರೆ ಅಂತಹವರ ಲಿಸ್ಟ್ ಮಾತ್ರ ಹಾಕಿದ್ದೇವೆ. ಫೇಲ್ ಅಂತ ಈಗಲೇ ಹೇಳೋದಕ್ಕೆ ಬರೋದಿಲ್ಲ ಎಂದರು.
ಏಪ್ರಿಲ್ 24ರಿಂದ ಮೇ 8ರವರೆಗೆ ದ್ವಿತೀಯ ಪಿಯು ಪರೀಕ್ಷಾ -2 ನಡೆಯುತ್ತೆ. ಎರಡನೇ ಮತ್ತು ಮೂರನೇ ಎಕ್ಸಾಂ ಡೇಟ್ ಕೂಡ ಈಗಲೇ ಅನೌನ್ಸ್ ಮಾಡಿದ್ದೇವೆ. ಅನುತೀರ್ಣರಾದ ವಿದ್ಯಾರ್ಥಿಗಳು ಈಗಲೇ 2 ಹಾಗೂ 3ನೇ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಿ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ದ್ವಿತೀಯ PU ಫಲಿತಾಂಶ.. ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ಪಾಸ್! ಯಾವ ಜಿಲ್ಲೆಗೆ ಪ್ರಥಮ ಸ್ಥಾನ?
ಇದೇ ವೇಳೆ ಈ ಬಾರಿ ಮಾತ್ರ ದ್ವಿತೀಯ ಪಿಯು ಪರೀಕ್ಷೆಯ 2ನೇ ಎಕ್ಸಾಂ ಮತ್ತು 3ನೇ ಎಕ್ಸಾಂ ಪರೀಕ್ಷಾ ಶುಲ್ಕ ಇರೋದಿಲ್ಲ. ಮಕ್ಕಳಿಗೆ ಆರ್ಥಿಕ ಹೊರೆ ಕಡಿಮೆ ಮಾಡಲು ಈ ಬಾರಿ ಎಕ್ಸಾಂ ಶುಲ್ಕ ಇರುವುದಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಜೆ ಸ್ಪೆಶಲ್ ಕ್ಲಾಸ್ ಮಾಡಲು ಮಾಹಿತಿ ಕೊಟ್ಟಿದ್ದೇವೆ. ಶಿಕ್ಷಣ ಇಲಾಖೆಯ ಈ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ಯಾರು ಈ ಬಾರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿಲ್ಲ ಅಂತಹವರಿಗೆ ಇನ್ನು ಎರಡು ಅವಕಾಶ ಇದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ