ಪಾಕಿಸ್ತಾನಿ ಸೀಮಾ ಹೈದರ್ ಮನೆಗೆ ಹೊಸ ಅತಿಥಿ ಆಗಮನ; ಸಚಿನ್ ಫುಲ್​ ಖುಷ್​!​

author-image
Veena Gangani
Updated On
ಪ್ರೀತಿಗಾಗಿ ಓಡಿ ಬಂದಿರೋ ಸೀಮಾ ಹೈದರ್​ಗೆ ಸಂಕಷ್ಟ; ಭಾರತದ ವಕೀಲರ ನೇಮಿಸಿಕೊಂಡ ಪಾಕ್​ನಲ್ಲಿರುವ ಮೊದಲ ಪತಿ
Advertisment
  • ಪಬ್​ಜೀ ಪ್ರಿಯಕರನಿಗಾಗಿ ಮಕ್ಕಳ ಜತೆ ಭಾರತಕ್ಕೆ ಬಂದಿದ್ದ ಹೈದರ್
  • ಸಾಕಷ್ಟು ರೀಲ್ಸ್​ ಮಾಡುವ ಮೂಲಕ ಫೇಮಸ್ ಆದ ಸೀಮಾ ಹೈದರ್
  • ಹೊಸ ವರ್ಷದ ಆರಂಭಕ್ಕೂ ಮುನ್ನವೇ ಗುಡ್​​ನ್ಯೂಸ್​​ ಕೊಟ್ಟಿದ್ದ ಸೀಮಾ

ಸೀಮಾ ಹೈದರ್​​ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಪಬ್​ಜೀ ಪ್ರಿಯಕರ ಸಚಿನ್ ಪ್ರೀತಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಸೀಮಾ ಹೈದರ್​​ ಸಾಕಷ್ಟು ಸುದ್ದಿಯಾದವರು.

ಇದನ್ನೂ ಓದಿ:ರೆಬೆಲ್​ ಸ್ಟಾರ್​ ಮೊಮ್ಮಗ ಅಂದ್ರೆ ಸುಮ್ನೆನಾ? ಫ್ಯಾನ್ಸ್ ಮನಗೆದ್ದ ಅವಿವಾ ಬಿದ್ದಪ್ಪ; ಟಾಪ್ 10 ಫೋಟೋ ಇಲ್ಲಿವೆ!

ಈಗಂತೂ ಸೀಮಾ ಹೈದರ್​ ಬಗ್ಗೆ ಸದಾ ಒಂದಲ್ಲಾ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ​ ಇರುತ್ತದೆ. ಈಗ ಸೀಮಾ ಹೈದರ್ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಹೌದು, ಪಬ್​ಜೀ ಪ್ರಿಯಕರ ಸಚಿನ್​​ ಮೇಲಿನ ಪ್ರೀತಿಗಾಗಿ ಪಾಕಿಸ್ತಾನದಿಂದ ತನ್ನ ಮಕ್ಕಳನ್ನು ಕರೆದುಕೊಂಡು ಸೀಮಾ ಭಾರತಕ್ಕೆ ಬಂದಿದ್ದರು.

publive-image

ಆ ಬಳಿಕ ಸಚಿನ್​ನನ್ನು ಮದುವೆ ಆಗಿದ್ದರು. ಹೊಸ ವರ್ಷವನ್ನು ಸ್ವಾಗತಿಸುವುದರ ಜೊತೆಗೆ ಸೀಮಾ ಹೈದರ್ ಕೂಡ ಒಂದು ಗುಡ್ ನ್ಯೂಸ್ ಕೊಟ್ಟಿದ್ದರು. ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಅವರು ಸಚಿನ್ ಮೀನಾ ಅವರೊಂದಿಗೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು.

ಈಗ ಗ್ರೇಟರ್ ನೋಯ್ಡಾದಲ್ಲಿರುವ ಕೃಷ್ಣ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಹಿಂದೆ ಸೀಮಾ ಹೈದರ್ ಅವರು 6 ತಿಂಗಳ ಗರ್ಭಿಣಿಯಾಗಿದ್ದಾಗ ಈ ವಿಚಾರವನ್ನು ಖುದ್ದು ಅವರೇ ಹೇಳಿಕೊಂಡಿದ್ದರು. ಸದ್ಯ ಸಚಿನ್​ ಹಾಗೂ ಸೀಮಾ ಹೈದರ್​ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment