newsfirstkannada.com

PU Result: ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ.. ರಿಸಲ್ಟ್​ ಚೆಕ್ ಮಾಡೋದು ಹೇಗೆ?

Share :

Published April 9, 2024 at 6:59pm

    ಈ ಬಾರಿ ಎಷ್ಟು ಲಕ್ಷ ವಿದ್ಯಾರ್ಥಿಗಳು ಪಿಯು ಪರೀಕ್ಷೆಯನ್ನು ಬರೆದಿದ್ದಾರೆ?

    ನಾಳೆ ಪರೀಕ್ಷೆ- 1ರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಘೋಷಣೆ

    ಬೆಳಗ್ಗೆ 10 ಗಂಟೆಗೆ ಮಾಧ್ಯಮಗೋಷ್ಠಿ ನಡೆಸುವ ಮಂಡಳಿಯ ಅಧ್ಯಕ್ಷರು

ಬೆಂಗಳೂರು: 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಬಿಡುಗಡೆ ಮಾಡಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಹೇಳಿದ್ದಾರೆ.

ನಾಳೆ ಅಂದರೆ ಏಪ್ರಿಲ್ 10 ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಧ್ಯಮಗೋಷ್ಠಿ ಕರೆದಿದ್ದು ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಿದೆ. 2024ರ ಮಾರ್ಚ್​ 1 ರಿಂದ 22ರ ವರೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ- 1 ಅನ್ನು ನಡೆಸಲಾಗಿತ್ತು. ಈ ಬಾರಿ 6.98 ಲಕ್ಷವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ವರ್ಷದಿಂದಲೇ 3 ಬಾರಿ ಪರೀಕ್ಷೆ ಬರೆಯುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ.. ಬೀದಿ ಬದಿಯಲ್ಲಿ ಹಣ್ಣುಗಳನ್ನ ಕಟ್ ಮಾಡಿ ಮಾರಾಟ ಬ್ಯಾನ್‌; ಕಾರಣವೇನು?

ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವ ಕಾರ್ಯ ಮುಕ್ತಾಯಗೊಂಡಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ನಾಳೆ ಬೆಳಗ್ಗೆ 11 ಗಂಟೆ ನಂತರ ವಿದ್ಯಾರ್ಥಿಗಳು ವೆಬ್​​ಸೈಟ್​ನಲ್ಲಿ ವೀಕ್ಷಣೆ ಮಾಡಬಹುದು ಎಂದು ಇಲಾಖೆ ಮಾಹಿತಿ ನೀಡಿದೆ.

ವೆಬ್​ಸೈಟ್​; https://karresults.nic.in

ವೆಬ್​ಸೈಟ್​ ಲಿಂಕ್ ಕ್ಲಿಕ್ ಮಾಡಿದ ನಂತರ ದ್ವಿತೀಯ ಪಿಯುಸಿ ಎನ್ನವುದನ್ನ ಆಯ್ಕೆ ಮಾಡಿ. ನಂತರ ರೋಲ್ ನಂಬರ್, ಹೆಸರನ್ನು ನೋಂದಾಯಿಸಿ ಓಕೆ ಕ್ಲಿಕ್ ಮಾಡಿದರೆ ನಿಮ್ಮ ಪರೀಕ್ಷೆಯ ಫಲಿತಾಂಶ ತೋರಿಸುತ್ತದೆ.

ರಾಜ್ಯದಲ್ಲಿ ಈ ಸಲ ಒಟ್ಟು 6,98,627 ವಿದ್ಯಾರ್ಥಿಗಳು ಎಕ್ಸಾಂ ಬರೆಯಲು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 3,30,644 ವಿದ್ಯಾರ್ಥಿಗಳು, 3,67,980 ವಿದ್ಯಾರ್ಥಿನಿಯರು ಬರೆದಿದ್ದಾರೆ. ಮಾರ್ಚ್​ 25 ರಿಂದಲೇ ಮೌಲ್ಯಮಾಪನ ಪರೀಕ್ಷೆ ಪ್ರಾರಂಭಿಸಲಾಗಿತ್ತು. ಸದ್ಯ ನಾಳೆಗೆ ರಸಲ್ಟ್​ ಅನ್ನು ವೆಬ್​ಸೈಟ್​ನಲ್ಲಿ ಅನೌನ್ಸ್ ಮಾಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PU Result: ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ.. ರಿಸಲ್ಟ್​ ಚೆಕ್ ಮಾಡೋದು ಹೇಗೆ?

https://newsfirstlive.com/wp-content/uploads/2024/02/PUC_EXAMS.jpg

Load More