/newsfirstlive-kannada/media/post_attachments/wp-content/uploads/2025/04/MCG_1.jpg)
ಆಸ್ಟ್ರೇಲಿಯಾದ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಭದ್ರತಾ ವೈಫಲ್ಯದಿಂದ ಇಬ್ಬರು ದುಷ್ಕರ್ಮಿಗಳು ಲೋಡೆಡ್ ಗನ್ ಹಿಡಿದು ಒಳ ನುಗ್ಗಿರುವ ಘಟನೆ ನಡೆದಿದೆ. ಸದ್ಯ ಇಬ್ಬರನ್ನು ಅರೆಸ್ಟ್ ಮಾಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕಾರ್ಲ್ಟನ್-ಕಾಲಿಂಗ್‌ವುಡ್ ಬ್ಲಾಕ್‌ಬಸ್ಟರ್ ತಂಡಗಳ ನಡುವೆ ಹೈವೋಲ್ಟೇಜ್ ಫುಟ್ಬಾಲ್ ಪಂದ್ಯ ನಡೆಯುತ್ತಿತ್ತು. ಈ ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಎಂದು 82 ಸಾವಿರ ಪ್ರೇಕ್ಷಕರು ಸ್ಟೇಡಿಯಂ ಗ್ಯಾಲರಿಯಲ್ಲಿ ಸೇರಿದ್ದರು. ಈ ವೇಳೆ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಭದ್ರತೆ ವೇಳೆ ಬಾಡಿ ಚೆಕಪ್ ಮಾಡಿ ಒಳಗೆ ಬಿಡುವಾಗ ವೈಫಲ್ಯ ಎಸಗಿದ್ದಾರೆ. ಹೀಗಾಗಿ ಇಬ್ಬರು ದುಷ್ಕರ್ಮಿಗಳು ಲೋಡೆಡ್ ಗನ್ ಸಮೇತ ಸ್ಟೇಡಿಯಂ ಒಳಗೆ ನುಗ್ಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬಿಗ್ ಶಾಕ್ ಕೊಟ್ಟ ಬೂಮ್ರಾ.. RCB ಜೊತೆಗಿನ ಮ್ಯಾಚ್ ಕೂಡ ಆಡಲ್ಲ.. ಯಾಕೆ?
ಆರೋಪಿಗಳಾದ ಮೊಹಮ್ಮದ್ ನೂರಿ (27) ಹಾಗೂ ಒಮರ್ ಸಲ್ಮಾ (21) ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಆರೋಪಿ ಫುಟ್ಬಾಲ್ ಆಟದ ದ್ವಿತೀಯಾರ್ಧದಲ್ಲಿ ಗ್ಯಾಲರಿಯಲ್ಲಿ ಗನ್ ಹಿಡಿದು ಹುಚ್ಚಾಟ ಮಾಡಲು ಶುರುಮಾಡಿದ್ದಾನೆ. ಈ ವೇಳೆ ಆತಂಕಗೊಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಇಬ್ಬರನ್ನು ಬಾಡಿ ಚೆಕ್ ಮಾಡಿದಾಗ ಪ್ಯಾಂಟ್ನಲ್ಲಿ ಲೋಡೇಡ್ ಗನ್ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ತಕ್ಷಣ ಪೊಲೀಸರು ಇಬ್ಬರುನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಭದ್ರತಾ ವೈಫಲ್ಯದಿಂದ ಒಳ ನುಗ್ಗಿರುವುದು ಗೊತ್ತಾಗಿದೆ. ಇಬ್ಬರ ಮೇಲೂ ಈ ಮೊದಲು ಪ್ರಕರಣಗಳಿದ್ದು ವಾರಂಟ್ ಕೂಡ ಇವೆ. ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಮೆಲ್ಬೋರ್ನ್ ಸ್ಟೇಡಿಯಂನ ಸಿಬ್ಬಂದಿ, ಭದ್ರತೆಯನ್ನು ಹೆಚ್ಚಿಸಿದ್ದಾರೆ. AI-ಚಾಲಿತ ತಂತ್ರಜ್ಞಾನದಿಂದ ಅವರಲ್ಲಿ ಗನ್ಗಳು ಇವೆ ಎಂದು ಮೊದಲು ಪತ್ತೆ ಹಚ್ಚಲಾಯಿತು ಎಂದು ಸ್ಟೇಡಿಯಂನ ಸಿಬ್ಬಂದಿ ಒಬ್ಬರು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ