ಹೆಂಡತಿ ರಹಸ್ಯ ಆಡಿಯೋ.. ಗಂಡ ರೆಕಾರ್ಡ್​ ಮಾಡಿದ್ರೆ ವೈವಾಹಿಕ ಕೇಸ್​​​ನಲ್ಲಿ ಸಾಕ್ಷಿ ಆಗುತ್ತೆ; ಸುಪ್ರೀಂ ಕೋರ್ಟ್

author-image
Bheemappa
Updated On
ಹೆಂಡತಿ ರಹಸ್ಯ ಆಡಿಯೋ.. ಗಂಡ ರೆಕಾರ್ಡ್​ ಮಾಡಿದ್ರೆ ವೈವಾಹಿಕ ಕೇಸ್​​​ನಲ್ಲಿ ಸಾಕ್ಷಿ ಆಗುತ್ತೆ; ಸುಪ್ರೀಂ ಕೋರ್ಟ್
Advertisment
  • ಹೈಕೋರ್ಟ್​ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದ ಗಂಡ
  • ರಹಸ್ಯ ರೆಕಾರ್ಡ್​ ಮಾಡಿದ್ದರೇ ಸಾಕ್ಷ್ಯವಾಗಿ ಪರಿಗಣಿಸಬಹುದು
  • ಹೈಕೋರ್ಟ್​ ತೀರ್ಪು ಅನ್ನು ರದ್ದು ಮಾಡಿದ ಸುಪ್ರೀಂ ಕೋರ್ಟ್ ​

ಪತ್ನಿಯ ಅರಿವಿಲ್ಲದೆ ಅಥವಾ ಒಪ್ಪಿಗೆಯಿಲ್ಲದೆ ಆಕೆಯ ದೂರವಾಣಿ ಸಂಭಾಷಣೆ ರೆಕಾರ್ಡ್ ಮಾಡುವುದು ಆಕೆಯ ಗೌಪ್ಯತೆಯ ಮೂಲಭೂತ ಹಕ್ಕಿನ ‘ಸ್ಪಷ್ಟ ಉಲ್ಲಂಘನೆ’ ಎಂದು ತೀರ್ಪು ನೀಡಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ.

ಕೌಟುಂಬಿಕ ನ್ಯಾಯಾಲಯದ ಮುಂದೆ ಅಂತಹ ಧ್ವನಿಮುದ್ರಣಗಳನ್ನು ಸಾಕ್ಷ್ಯವಾಗಿ ಸ್ವೀಕರಿಸಲಾಗುವುದಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು. ಸುಪ್ರೀಂ ಕೋರ್ಟ್​​ನ ನ್ಯಾಯಮೂರ್ತಿ ಬಿ.ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು, ವಿವಾಹ ಪ್ರಕ್ರಿಯೆಯಲ್ಲಿ ಸಂಗಾತಿಯ ರಹಸ್ಯವಾಗಿ ರೆಕಾರ್ಡ್ ಮಾಡಿದ ದೂರವಾಣಿ ಸಂಭಾಷಣೆ ಸಾಕ್ಷಿಯಾಗಿ ಒಪ್ಪಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದೆ.

publive-image

ಅಂತಹ ಸಾಕ್ಷ್ಯಗಳನ್ನು ಅನುಮತಿಸುವುದರಿಂದ ಮನೆಯ ಸಾಮರಸ್ಯ ಮತ್ತು ವೈವಾಹಿಕ ಸಂಬಂಧಗಳಿಗೆ ಅಪಾಯವಾಗುತ್ತದೆ ಏಕೆಂದರೆ ಅದು ಸಂಗಾತಿಗಳ ಮೇಲೆ ಕಣ್ಣಿಡಲು ಪ್ರೋತ್ಸಾಹಿಸುತ್ತದೆ. ಆದ್ದರಿಂದ, ಸಾಕ್ಷ್ಯ ಕಾಯ್ದೆಯ ಸೆಕ್ಷನ್ 122ರ ಉದ್ದೇಶ ಉಲ್ಲಂಘಿಸುತ್ತದೆ ಎಂದು ಕೆಲ ವಾದಗಳನ್ನು ಮಾಡಲಾಗಿದೆ.

ಅಂತಹ ವಾದವು ಸಮರ್ಥನೀಯ ಎಂದು ನಾವು ಭಾವಿಸುವುದಿಲ್ಲ. ವಿವಾಹವು ಸಂಗಾತಿಗಳು ಪರಸ್ಪರರ ಮೇಲೆ ಸಕ್ರಿಯವಾಗಿ ಕಣ್ಣಿಡುವ ಹಂತವನ್ನು ತಲುಪಿದ್ದರೆ, ಅದು ಸ್ವತಃ ಮುರಿದ ಸಂಬಂಧದ ಲಕ್ಷಣವಾಗಿದೆ. ಅವರ ನಡುವಿನ ನಂಬಿಕೆಯ ಕೊರತೆ ಸೂಚಿಸುತ್ತದೆ ಎಂದು ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ವಿಶೇಷ ರಜೆ ಅರ್ಜಿ (SLP) ವಿಚಾರಣೆ ನಡೆಸಿ, ಸುಪ್ರೀಂ ಕೋರ್ಟ್ ಸೋಮವಾರ (ಜುಲೈ 14)ದಂದು ಈ ತೀರ್ಪು ನೀಡಿದೆ.

ಸಂಗಾತಿ ಸಂಭಾಷಣೆ ರಹಸ್ಯವಾಗಿ ದಾಖಲಿಸುವ ಕುರಿತು ಹೈಕೋರ್ಟ್ ತೀರ್ಪು

ಈ ಪ್ರಕರಣವು ದಂಪತಿಗಳ ವಿಚ್ಛೇದನ ಪ್ರಕ್ರಿಯೆಗೆ ಸಂಬಂಧಿಸಿದೆ. ಇದರಲ್ಲಿ ಪಂಜಾಬ್ ರಾಜ್ಯದ ಭಟಿಂಡಾದ ಕುಟುಂಬ ನ್ಯಾಯಾಲಯವು ಕ್ರೌರ್ಯದ ಆರೋಪಗಳನ್ನು ಸಾಬೀತುಪಡಿಸಲು ಪತಿಗೆ ತನ್ನ ಪತ್ನಿಯೊಂದಿಗೆ ರೆಕಾರ್ಡ್ ಮಾಡಿದ ಫೋನ್ ಸಂಭಾಷಣೆಗಳನ್ನು ಹೊಂದಿರುವ ಸಿ.ಡಿ ಆಡಿಯೋ ಸಂಭಾಷಣೆಯನ್ನು ಅವಲಂಬಿಸಲು ಅವಕಾಶ ನೀಡಿತ್ತು. ಇದನ್ನು ಪ್ರಶ್ನಿಸಿ, ಪತ್ನಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ತನ್ನ ಒಪ್ಪಿಗೆಯಿಲ್ಲದೆ ಆಡಿಯೋ ರೆಕಾರ್ಡಿಂಗ್ ಮಾಡಲಾಗಿದೆ. ಅದನ್ನು ಸ್ವೀಕರಿಸುವುದು ತನ್ನ ಗೌಪ್ಯತೆಯ ಮೂಲಭೂತ ಹಕ್ಕನ್ನು ಉಲ್ಲಂಘನೆಯಾಗುತ್ತದೆ ಎಂದು ಪತ್ನಿ ಹೈಕೋರ್ಟ್​ನಲ್ಲಿ ವಾದಿಸಿದ್ದರು.

ಹೈಕೋರ್ಟ್ ಪತ್ನಿಯ ವಾದವನ್ನು ಒಪ್ಪಿಕೊಂಡಿತ್ತು. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು. ಸಾಕ್ಷ್ಯದಲ್ಲಿ ಅಂತಹ ರೆಕಾರ್ಡಿಂಗ್‌ಗಳನ್ನು ಅನುಮತಿಸುವುದು ನ್ಯಾಯಸಮ್ಮತವಲ್ಲ ಎಂದು ಹೈಕೋರ್ಟ್ ಹೇಳಿತ್ತು. ಏಕೆಂದರೆ ಸಂಭಾಷಣೆಗಳನ್ನು ರಹಸ್ಯವಾಗಿ ಪತ್ನಿಯ ಒಪ್ಪಿಗೆ ಇಲ್ಲದೇ ದಾಖಲಿಸಲಾಗಿದೆ ಎಂದು ಹೈಕೋರ್ಟ್ ಹೇಳಿತ್ತು.

ಹೈಕೋರ್ಟ್ ತೀರ್ಪು ಅನ್ನು ಪತಿ, ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಭಾರತೀಯ ಸಾಕ್ಷ್ಯ ಕಾಯ್ದೆ, 1872 ರ ಸೆಕ್ಷನ್ 122 ರಲ್ಲಿನ ವಿನಾಯಿತಿಯನ್ನು ಉಲ್ಲೇಖಿಸಿ, ವಿಚ್ಛೇದನವನ್ನು ಕೋರುವ ವೈವಾಹಿಕ ಪ್ರಕ್ರಿಯೆಯಲ್ಲಿ ವಿವಾಹಿತ ವ್ಯಕ್ತಿಗಳ ನಡುವಿನ ಸಂವಹನವನ್ನು ಬಹಿರಂಗಪಡಿಸಬಹುದು ಎಂದು ಪತಿಯ ಪರ ವಕೀಲರು ಸುಪ್ರೀಂಕೋರ್ಟ್​ನಲ್ಲಿ ವಾದಿಸಿದ್ದರು.

ಇದನ್ನೂ ಓದಿ: ಸಮೋಸ, ಜಿಲೇಬಿ, ಬಿಸ್ಕತ್, ಪಕೋಡ​ ತಿನ್ನುವ ಮುನ್ನ ಹುಷಾರ್​.. ಸರ್ಕಾರ ಕೊಟ್ಟ ಎಚ್ಚರಿಕೆ ಏನು..?

publive-image

ಜೊತೆಗೆ ಖಾಸಗಿತನದ ಹಕ್ಕು, ಸಂಪೂರ್ಣ ಪೂರ್ಣ ಪ್ರಮಾಣದ ಹಕ್ಕು ಅಲ್ಲ. ಖಾಸಗಿತನದ ಹಕ್ಕು ಅನ್ನು ಇತರೆ ಹಕ್ಕು ಮತ್ತು ಮೌಲ್ಯಗಳ ಜೊತೆ ಸಮತೋಲನ ಮಾಡಬೇಕು ಎಂದು ಪತಿಯ ಪರ ವಕೀಲರು ಸುಪ್ರೀಂಕೋರ್ಟ್​​ನಲ್ಲಿ ವಾದಿಸಿದ್ದರು.

ಅರ್ಜಿದಾರ ಪತಿ ಸುಪ್ರೀಂಕೋರ್ಟ್​ನಲ್ಲಿ 1984ರ ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆಯ ಸೆಕ್ಷನ್ 14 ಮತ್ತು 20 ಅನ್ನು ಉಲ್ಲೇಖಿಸಿ, ಈ ನಿಬಂಧನೆಗಳನ್ನು ನ್ಯಾಯಯುತ ವಿಚಾರಣೆ ಖಚಿತಪಡಿಸಿಕೊಳ್ಳಲು ಮತ್ತು ವೈವಾಹಿಕ ವಿವಾದಗಳಲ್ಲಿ ಸತ್ಯ ಕಂಡುಹಿಡಿಯಲು ಸಹಾಯ ಮಾಡಲು ಜಾರಿಗೆ ತರಲಾಗಿದೆ ಎಂದು ಪ್ರತಿಪಾದಿಸಿದರು. ಸುಪ್ರೀಂಕೋರ್ಟ್ ಈಗ ಪತಿಯ ವಾದವನ್ನು ಒಪ್ಪಿಕೊಂಡು ವೈವಾಹಿಕ ಸಂಬಂಧಗಳಲ್ಲಿ ರಹಸ್ಯವಾಗಿ ಪೋನ್ ಆಡಿಯೋ ರೆಕಾರ್ಡಿಂಗ್ ಮಾಡಿದ್ದರೇ, ಅದನ್ನು ವೈವಾಹಿಕ ಕೇಸ್ ಗಳಲ್ಲಿ ಸಾಕ್ಷ್ಯವಾಗಿ ಪರಿಗಣಿಸಬಹುದು ಎಂದು ತೀರ್ಪು ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment