Advertisment

ಜುಲೈ 11 ರಂದು ಬೆಂಗಳೂರಿನಲ್ಲಿ ಬಿಸೈಡ್ಸ್​​ನ ವಾರ್ಷಿಕ ಸೈಬರ್ ಭದ್ರತಾ ಸಮ್ಮೇಳನ

author-image
Bheemappa
Updated On
ಜುಲೈ 11 ರಂದು ಬೆಂಗಳೂರಿನಲ್ಲಿ ಬಿಸೈಡ್ಸ್​​ನ ವಾರ್ಷಿಕ ಸೈಬರ್ ಭದ್ರತಾ ಸಮ್ಮೇಳನ
Advertisment
  • ಕಾರ್ಯಕ್ರಮದಲ್ಲಿ ಅದೃಷ್ಟಶಾಲಿಗೆ ಬೈಕ್ ಗಿಫ್ಟ್​ ಆಗಿ ನೀಡಲಾಗುತ್ತದೆ
  • ಮೈಸೂರು ಸಂಸದರು ಹಾಗೂ ಅವರ ಪತ್ನಿ ತ್ರಿಶಿಕಾ ಮುಖ್ಯ ಅತಿಥಿಗಳು
  • ಎಐನಿಂದ ಸೈಬರ್ ಅಪರಾಧಗಳ ಬಗ್ಗೆ ಡಿಜಿಪಿ ಅವರಿಂದ ಪ್ಯಾನೆಲ್ ಚರ್ಚೆ

ಸೆಕ್ಯುರಿಟಿ ಬಿಸೈಡ್ಸ್​​ನ ವಾರ್ಷಿಕ ಸೈಬರ್ ಭದ್ರತಾ ಸಮ್ಮೇಳನ ಜುಲೈ 11ರಂದು ಬೆಂಗಳೂರಿನ ವೈಟ್ ಫೀಲ್ಡ್​​ನ ಶೆರಾಟನ್ ಗ್ರ್ಯಾಂಡ್ ಹೋಟೇಲ್​ನಲ್ಲಿ ನಡೆಯಲಿದೆ. ಈ ಬಾರಿಯೂ ಅತ್ಯದ್ಬುತ ವಿಷಯಗಳು ಹಾಗೂ ದೊಡ್ಡ ಪ್ರಮಾಣದಲ್ಲಿ ಸೈಬರ್ ಭದ್ರತಾ ಸಮ್ಮೇಳನ ನಡೆಯಲಿದೆ. ಇದು ಬೆಂಗಳೂರಿನ ಪ್ರೀಮಿಯರ್ ಸೈಬರ್ ಸೆಕ್ಯೂರಿಟಿಯ ಸಮ್ಮೇಳನವಾಗಿದೆ.

Advertisment

ಈ ವರ್ಷದ ಸಮ್ಮೇಳನವು ಗೂಗಲ್​ನಿಂದ ನಡೆಸಲ್ಪಡುತ್ತಿದ್ದು, ವರ್ಲ್ಡ್ ವೈಡ್ ವುಮೆನ್ ಇನ್ ಸೈಬರ್ ಸೆಕ್ಯುರಿಟಿ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ. ಪೋರ್ಟಿಫೈ ಡಿಜಿಟಲ್: ರಕ್ಷಣೆ, ಧೃಢತೆ, ಅನುಸರಣೆ ಎಂಬ ಥೀಮ್ ಅನ್ನು ಈ ಬಾರಿಯ ವಾರ್ಷಿಕ ಸಮ್ಮೇಳನ ಹೊಂದಿದೆ.

publive-image

ಮುಖ್ಯ ಅತಿಥಿಗಳು ಯದುವೀರ್, ಅವರ ಪತ್ನಿ ಶ್ರೀಮತಿ ತ್ರಿಶಿಕಾ

ಈ ಕಾರ್ಯಕ್ರಮಕ್ಕೆ ಮೆರಗು ನೀಡಲು ಹಾಗೂ ದೈನಂದಿನ ಜೀವನದಲ್ಲಿ ಸೈಬರ್ ಸೆಕ್ಯುರಿಟಿಯ ಪ್ರಾಮುಖ್ಯತೆ ವಿವರಿಸಲು ಮೈಸೂರು ರಾಜಮನೆತನದ ಯುವರಾಜ ಹಾಗೂ ಮೈಸೂರು ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಅವರ ಪತ್ನಿ ಶ್ರೀಮತಿ ತ್ರಿಶಿಕಾ ಕುಮಾರಿ ಒಡೆಯರ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.

ಶ್ರೀಮತಿ ತ್ರಿಶಿಕಾ ಕುಮಾರಿ ಒಡೆಯರ್ ಅವರು ಸೈಬರ್ ವರ್ಸ್ ಫೌಂಡೇಷನ್​​ನ ಅಧ್ಯಕ್ಷೆ ಕೂಡ ಆಗಿದ್ದಾರೆ. ಕಾರ್ಯಕ್ರಮವನ್ನು ಉದ್ದೇಶಿಸಿ, ಯದುವೀರ್ ಒಡೆಯರ್ ಹಾಗೂ ತ್ರಿಶಿಕಾ ಕುಮಾರಿ ಒಡೆಯರ್ ಮಾತನಾಡುವರು. ಮೈಸೂರು ರಾಜಮನೆತನದ ಈ ದಂಪತಿಗಳು ಮೈಸೂರಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ವಾರಸುದಾರರು ಮಾತ್ರವಲ್ಲದೇ, ಸೈಬರ್ ಭದ್ರತೆ ಪ್ರತಿಪಾದಿಸುವವರು ಆಗಿದ್ದಾರೆ. ಸೈಬರ್ ವರ್ಸ್ ಫೌಂಡೇಷನ್ ಸಂಸ್ಥಾಪಕರಾಗಿ ಕರ್ನಾಟಕದಾದ್ಯಂತ ಸೈಬರ್ ಜಾಗೃತಿ ಮೂಢಿಸುವಲ್ಲಿ ಸಂಸದ ಯದುವೀರ್ ಒಡೆಯರ್ ಹಾಗೂ ತ್ರಿಶಿಕಾ ಕುಮಾರಿ ಒಡೆಯರ್ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ.

Advertisment

ಸಂವಾದಾತ್ಮಕ ಕಾರ್ಯಕ್ರಮಗಳು

ದಿನವಿಡೀ ನಡೆಯುವ ಈ ಕಾರ್ಯಕ್ರಮದಲ್ಲಿ ಪರಿಣಾಮಕಾರಿಯಾದ ಪ್ರಮುಖ ವಿಷಯಗಳ ಬಗ್ಗೆ ಭಾಷಣಗಳು, ತಾಂತ್ರಿಕ ವಿಷಯಗಳ ಬಗ್ಗೆ ಅಳವಾದ ಚರ್ಚೆ ನಡೆಯಲಿದೆ. ಜೊತೆಗೆ ರೆಡ್ ಟೀಮಿಂಗ್, ಸೈಬರ್ ರಕ್ಷಣೆ, ಥ್ರೆಟ್ ಮಾಡೆಲಿಂಗ್ ಬಗ್ಗೆ ಕಾರ್ಯಾಗಾರ ನಡೆಯಲಿದೆ. ಸೀನಿಯರ್ ಎಕ್ಸಿಕ್ಯುಟೀವ್​ಗಳು ಹಾಗೂ ಸೈಬರ್ ಲೋಕದ ಪ್ರಮುಖರು CXO ಪ್ಯಾನಲ್ ಚರ್ಚೆಗಳು, CxO ರೌಂಡ್ ಟೇಬಲ್, ಫೈರ್ ಸೈಡ್ ಮಾತುಕತೆಗಳನ್ನು ನಡೆಸುವರು. ರೆಗ್ಯುಲೇಟರಿ ಮತ್ತು ಸೆಕ್ಯುರಿಟಿ ಚಾಲೆಂಜಸ್ ಬಗ್ಗೆ ಸ್ಟ್ರಾಟಜಿ ಸೆಷನ್ಸ್ ಕೂಡ ನಡೆಯಲಿವೆ. ಭಾಗವಹಿಸುವವರು ಲಾಕ್ ಪಿಕ್ಕಿಂಗ್ ವಿಲೇಜ್, ಕಾರ್ ಹ್ಯಾಕಿಂಗ್ ವಿಲೇಜ್, AI ಸೆಕ್ಯುರಿಟಿ ಕಾರ್ಯಾಗಾರ, EKS ಸೆಕ್ಯುರಿಟಿ ಕಾರ್ಯಾಗಾರ ಮತ್ತು ರಾನ್ಸಮ್‌ವೇರ್ ಪ್ರತಿಕ್ರಿಯೆಯ ಕುರಿತು ಶಕ್ತಿಯುತವಾದ CISO ವಾರ್ ರೂಮ್ ಸಿಮ್ಯುಲೇಶನ್‌ನಂತಹ ಸಂವಾದಾತ್ಮಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ತೀವ್ರ ಪೈಪೋಟಿಯ ಕ್ಯಾಪ್ಚರ್ ದಿ ಫ್ಲಾಗ್ (CTF).

ವೃತ್ತಿಪರರ ಕೌಶಲ್ಯಗಳನ್ನು ಪರೀಕ್ಷಿಸುತ್ತದೆ. ಗ್ರೋವ್ ಪ್ರಾಯೋಜಿಸಿದ ಲೈವ್ ಹ್ಯಾಕಿಂಗ್ ಈವೆಂಟ್ (LHE) ಜುಲೈ 10 ರಂದು ನಡೆಯಲಿದೆ, ಅಲ್ಲಿ ಒಬ್ಬ ಬಗ್ ಬೌಂಟಿ ಹ್ಯಾಕರ್ ಪ್ರತಿ ಮಾನ್ಯ ಬಗ್‌ಗೆ $7,500 ವರೆಗೆ ಗಳಿಸಬಹುದು ಮತ್ತು ಟಾಪ್ ಐದು ವಿಜೇತರು ಮತ್ತು ಒಬ್ಬ ಅತ್ಯಮೂಲ್ಯ ಆಟಗಾರ್ತಿ ಸಮ್ಮೇಳನದ ದಿನದಂದು ಟ್ರೋಫಿಗಳನ್ನು ಸ್ವೀಕರಿಸುತ್ತಾರೆ.

ಮಹಿಳೆಯರನ್ನ ಸಬಲೀಕರಣಕ್ಕಾಗಿ ಕಾರ್ಯಕ್ರಮ

ವಿಶೇಷ ಟ್ರ್ಯಾಕ್‌ಗಳಲ್ಲಿ ಪ್ರಗತಿಪರ ಸ್ಟಾರ್ಟ್-ಅಪ್‌ಗಳಿಗಾಗಿ ಎಮರ್ಜ್‌ಎಕ್ಸ್ ಶೋಕೇಸ್ ಮತ್ತು ವುಮೆನ್ ಪ್ರೊಫೆಷನಲ್ ಕನೆಕ್ಟ್, ಸೈಬರ್ ಭದ್ರತೆಯಲ್ಲಿ ಮಹಿಳೆಯರನ್ನ ಸಬಲೀಕರಣಗೊಳಿಸುವ ಕಾರ್ಯಕ್ರಮ ಒಳಗೊಂಡಿದೆ.

Advertisment

ಇದನ್ನೂ ಓದಿ: ಕೊಡವ ಸಮಾಜದಿಂದ ನಾನೇ ಮೊದಲ ಹೀರೋಯಿನ್.. ರಶ್ಮಿಕಾ ಮಂದಣ್ಣ ಎಡವಟ್ಟು​!​

publive-image

ರಾಜ್ಯದ ಡಿಜಿಪಿ ಹಾಗೂ ಐಪಿಎಸ್ ಅಧಿಕಾರಿ ಡಾ.ಸುಬ್ರಮಣೇಶ್ವರರಾವ್ ಅವರು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅನ್ನು ಬಳಸಿಕೊಂಡು ಸೈಬರ್ ಅಪರಾಧಗಳ ವಿರುದ್ಧ ಹೋರಾಡುವ ಬಗ್ಗೆ ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸುವರು. ಜೊತೆಗೆ ಕಾನೂನು ಜಾರಿಯ ಅಧಿಕಾರಿಗಳು ಹಾಗೂ ಸೈಬರ್ ಲೋಕದ ತಜ್ಞರು ಸೈಬರ್ ಅಪರಾಧಗಳ ನಿರ್ವಹಣೆಯಲ್ಲಿ ಪರಸ್ಪರ ಸಹಕಾರ ನೀಡಿಕೆಯ ಅಗತ್ಯತೆ ಬಗ್ಗೆ ಚರ್ಚೆ ನಡೆಸುವರು.

ಒರಿಜಿನಲ್ ರಿಸರ್ಚ್, ಚಿಂತನೆಯ ನಾಯಕತ್ವದ ವಿಡಿಯೋ ಬೈಟ್​ಗಳು ಹಾಗೂ ಸೈಬರ್ ಸೆಕ್ಯುರಿಟಿ ಎಕ್ಸಲೆನ್ಸ್ 2025ರ ಪ್ರಶಸ್ತಿಗಳನ್ನು ಈ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುತ್ತೆ. ಒಬ್ಬ ಅದೃಷ್ಟಶಾಲಿಗೆ ಟಿವಿಎಸ್ ಜ್ಯುಪಿಟರ್ 110 ಸಿಸಿ ಬೈಕ್ ಅನ್ನು ಬಹುಮಾನವಾಗಿ ನೀಡಲಾಗುತ್ತೆ. ಸಮ್ಮೇಳನದ ದಿನದಂದು ಆಯಾ ಬೂತ್ ಗಳಲ್ಲಿ ನೇಮಕಾತಿ ಪಾಲುದಾರರೊಂದಿಗೆ ನೇರವಾಗಿ ಮಾತನಾಡುವ ಅವಕಾಶವನ್ನು ಭಾಗವಹಿಸುವವರು ಪಡೆಯುತ್ತಾರೆ.

Advertisment

𝗕𝗦𝗶𝗱𝗲𝘀 𝗕𝗮𝗻𝗴𝗮𝗹𝗼𝗿𝗲 𝗔𝗻𝗻𝘂𝗮𝗹 𝗖𝘆𝗯𝗲𝗿𝘀𝗲𝗰𝘂𝗿𝗶𝘁𝘆 𝗖𝗼𝗻𝗳𝗲𝗿𝗲𝗻𝗰𝗲 𝟮𝟬𝟮𝟱

Details are as cited below:

Location: Hotel Sheraton Grand, Whitefield, Bangalore
Conference: 11th July 2025, Friday, 9:00AM to 6:00PM
Trainings: July 9 &10 (2days) and 12, 13 & 14 (3days)

Register here: https://events.bsidesbangalore.in/event/acsc2025

𝗦𝗮𝘃𝗲 𝗠𝗼𝗿𝗲 𝘄𝗶𝘁𝗵 𝟮𝟬% 𝗗𝗶𝘀𝗰𝗼𝘂𝗻𝘁 𝗖𝗼𝗱𝗲𝘀 on conference pass.

Discount Codes:

BSBLRBESTDEALCP20– Corporate | BSBLRBESTDEALMP20–
Member | BSBLRBESTDEALNMP20 –Non-Memb

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment