/newsfirstlive-kannada/media/post_attachments/wp-content/uploads/2024/11/TRAIN.jpg)
ಸಿಕಂದರಬಾದ್​-ಶಾಲಿಮರ್ ಸೂಪರ್​ಫಾಸ್ಟ್​ ವೀಕ್ಲಿ ಎಕ್ಸ್​​ಪ್ರೆಸ್​ ಇಂದು ಬೆಳಗ್ಗೆ ಹಳಿತಪ್ಪಿ ಅನಾಹುತಕ್ಕೆ ಸಿಲುಕಿತ್ತು. ಪಶ್ಚಿಮ ಬಂಗಾಳದ ನಲ್ಪುರ ಸ್ಟೇಷನ್ ಬಳಿ ಪಾಸಿಂಗ್ ಆಗುವ ವೇಳೆ ಪ್ರಯಾಣಿಕರಿದ್ದ ರೈಲು ಹಳಿತಪ್ಪಿದೆ.
ಬೆಳಗ್ಗೆ 5.31ಕ್ಕೆ ಒಟ್ಟು ಮೂರು ಬೋಗಿಗಳು ಹಳಿ ತಪ್ಪಿವೆ. ಕೂಡಲೇ ಸ್ಥಳಕ್ಕೆ ಬಂದ ರೈಲ್ವೇ ಸಿಬ್ಬಂದಿ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಸಣ್ಣಪುಟ್ಟ ಗಾಯಗಳಾದವರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ. ಯಾವುದೇ ಜೀವ ಹಾನಿಯಾಗಿಲ್ಲ.
ನಂತರ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಸ್​ ವ್ಯವಸ್ಥೆ ಮಾಡಿ ಅವರು ತಲುಪಬೇಕಿದ್ದ ಸ್ಥಳಕ್ಕೆ ಬಿಡಲಾಗಿದೆ. ರೈಲ್ವೇ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಯಾವುದೇ ಮೇಜರ್​ ಡ್ಯಾಮೇಜ್ ಆಗಿಲ್ಲ. ಜೀವ ಹಾನಿಯಾಗಿಲ್ಲ, ಸಣ್ಣಪುಟ್ಟ ಗಾಯಗಳಾಗಿವೆ. ಹಳಿ ತಪ್ಪಿದ ಮೂರು ಕೋಚ್​ಗಳಲ್ಲಿ ಒಂದು ಪಾರ್ಸೆಲ್ ಕೋಚ್ ಆಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಯಾಣಿಕರಿಗೆ ಗುಡ್ ನ್ಯೂಸ್.. ರೈಲು ಟಿಕೆಟ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ; ತಪ್ಪದೇ ಓದಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us