ಫಲಿತಾಂಶ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಪ್ರಕಟ.. ಪರೀಕ್ಷಾ ವೇಳಾಪಟ್ಟಿ..!

author-image
Ganesh
Updated On
ಮುಟ್ಟು ಆಗಿದ್ದಕ್ಕೆ ವಿದ್ಯಾರ್ಥಿನಿಯನ್ನ ಕ್ಲಾಸ್ ರೂಂ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಶಾಲೆ..!
Advertisment
  • ಪರೀಕ್ಷೆ -2 ಮಾತ್ರವಲ್ಲ ಪರೀಕ್ಷೆ 3ರ ದಿನಾಂಕವೂ ಪ್ರಕಟ
  • ಜೂನ್ 9 ರಿಂದ 21ರವರೆಗೆ ಪರೀಕ್ಷೆ -3 ನಡೆಯಲಿದೆ
  • ಪರೀಕ್ಷೆ ಬರೆಯಲು ಯಾವುದೇ ಶುಲ್ಕ ಇರಲ್ಲ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ನಿನ್ನೆ ಬಂದಿದೆ. ಬೆನ್ನಲ್ಲೇ ಪರೀಕ್ಷೆ-2 ಮತ್ತು 3 ವೇಳಾಪಟ್ಟಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ. ಪರೀಕ್ಷೆಗೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ ಎಂದು ತಿಳಿಸಿದ್ದಾರೆ.

ಏಪ್ರಿಲ್ 24 ರಿಂದ ಮೇ 8ರವರೆಗೆ ದ್ವಿತೀಯ ಪಿಯುಸಿ 2 ಪರೀಕ್ಷೆ ನಡೆಸಲಾಗುವುದು. ವಿಷಯವಾರು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಜೂನ್ 9 ರಿಂದ 21ರವರೆಗೆ ಪರೀಕ್ಷೆ -3 ನಡೆಯಲಿದ್ದು, ವೇಳಾಪಟ್ಟಿಯನ್ನು ಮುಂದೆ ಪ್ರಕ ಟಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಉಡುಪಿ ಜಿಲ್ಲೆಗೆ ಮೊದಲ ಸ್ಥಾನ.. ದ್ವಿತೀಯ PU ಫಲಿತಾಂಶದಲ್ಲಿ ನಿಮ್ಮ ಜಿಲ್ಲೆಗೆ ಯಾವ ಸ್ಥಾನ?

ಈ ಪರೀಕ್ಷೆಗಳಲ್ಲಿ ಯಾವುದೇ ನಿರ್ದಿಷ್ಟ ವಿಷಯ ಅಥವಾ ಎಲ್ಲಾ ವಿಷಯಗಳಿಗೂ ಮತ್ತೆ ಪರೀಕ್ಷೆ ಬರೆದರೂ ಯಾವುದೇ ವಿದ್ಯಾರ್ಥಿ ಪರೀಕ್ಷಾ ಶುಲ್ಕ ಪಾವತಿಸುವಂತಿಲ್ಲ. ಸಂಬಂಧ ಈಗಷ್ಟೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಅಂತಾ ತಿಳಿಸಿದ್ದಾರೆ.

ಪರೀಕ್ಷೆ-2 ವೇಳಾಪಟ್ಟಿ

  • ಏಪ್ರಿಲ್ 24: ಕನ್ನಡ, ಅರೇಬಿಕ್
  • ಏಪ್ರಿಲ್ 25: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ
  • ಏಪ್ರಿಲ್ 26: ಇತಿಹಾಸ, ಭೌತಶಾಸ್ತ್ರ
  • ಏಪ್ರಿಲ್ 28 : ಭೂಗೋಳಶಾಸ್ತ್ರ ಮನಃ ಶಾಸ್ತ್ರ, ರಾಸಾಯನಶಾಸ್ತ್ರ ಮೂಲಗಣಿತ
  • ಏಪ್ರಿಲ್ 29: ಇಂಗ್ಲಿಷ್
  • ಮೇ 2: ತರ್ಕಶಾಸ್ತ್ರ ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ
  • ಮೇ 3: ಸಮಾಜಶಾಸ್ತ್ರ ಭೂಗರ್ಭಶಾಸ್ತ್ರ ವಿದ್ಯುನ್ಮಾನ ಶಾಸ್ತ್ರ ಗಣಕ ವಿಜ್ಞಾನ
  • ಮೇ 5: ಅರ್ಥಶಾಸ್ತ್ರ
  • ಮೇ 6: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
  • ಮೇ 7: ಹಿಂದಿ
  • ಮೇ 8: ತಮಿಳು, ತೆಲುಗು, ಉರ್ದು, ಮಲಯಾಳಂ, ಮರಾಠಿ, ಸಂಸ್ಕೃತ, ಫ್ರೆಂಚ್, ಎನ್‌ಎಸ್‌ಕ್ಯೂಎಫ್‌

ಇದನ್ನೂ ಓದಿ: ರಾಜ್ಯಕ್ಕೆ ಪ್ರಥಮ ಬಂದ ಲಾರಿ ಡ್ರೈವರ್ ಪುತ್ರಿ.. ಸಂಜನಾ ಬಾಯಿ ಮುಂದಿನ ಆಸೆ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment