Advertisment

ಮೈಸೂರಲ್ಲಿ 3 ದಿನಕ್ಕೆ ಡೆಂಘೀಗೆ 2ನೇ ಬಲಿ; ಜಯದೇವ ಹೃದ್ರೋಗ ಆಸ್ಪತ್ರೆ ಸಿಬ್ಬಂದಿ ಸಾವು

author-image
Veena Gangani
Updated On
ಮೈಸೂರಲ್ಲಿ 3 ದಿನಕ್ಕೆ ಡೆಂಘೀಗೆ 2ನೇ ಬಲಿ; ಜಯದೇವ ಹೃದ್ರೋಗ ಆಸ್ಪತ್ರೆ ಸಿಬ್ಬಂದಿ ಸಾವು
Advertisment
  • ಬಿರುಗಾಳಿಯಂತೆ ಅಬ್ಬರ ಶುರು ಮಾಡಿರೋ ಡೆಂಘೀ ಸಾವಿನ ನರ್ತನ
  • ರಾಜ್ಯದಲ್ಲಿ ದಿನ ಕಳೆದಂತೆ ಡೆಂಘೀ ಮಹಾಮಾರಿಯ ಅಬ್ಬರ ಜೋರು
  • ಮೂರು ದಿನಗಳ ಹಿಂದೆಯಷ್ಟೇ ಡೆಂಘೀಗೆ ಬಲಿಯಾದ ಆರೋಗ್ಯಾಧಿಕಾರಿ

ಮೈಸೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಮಹಾಮಾರಿಯ ಅಬ್ಬರ ಜೋರಾಗುತ್ತಿದೆ. ಪ್ರತಿ ದಿನ ನೂರಾರು ಮಂದಿ ಡೆಂಘೀ ಜ್ವರಕ್ಕೆ ತುತ್ತಾಗುತ್ತಿದ್ದರೆ, ಸಾವಿನ ಸಂಖ್ಯೆ ಕೂಡ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ. ಇದೀಗ ಡೆಂಘೀ ಮಹಾಮಾರಿಗೆ ಮೈಸೂರಿನಲ್ಲಿ ಎರಡನೇ ಬಲಿಯಾಗಿದೆ.

Advertisment

ಇದನ್ನೂ ಓದಿ:ಬೆಂಗಳೂರಲ್ಲಿ ಸದ್ದಿಲ್ಲದೇ ಡೆಂಘೀ ಸವಾರಿ; ಕಡಿವಾಣ ಹಾಕೋ ಸಾಹಸದಲ್ಲೂ ಪಾಲಿಕೆ ಯಡವಟ್ಟು; ಆಗಿದ್ದೇನು?

ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಡಾಟಾ ಎಂಟ್ರಿ ಆಪರೇಟರ್ ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆ ಸಿಬ್ಬಂದಿ ಲಲಿತ ಎಂಬುವವರು ಮೃತಪಟ್ಟಿದ್ದಾರೆ. ಮೂರು ದಿನಗಳ ಹಿಂದೆ ಹುಣಸೂರು ಸಮುದಾಯ ಆರೋಗ್ಯಾಧಿಕಾರಿ ಮೃತಪಟ್ಟಿದ್ದರು. ಈಗ ಜಯದೇವ ಹೃದ್ರೋಗದ ಡೇಟಾ ಎಂಟ್ರಿ ಮಾಡುತ್ತಿದ್ದ ಆಸ್ಪತ್ರೆ ಸಿಬ್ಬಂದಿ ಮಹಾಮಾರಿ ಡೆಂಘೀಗೆ ಬಲಿಯಾಗಿದ್ದಾರೆ.

publive-image

ಡೆಂಘೀ ಲಕ್ಷಣಗಳು

ಜ್ವರ
ತಲೆನೋವು
ಮೈ ಕೈ ನೋವು
ಕೀಲುನೋವು
ಹೊಟ್ಟೆನೋವು
ವಾಕರಿಕೆ
ವಾಂತಿ
ಭೇದಿ

ಡೆಂಘೀ ತಡೆಗೆ ಕ್ರಮಗಳು!

ಗಲೀಜು ನೀರಿನಲ್ಲಿ ಡೆಂಘೀ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ
ಸೊಳ್ಳೆ ನಿಯಂತ್ರಣಕ್ಕೆ ಸ್ವಚ್ಛತೆ ಕಾಪಾಡೋದು ಅತೀ ಮುಖ್ಯ
ಮನೆ ಸುತ್ತ, ಟೆರೇಸ್ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು
ನೀರು ಶೇಖರಣೆಯಾಗುವ ಪ್ರದೇಶವಿದ್ರೆ ಅಲ್ಲಿ ಶುಚಿಗೊಳಿಸಬೇಕು
ಮನೆಯ ಸುತ್ತಲಿನ ಪರಿಸರವನ್ನ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು
ಮಕ್ಕಳ ಸುರಕ್ಷತೆಗೆ ಸೊಳ್ಳೆ ಪರದೆಯಡಿ ಮಲಗಿಸುವುದು ಒಳ್ಳೆಯದು
3 ದಿನ ನಿರಂತರ ಜ್ವರ, ಮೈಕೈ ನೋವಿದ್ರೆ ವೈದ್ಯರಿಗೆ ತೋರಿಸಬೇಕು
ತಲೆ ನೋವು ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ
ಶುದ್ಧ, ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಒಳ್ಳೆಯದು

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment