‘ಭಾರತದಲ್ಲೇ ಇರಲು ಬಿಡಿ ಪ್ಲೀಸ್​’.. ಪಾಕಿಸ್ತಾನಿ ಸೀಮಾ ಹೈದರ್​ಗೆ ಗಡಿಪಾರು ಭೀತಿ!

author-image
Veena Gangani
Updated On
ಸೀಮಾ ಹೈದರ್ ಪಾಕ್​ಗೆ ಹೋಗಲ್ಲ.. ಭಾರತ ಸರ್ಕಾರದ ಆದೇಶ ಆಕೆಗೆ ಅನ್ವಯಿಸಿಲ್ಲ.. ಕಾರಣ ಏನು..?
Advertisment
  • ನಾನು ಭಾರತದ ಸೊಸೆ ಎಂದ ಪಾಕಿಸ್ತಾನಿ ಸೀಮಾ ಹೈದರ್​
  • ಪಾಕಿಸ್ತಾನಿ ಸೀಮಾ ಹೈದರ್​ ಭಾರತ ಬಿಟ್ಟು ಹೋಗ್ತಾಳಾ?
  • ಪಬ್​ಜೀ ಪ್ರಿಯಕರನಿಗಾಗಿ ಪಾಕ್​ನಿಂದ ಭಾರತಕ್ಕೆ ಎಂಟ್ರಿ

ಸೀಮಾ ಹೈದರ್​​ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಪಬ್​ಜೀ ಪ್ರಿಯಕರ ಸಚಿನ್ ಪ್ರೀತಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಸೀಮಾ ಹೈದರ್​​ ಸಾಕಷ್ಟು ಸುದ್ದಿಯಾದವರು. ಈಗಂತೂ ಸೀಮಾ ಹೈದರ್​ ಬಗ್ಗೆ ಸದಾ ಒಂದಲ್ಲಾ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ​ ಇರುತ್ತದೆ. ಇದೀಗ ನಾನು ಭಾರತದ ಸೊಸೆ, ನನ್ನನ್ನು ಭಾರತದಲ್ಲೇ ಇರಲಿ ಬಿಡಿ ಅಂತ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಪಾಕಿಸ್ತಾನದಲ್ಲಿ ಸುದ್ದಿಯಾದ ಸಿಎಂ ಸಿದ್ದರಾಮಯ್ಯ; ವಿಡಿಯೋ ವೈರಲ್ ಆದ ಮೇಲೆ ಏನಂದ್ರು?

ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್​ಗೆ ಸಂಕಷ್ಟ ಎದುರಾಗಿದೆ. 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತದಲ್ಲಿರೋ ಎಲ್ಲಾ ಪಾಕಿಸ್ತಾನಿ ಪ್ರಜೆಗಳು 48 ಗಂಟೆಗಳ ಒಳಗೆ ದೇಶವನ್ನು ತೊರೆಯುವಂತೆ ಆದೇಶಿಸಿದೆ. ಈ ಬೆನ್ನಲ್ಲೇ ಪಾಕಿಸ್ತಾನದಿಂದ ಸಚಿನ್​ ಜೊತೆಗೆ ವಾಸಿಸಲು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಪಾಕಿಸ್ತಾನದಿಂದ ಬರುವವರು ಮೇ.1ರ ಒಳಗಾಗಿ ಭಾರತಕ್ಕೆ ಮರಳಬೇಕು. ಅಲ್ಲದೇ ಭಾರತದಲ್ಲಿರೋ ಪಾಕ್ ಪ್ರಜೆಗಳಿಗೆ ಇಲ್ಲಿಂದ ತೆರಳಲು 48 ಗಂಟೆಗಳ ಗಡುವು ನೀಡಲಾಗಿದೆ. ಹೀಗಾಗಿ ಸೀಮಾ ಹೈದರ್ ಮತ್ತೆ ಪಾಕಿಸ್ತಾನಕ್ಕೆ ಹೋಗಬೇಕು ಅಂತ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು.

ಆದ್ರೆ ಈಗ ಈ ಬಗ್ಗೆ ಖುದ್ದು ಸೀಮಾ ಹೈದರ್​ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ನಾನು ಪಾಕಿಸ್ತಾನದ ಮಗಳು ಆದ್ರೆ ಈಗ ಭಾರತದ ಸೊಸೆ. ನನ್ನನ್ನೂ ಭಾರತದಲ್ಲೇ ಇರಲು ಬಿಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಆದರೆ ಭಾರತವನ್ನು ಬಿಟ್ಟು ಮತ್ತೆ 4 ಮಕ್ಕಳನ್ನು ಕರೆದುಕೊಂಡು ಪಾಕಿಸ್ತಾನಕ್ಕೆ ಸೀಮಾ ಹೈದರ್​ ಹೋಗ್ತಾರಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment