newsfirstkannada.com

ಗನ್ ಇಟ್ಕೊಂಡು ಬಂದು CMಗೆ ಹಾರ ಹಾಕಿದ ಕೇಸ್​; ಭದ್ರತಾ ವೈಫಲ್ಯ ಖಂಡಿಸಿದ ಕುಮಾರಸ್ವಾಮಿ, ಏನಂದ್ರು..?

Share :

Published April 9, 2024 at 7:23am

    ಸಿಎಂ ಸಿದ್ದರಾಮಯ್ಯ ಪ್ರಚಾರದ ವೇಳೆ ಭದ್ರತಾ ವೈಫಲ್ಯ

    ಗನ್ ಇಟ್ಟುಕೊಂಡು ಬಂದ ವ್ಯಕ್ತಿಗೆ ಪೊಲೀಸರ ವಿಚಾರಣೆ

    ಮುಖ್ಯಮಂತ್ರಿ ಮುಂದೆ ಈ ಪರಿಸ್ಥಿತಿ ಇದ್ರೆ ಹೇಗೆ ಅಂತ ಪ್ರಶ್ನೆ

ಲೋಕಸಭಾ ಚುನಾವಣಾ ಅಖಾಡ ರಂಗೇರಿದೆ. ಸಿಎಂ ಸಿದ್ದರಾಮಯ್ಯ ನಿರಂತರ ಪ್ರಚಾರ ಮಾಡ್ತಿದ್ದಾರೆ. ಹೀಗೆ ಸಿಎಂ ಕದನ ಕಣದಲ್ಲಿ ಅಬ್ಬರಿಸೋ ವೇಳೆ ಭದ್ರತಾ ವೈಫಲ್ಯ ಕಂಡು ಬಂದಿದೆ. ಗನ್ ಇಟ್ಟುಕೊಂಡು ಬಂದ ವ್ಯಕ್ತಿಯ ವರ್ತನೆಯಿಂದ ಹೈಡ್ರಾಮ ನಡೆದಿದೆ. ಆತನ ವರ್ತನೆ ವಿರುದ್ಧ ಸಾಕಷ್ಟು ಅನುಮಾನಗಳು ಶುರುವಾಗಿದೆ. ಇದೀಗ ಈ ಕೇಸ್‌ನ ಗಂಭೀರವಾಗಿ ಪರಿಗಣಿಸಿರೋ ಪೊಲೀಸರು ಗನ್ ಇಟ್ಟುಕೊಂಡು ಬಂದ ವ್ಯಕ್ತಿಯನ್ನ ವಿಚಾರಣೆಗೆ ಒಳಪಡಿಸಿದ್ದಾರೆ.

ನಿನ್ನೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚಿಕ್ಕಪೇಟೆಯಲ್ಲಿ ಸೌಮ್ಯ ರೆಡ್ಡಿ ಪರ ಸಿದ್ದರಾಮಯ್ಯ ಭರ್ಜರಿ ಪ್ರಚಾರದಲ್ಲಿ ತೊಡಗಿದ್ರು. ಅದೇ ಗಾಡಿಯಲ್ಲಿ ಮುಖ್ಯಮಂತ್ರಿಗಳ ಗನ್ ಮ್ಯಾನ್ ಕೂಡ ಇದ್ರು. ಗಾಡಿಯ ಕೆಳಗೆ ಪೊಲೀಸರೂ ಇದ್ರು. ಹೀಗಿದ್ರೂ ಕಾಂಗ್ರೆಸ್ ಮುಖಂಡ ಆರ್‌.ವಿ ದೇವರಾಜ್ ಬೆಂಬಲಿಗ ಎನ್ನಲಾದ ರಿಯಾಜ್ ಅನ್ನೋ ವ್ಯಕ್ತಿ ಸೊಂಟದಲ್ಲಿ ಗನ್‌ ಇಟ್ಟುಕೊಂಡೇ ಏಕಾಏಕಿ ಗಾಡಿ ಹತ್ತಿ ಸಿಎಂಗೆ ಹಾರ ಹಾಕಿದ್ದಾನೆ. ಇದು ರಾಜ್ಯದ ಚುನಾವಣಾ ಪ್ರಚಾರದಲ್ಲಿರೋ ನಾಯಕರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಯುಗಾದಿ ಅಮವಾಸ್ಯೆ ದಿನ ವಿದ್ರಾವಕ ಘಟನೆ; ದೇವರ ಪಲ್ಲಕ್ಕಿ ಹೊತ್ತು ಸ್ನಾನ ಮಾಡುವಾಗ ಇಬ್ಬರು ಮಕ್ಕಳು ಸಾವು

ಇದೀಗ ಗನ್ ಇಟ್ಟೊಕೊಂಡು ಸಿಎಂಗೆ ಹಾರ ಹಾಕಿದ್ದ ರಿಯಾಜ್‌ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ಬೆಳಕಿಗೆ ಬರ್ತಿದ್ದಂತೆ ಸಿದ್ದಾಪುರ ಠಾಣೆಗೆ ದೌಡಾಯಿಸಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಮತ್ತು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಭರಮಪ್ಪಖುದ್ದು ರಿಯಾಜ್ ನನ್ನ ವಿಚಾರಣೆ ಮಾಡಿದ್ದಾರೆ. ಜೊತೆಗೆ ರಿಯಾಜ್ ಗನ್ ಲೈಸೆನ್ಸ್ ಪಡೆದಿದ್ದೇಕೆ? ಚುನಾವಣೆ ವೇಳೆ ಪೊಲೀಸ್ ಸ್ಟೇಷನ್‌ಗೆ ಯಾಕೆ ಒಪ್ಪಿಸಿರಲಿಲ್ಲ. ಅದು ಲೈಸೆನ್ಸ್​ ಇರುವ ವೆಪನ್. ಅವರ ಮೇಲೆ ಈ ಹಿಂದೆ ಹಲ್ಲೆ ಆಗಿತ್ತು. ಅಲ್ಲದೇ ಜೀವ ಭಯ ಇರುವ ಕಾರಣ, ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಒಪ್ಪಿಸುವ ನಿಯಮದಿಂದ ವಿನಾಯತಿ ನೀಡಲಾಗಿದೆ. ಭದ್ರತೆ ವೈಫಲ್ಯಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ತಿಳಿಸಿದ್ದಾರೆ.

ಸಿಎಂ ಭದ್ರತಾ ವೈಫಲ್ಯದ ಬಗ್ಗೆ ‘ದೋಸ್ತಿ’ ನಾಯಕರ ಟೀಕೆ
ಸಿಎಂ ಪ್ರಚಾರದ ವೇಳೆ ಆಗಿರೋ ಭದ್ರತಾ ವೈಫಲ್ಯದ ಬಗ್ಗೆ ದೋಸ್ತಿ ನಾಯಕರು ಖಂಡಿಸಿದ್ದಾರೆ. ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಆಗಬಾರದು ಅಂತ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸಿಎಂ ಬಳಿಯೇ ಗನ್ ಹಿಡಿದುಕೊಂಡು ಹೂಮಾಲೆ ಹಾಕಲು ಹೋಗ್ತಾರಂದ್ರೆ ಹೇಗೆ? ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಕೊಡ್ತೇವೆ ಅಂತ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಅದು ಸೆಕ್ಯೂರಿಟಿಯ ವೈಫಲ್ಯ. ಚುನಾವಣಾ ಸಂದರ್ಭದಲ್ಲಿ ಯಾರು, ಯಾರನ್ನೂ ತಪಾಸಣೆ ಮಾಡಲ್ಲ. ಮುಖ್ಯಮಂತ್ರಿಗಳ ಕಾರ್ಯಕ್ರಮಗಳಲ್ಲಿ ಭದ್ರತಾ ವೈಫಲ್ಯ ಆಗಬಾರದು. ಅದಕ್ಕೆ ಮುಂಜಾಗೃತ ಕ್ರಮ ತೆಗೆದುಕೊಳ್ಳುವುದು ಸೂಕ್ತ -ಹೆಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

ಲೈಸೆನ್ಸ್ ಇರುವ ಗನ್ ಪೊಲೀಸ್ ಕಸ್ಟಡಿಯಲ್ಲಿ ಇರಬೇಕಿತ್ತು. ಅದು ಹೆಂಗೆ ಜೇಬಲ್ಲಿ ಗನ್ ಬಂತು ಎಂಬ ಪ್ರಶ್ನೆ. ಆತ ಗನ್ ಇಟ್ಟುಕೊಂಡು ಬಂದು ರಾಜಾರೋಷವಾಗಿ ಮುಖ್ಯಮಂತ್ರಿಗೆ ಹೂವಿನ ಹಾರ ಹಾಕುತ್ತಾನೆ ಎಂದರೆ, ಅಲ್ಲಿರುವ ಪೊಲೀಸರು ಮಣ್ಣು ತಿನ್ನುತ್ತಿದ್ದರಾ? ಯೋಚನೆ ಮಾಡಬೇಕು. ಅದು ಸಿದ್ದರಾಮಯ್ಯ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ. ಮುಖ್ಯಮಂತ್ರಿಗಳಿಗೆ ಏನೇನೋ ಫೆಸಿಲಿಟಿ ಇರುತ್ತದೆ. ಹೀಗಿದ್ದೂ ಈ ರೀತಿಯ ವ್ಯಕ್ತಿ ಬಂದು ಹಾರ ಹಾಕುತ್ತಾನೆ ಎಂದರೆ ಬೆದರಿಕೆ ಹಾಕೋದಕ್ಕಾ? ಈ ಬಗ್ಗೆಯೂ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಇದನ್ನೂ ಓದಿ: ‘ನನ್ನ ಪಾಲಿಗೆ ಆಕೆ ಸತ್ತಂತೆ..’ ಮಗಳು ಬದುಕಿರುವಾಗಲೇ ಶ್ರದ್ಧಾಂಜಲಿ ಸಲ್ಲಿಸಿ ಹೆತ್ತ ತಂದೆ ಆಕ್ರೋಶ

ಒಟ್ಟಾರೆ, ಸಾರ್ವಜನಿಕ ಸ್ಥಳದಲ್ಲಿ ಪೊಲೀಸರು, ಗನ್ ಮ್ಯಾನ್ ಮುಂದೆಯೇ ಗನ್ ಇಟ್ಕೊಂಡಿದ್ದಂತಹ ವ್ಯಕ್ತಿ ಮುಖ್ಯಮಂತ್ರಿಗಳ ಸಮೀಪಕ್ಕೆ ಹೋಗ್ತಾನೆ, ಅವ್ರಿಗೆ ಹಾರ ಹಾಕ್ತಾನೆ ಅಂದ್ರೆ ಇದು ಸ್ಪಷ್ಟ ಭದ್ರತಾ ಲೋಪವೇ ಸರಿ.. ಈ ಬಗ್ಗೆ ಪೊಲೀಸ್ ಇಲಾಖೆಯೇ ಉತ್ತರಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗನ್ ಇಟ್ಕೊಂಡು ಬಂದು CMಗೆ ಹಾರ ಹಾಕಿದ ಕೇಸ್​; ಭದ್ರತಾ ವೈಫಲ್ಯ ಖಂಡಿಸಿದ ಕುಮಾರಸ್ವಾಮಿ, ಏನಂದ್ರು..?

https://newsfirstlive.com/wp-content/uploads/2024/04/CM-Gun-1.jpg

Load More