Advertisment

ರೆಬಲ್ ಆಗ್ತಾರಾ ಬೆಳಗಾವಿ ನಾಯಕ? HDK, ಸತೀಶ್ ಜಾರಕಿಹೊಳಿ ರಹಸ್ಯ ಭೇಟಿ; ಏನಿದರ ಗುಟ್ಟು?

author-image
admin
Updated On
ರೆಬಲ್ ಆಗ್ತಾರಾ ಬೆಳಗಾವಿ ನಾಯಕ? HDK, ಸತೀಶ್ ಜಾರಕಿಹೊಳಿ ರಹಸ್ಯ ಭೇಟಿ; ಏನಿದರ ಗುಟ್ಟು?
Advertisment
  • ಹೆಚ್‌.ಡಿ.ಕುಮಾರಸ್ವಾಮಿ-ಸತೀಶ್ ಜಾರಕಿಹೊಳಿ ರಹಸ್ಯ ಭೇಟಿ
  • ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಇಬ್ಬರು ನಾಯಕರ ಚರ್ಚೆ
  • ಕೆಪಿಸಿಸಿ ಅಧ್ಯಕ್ಷ ಗಾದೆ ಮೇಲೆ ಕಣ್ಣಿಟ್ಟಿರುವ ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ 2019ರ ಬೆಳವಣಿಗೆ ಮತ್ತೆ ಮರುಕಳಿಸುತ್ತಾ? ಹೀಗೊಂದು ಪ್ರಶ್ನೆ ಹುಟ್ಟಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಪಟ್ಟಕ್ಕೆ ಕುತ್ತು ಬಂದಿದ್ದೇ ಆದ್ರೆ ಕಾಂಗ್ರೆಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗುವ ಸುಳಿವು ಸಿಕ್ಕಿದೆ.

Advertisment

ದೆಹಲಿಯಲ್ಲಿ ‘ದಳಪತಿ’-ಸತೀಶ್ ಜಾರಕಿಹೊಳಿ ಭೇಟಿ
ಸಿಎಂ ಬದಲಾದ್ರೆ ರೆಬಲ್ ಆಗ್ತಾರಾ ಬೆಳಗಾವಿ ನಾಯಕ?

ರಾಜಕಾರಣವೇ ಹಾಗೇ.. ಇವತ್ತು ಇಲ್ಲಿದ್ದವರು ನಾಳೆ ಎಲ್ಲಿರ್ತಾರೋ? ಯಾವ ಪಕ್ಷದಲ್ಲಿ ಕಾಲ್ಮೇಲೆ ಕಾಲು ಹಾಕಿ ಕೂತಿರ್ತಾರೋ ಹೇಳೋಕಾಗಲ್ಲ. ಈ ರೀತಿ ಬೆಳವಣಿಗೆಗಳೇನು ಹೊಸತಲ್ಲ. ಆದ್ರೆ, ಈಗ ಎದ್ದಿರೋ ಚರ್ಚೆ ಇದಕ್ಕೂ ಒಂದು ಕೈ ಮೇಲೆ. ಅದುವೆೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಸತೀಶ್ ಜಾರಕಿಹೊಳಿ ಭೇಟಿ.

publive-image

ಹೆಚ್‌ಡಿಕೆ-ಸತೀಶ್ ಭೇಟಿ!
ಹೆಚ್‌.ಡಿ.ಕುಮಾರಸ್ವಾಮಿ-ಸತೀಶ್ ಜಾರಕಿಹೊಳಿ ರಹಸ್ಯ ಭೇಟಿ
ದೆಹಲಿಗೆ ತೆರಳಿದ್ದ ವೇಳೆ ಭೇಟಿಯಾಗಿದ್ದ ಉಭಯ ನಾಯಕರು
ಸುಮಾರು ಒಂದು ತಾಸಿಗೂ ಹೆಚ್ಚು ಇಬ್ಬರು ನಾಯಕರ ಚರ್ಚೆ
ರಾಜ್ಯ ರಾಜಕಾರಣದ ಬಗ್ಗೆ ಇಬ್ಬರು ನಾಯಕರ ಮಹತ್ವದ ಚರ್ಚೆ
ಕುತೂಹಲ ಮೂಡಿಸಿದ ಹೆಚ್‌ಡಿಕೆ-ಸತೀಶ್ ಜಾರಕಿಹೊಳಿ ಭೇಟಿ

Advertisment

ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾವಣೆ.. ಡಿ.ಕೆ ಶಿವಕುಮಾರ್‌ ಕನಸಿಗೆ ಹೆಚ್‌ಡಿಕೆ ಖಡಕ್ ಸವಾಲು; ಏನಂದ್ರು? 

ರಾಜ್ಯದಲ್ಲಿ ಸಿಎಂ ಬದಲಾವಣೆ ಹೆಚ್ಚುವರಿ ಡಿಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಕೇಳಿ ಬಂದಿದೆ. ಒಂದು ವೇಳೆ ಸಿಎಂ ಬದಲಾದ್ರೆ ರಾಜ್ಯದಲ್ಲಿ ಸತೀಶ್ ಜಾರಕಿಹೊಳಿ ಮಹಾರಾಷ್ಟ್ರದ ಏಕನಾಥ್ ಶಿಂಧೆ ಆಗ್ತಾರಾ ಎಂಬ ಚರ್ಚೆ ಶುರುವಾಗಿದೆ.

publive-image

ರೆಬೆಲ್ ಆಗ್ತಾರಾ ಸತೀಶ್?
ಸಿಎಂ ಸಿದ್ದರಾಮಯ್ಯ ಆಪ್ತರಾಗಿರುವ ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ ಸಹ ಹೆಚ್ಚುವರಿ ಡಿಸಿಎಂಗೆ ಬೇಡಿಕೆ
ಕೆಪಿಸಿಸಿ ಅಧ್ಯಕ್ಷ ಗಾದೆ ಮೇಲೆ ಕಣ್ಣಿಟ್ಟಿರುವ ಸಚಿವ ಸತೀಶ್
ಸಿಎಂ ಬದಲಾದ್ರೆ ರೆಬಲ್ ಆಗ್ತಾರಾ ಸತೀಶ್ ಎಂಬ ಚರ್ಚೆ
ಅಧಿಕಾರ ಹಸ್ತಾಂತರ ಮಾಡಿದರೆ ಸತೀಶ್ ವಿರೋಧ ಸಾಧ್ಯತೆ
ಏಕನಾಥ್ ಶಿಂಧೆ ರೀತಿ ರೆಬಲ್ ಆಗೋ ಸಾಧ್ಯತೆ ಎಂಬ ಚರ್ಚೆ

Advertisment

ಇದನ್ನೂ ಓದಿ: ರಾಮನಗರ ಜಿಲ್ಲೆ ಹಾಗೇ ಇರುತ್ತೆ, ಅದರ ಹೆಸರು ಮಾತ್ರ ಬದಲಾಗುತ್ತದೆ; ಡಿ ಕೆ ಶಿವಕುಮಾರ್ 

ಮಹಾರಾಷ್ಟ್ರ ರಾಜಕಾರಣದಲ್ಲಿ ಏನಾಯ್ತು ಅನ್ನೋ ವಿಚಾರ ನಮ್ಮ ಕಣ್ಮುಂದೆ ಇದೆ. ಏಕನಾಥ್ ಶಿಂಧೆ ಬಂಡಾಯ ಎದ್ದು ಸಿಎಂ ಆಗಿದ್ದು ಎಲ್ಲರಿಗೂ ಗೊತ್ತಿದೆ. ಸೇಮ್ ಸೇಮ್ ಬಟ್ ಡಿಫ್ರೆಂಟ್ ಅನ್ನೋ ಥರ ಕರುನಾಡಲ್ಲಿ ಏನಾದ್ರು ಬೆಳವಣಿಗೆ ಆಗುತ್ತಿದ್ಯಾ ಎಂಬ ಸಂಶಯ ಮೂಡಿದೆ. ಸಿಎಂ, ಡಿಸಿಎಂ ಕದನದ ಮಧ್ಯೆ ದಳಪತಿ-ಬೆಳಗಾವಿ ಸಾಹುಕಾರ್ ಭೇಟಿ ಭಾರೀ ಕೌತುಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಮತ್ತೊಂದು ರಾಜಕೀಯ ಧ್ರುವೀಕರಣಕ್ಕೆ ಬೆಳಗಾವಿ ವೇದಿಕೆ ಆಗುತ್ತಾ? ಕರುನಾಡು ಇದಕ್ಕೆ ಸಾಕ್ಷಿಯಾಗುತ್ತಾ? ಸದ್ಯಕ್ಕೆ ಇದೆಲ್ಲಾ ಪ್ರಶ್ನಾರ್ಥಕ ಚಿಹ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment