newsfirstkannada.com

ಸಿದ್ದು ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ.. ರಾಜ್ಯಪಾಲರ ಭದ್ರತೆಯಲ್ಲಿ ಭಾರೀ ಬದಲಾವಣೆ; ಹೇಗಿದೆ ಗೊತ್ತಾ?

Share :

Published August 21, 2024 at 5:42pm

Update August 21, 2024 at 6:26pm

    ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ ವಿಚಾರ

    ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ರಾಜ್ಯಪಾಲರಿಗೆ ಹೆಚ್ಚಾದ ಭದ್ರತೆ

    ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್‌ಗೆ ಬುಲೆಟ್ ಪ್ರೂಫ್​ ಕಾರು ವ್ಯವಸ್ಥೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್​ಗೆ ಏಕಾಏಕಿ ಭದ್ರತೆ ಹೆಚ್ಚಾಗಿದೆ. ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ, ಥಾವರ್ ಚಂದ್ ಗೆಹ್ಲೋಟ್​ಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಜ್ಯ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆಯಿಂದ ರಾಜ್ಯಪಾಲರಿಗೆ ಭದ್ರತೆ ಜಾಸ್ತಿ ಮಾಡಲಾಗಿದೆ.

ಇದನ್ನೂ ಓದಿ: ಮುಡಾದಲ್ಲಿ ಮೂಡಿದ ವೈಟ್ನರ್ ಮೇಲೆ ಗುಮಾನಿ.. ಡಿಸಿ, ಮುಡಾ ಅಧ್ಯಕ್ಷರಿಗೆ ಸಿಎಂ ಪತ್ನಿ ಬರೆದ ಪತ್ರದಲ್ಲೇನಿದೆ?

ಅದು ಮಾತ್ರವಲ್ಲ ಇಷ್ಟು ದಿನ ಇನ್ನೋವಾ ಕಾರು ಬಳಸುತ್ತಿದ್ದ ಥಾವರ್ ಚಂದ್ ಗೆಹ್ಲೊಟ್. ಈಗ ಬುಲೆಟ್​ ಪ್ರೂಫ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಈ ಮೊದಲು ಯಾವುದೇ ಕಾರ್ಯಕ್ರಮಕ್ಕೆ ತೆರಳಬೇಕಾದರು ಇನ್ನೋವಾ ಕಾರನ್ನೇ ಬಳಸುತ್ತಿದ್ದ ರಾಜ್ಯಪಾಲರು ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನದವರೆಗೂ ಬುಲೆಟ್ ಪ್ರೂಫ್ ಕಾರಿನಲ್ಲಿಯೇ ಪೊಲೀಸರು ಕರೆತಂದಿದ್ದಾರೆ.

ಇದನ್ನೂ ಓದಿ:ಮುಡಾ ಕೇಸ್​ನಿಂದ ಸಿದ್ದರಾಮಯ್ಯರನ್ನು ಬಚಾವ್​ ಮಾಡಿದ್ದು ಮನು ಸಿಂಘ್ವಿ; ಯಾರು ಈ ಆಪತ್ಭಾಂದವ?

ಸದ್ಯ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ಸಿದ್ದು ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯಪಾಲರು ಪ್ರಯಾಣ ಮಾಡುವಾಗ ಯಾವುದೇ ರೀತಿಯ ತೊಂದರೆ ಆಗಬಾರದು ಅಂತ ಮುನ್ನೆಚ್ಚರಿಕೆಯ ಕ್ರಮವಾಗಿ ಭದ್ರತೆಯನ್ನು ಹೆಚ್ಚಳ ಮಾಡುವುದರ ಜೊತೆಗೆ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆಯನ್ನು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದು ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ.. ರಾಜ್ಯಪಾಲರ ಭದ್ರತೆಯಲ್ಲಿ ಭಾರೀ ಬದಲಾವಣೆ; ಹೇಗಿದೆ ಗೊತ್ತಾ?

https://newsfirstlive.com/wp-content/uploads/2024/08/Cm-Siddaramaiah-Governer.jpg

Load More