ಸೀಮಾ ಹೈದರ್ 2.O: ಪಾಕಿಸ್ತಾನದಿಂದ ರಾಜಸ್ಥಾನಕ್ಕೆ ಓಡೋಡಿ ಬಂದ ಯುವತಿ; ಆಮೇಲೇನಾಯ್ತು?

author-image
Gopal Kulkarni
Updated On
ಸೀಮಾ ಹೈದರ್ 2.O: ಪಾಕಿಸ್ತಾನದಿಂದ ರಾಜಸ್ಥಾನಕ್ಕೆ ಓಡೋಡಿ ಬಂದ ಯುವತಿ; ಆಮೇಲೇನಾಯ್ತು?
Advertisment
  • ರಾಜಸ್ಥಾನದಲ್ಲಿ ಮತ್ತೊಂದು ಸೀಮಾ ಹೈದರ್ ಮಾದರಿಯ ಪ್ರೇಮ ಪ್ರಕರಣ
  • ಒಲಿದವನಿಗಾಗಿ ಗಡಿ ದಾಟಿ ಬಂದ ಪಾಕಿಸ್ತಾನದ ಮತ್ತೊಂದು ಪೋರಿ
  • ಪ್ರೀತಿಸಿದವನಿಗೆ ಮದುವೆಯಾಗಿದ್ದು ಗೊತ್ತಿದ್ದರು ‘ಸೀಮೆ‘ ದಾಟಿದ ಲವ್ ಸ್ಟೋರಿ

ಜೈಪುರ: ನಿಮಗೆ ಸೀಮಾ ಹೈದರ್ ಅನ್ನೋ ಮಹಿಳೆಯ ಲವ್​ ಸ್ಟೋರಿ ಗೊತ್ತಿರಬಹುದು. ಕೆಲವು ವರ್ಷಗಳ ಹಿಂದಷ್ಟೇ ಭಾರತೀಯನೊಬ್ಬನನ್ನು ಪ್ರೀತಿಸಿದ ಹುಡುಗಿ ಅವನನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದಳು. ಈಗ ಅದೇ ಮಾದರಿಯ ಮತ್ತೊಂದು ಪ್ರೀತಿಗೆ ಭಾರತ ಮತ್ತು ಪಾಕಿಸ್ತಾನ ಸಾಕ್ಷಿಯಾಗಿವೆ. ಪ್ರೀತಿಗೆ ಯಾವ ಗಡಿಯೂ, ಯಾವ ಸೀಮೆಯೂ ತಡೆಯಲಾರದು ಅನ್ನೋದನ್ನ ಮತ್ತೊಮ್ಮೆ ಸಾಕ್ಷಿಕರಿಸಿದ್ದಾಳೆ. ಸೀಮಾ ಹೈದರ್ ಬಳಿಕ ಮಹ್ವಿಶ ಎಂಬ ಮಹಿಳೆಯೊಬ್ಬಳು ಪಾಕಿಸ್ತಾನದ ಗಡಿಯನ್ನು ದಾಟಿಕೊಂಡು ರಾಜಸ್ಥಾನದ ಚುರು ಜಿಲ್ಲೆಯ ಪಿತಿಸರ್ ಎಂಬ ಗ್ರಾಮಕ್ಕೆ ಬಂದಿದ್ದಾಳೆ. ಅದು ತನ್ನ ಪ್ರೇಮಿಯನ್ನು ಹುಡುಕಿಕೊಂಡು.

ಇದನ್ನೂ ಓದಿ:ಪೊದೆಯಲ್ಲಿ ಯುವತಿಯ ಬರ್ಬರ ಹತ್ಯೆ.. ಅತ್ಯಂತ ಹೇಯ ಕೃತ್ಯಕ್ಕೆ ಬೆಚ್ಚಿ ಬಿದ್ದ ಪೊಲೀಸರು; ಆಗಿದ್ದೇನು?

ಮೂಲಗಳ ಪ್ರಕಾರ ಚುರುವಿನ ರತನ್​ನಗರ ಠಾಣೆಯ ವ್ಯಾಪ್ತಿಗೆ ಬರುವ ಪಿತಿಸಿರ್​ನಲ್ಲಿ ವಾಸವಿರುವ ರೆಹ್ಮಾನ್ ಕುವೈತ್​ನಲ್ಲಿ ಟ್ರಾನ್‌ಸ್ಫೋರ್ಟ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಅಣ್ಣ ತಮ್ಮಂದಿರಲ್ಲಿ ರೆಹಮಾನ್ ದೊಡ್ಡವನು. ಚಿಕ್ಕವನಾದ ರಹೀಂ ಊರಿನಲ್ಲಿಯೇ ಇದ್ದುಕೊಂಡು ಹೊಲ ಗದ್ದೆಯನ್ನು ನೋಡಿಕೊಂಡು ಇದ್ದ. ಅದರ ಜೊತೆಗೆ ಕಿರಾಣಿ ಅಂಗಡಿಯೊಂದನ್ನು ಇಟ್ಟುಕೊಂಡು ಚಿಕ್ಕದಾಗಿ ವ್ಯಾಪಾರವನ್ನು ಮಾಡುತ್ತಿದ್ದ. ಇವರ ತಂದೆ ಅಲಿ ಶೋರ್ ಅನ್ನೋರು ಹೊಲ ಗದ್ದೆಯ ಜೊತೆಗೆ ಪಶುಪಾಲನೆಯನ್ನು ಮಾಡಿಕೊಂಡು ಇದ್ದಾರೆ

ರೆಹಮಾನ್​​ಗೆ ಆಗಲೇ ಒಂದು ಮದುವೆಯಾಗಿತ್ತು. ಅವನ ಹಾಗೂ ಅವನ ಪತ್ನಿಯ ನಡುವೆ ಸಂಬಂಧಗಳು ಚೆನ್ನಾಗಿ ಇರಲಿಲ್ಲ. ಕುವೈತ್​ನಿಂದ ಬಂದಾಗಲೆಲ್ಲಾ ಆತ ಮನೆಯಲ್ಲಿರುವುದಕ್ಕಿಂತ ಹೆಚ್ಚು ಆಚೆಯೇ ಇರುತ್ತಾನೆ ಎಂದು ಆಕೆ ಜಗಳ ತೆಗೆಯುತ್ತಿದ್ದಳು. ಕೊನೆಗೆ ಇಬ್ಬರು ಬೇರೆಯಾದರು. ಅದಾಗಲೇ ರೆಹಮಾನ್ ಹಾಗೂ ಮಹವಿಶ ಜೊತೆ ಮಾತುಕತೆಗಳು ಆರಂಭವಾಗಿದ್ದವು. ಹಜ್ ಯಾತ್ರೆಯಲ್ಲಿ ಮೊದಲ ಬಾರಿ ರೆಹಮಾನ್ ಮಹ್ವಿಶಳನ್ನ ನೋಡಿದ್ದ. ಅಂದಿನಿಂದ ಇಬ್ಬರ ನಡುವೆ ಪ್ರೀತಿಯು ಚಿಗುರೊಡೆದಿತ್ತು. ರೆಹಮಾನ್​ನನ್ನು ಹುಡುಕಿಕೊಂಡು ಮಹ್ವಿಶ ಅವನಿರುವ ಊರಿಗೆ ಬಂದಿದ್ದಾಳೆ.

ಇದನ್ನೂ ಓದಿ: ಜಸ್ಟ್‌ 20 ನಿಮಿಷ.. ತನಿಷ್ಕಾ ಶೋ ರೂಮ್​ಗೆ ನುಗ್ಗಿದ ದರೋಡೆ ಗ್ಯಾಂಗ್‌; ಕೊಳ್ಳೆ ಹೊಡೆದಿದ್ದು ಎಷ್ಟು ಕೋಟಿ?

ಯಾವಾಗ ಮಹ್ವಿಶಾಳ ಸುದ್ದಿ ಫರಿದಾಳ ಕಿವಿಗೆ ಬಿತ್ತೋ ಆಕೆ ನೇರವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಗಂಡನ ವಿರುದ್ಧ ಹಾಗೂ ಮಹ್ವಿಶ ವಿರುದ್ಧ ದೂರು ದಾಖಲಿಸಿದ್ದಾಳೆ. ಅವಳು ಪ್ರೀತಿಯ ಹೆಸರಿನಲ್ಲಿ ಬಂದು ಇಲ್ಲಿ ಪಾಕಿಸ್ತಾನದ ಪರವಾಗಿ ಗೂಢಚಾರಿಕೆ ಮಾಡುವ ಅಪಾಯವಿದೆ ಎಂದು ಕೂಡ ದೂರಿನಲ್ಲಿ ಉಲ್ಲೇಖಿಸಿದ್ದಾಳೆ

ಭಾರತ ಪಾಕಿಸ್ತಾನ ಗಡಿಗಳು ಸದಾ ಗುಂಡಿನ ಚಕಮಕಿಗಳಿಗೆ ಸಾಕ್ಷಿಯಾಗುತ್ತಿದ್ದವು. ಇಂಟರ್​​ನೆಟ್​, ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಆ ಕಡೆಯಿಂದ ಗುಂಡಿನ ಬದಲು ಪ್ರೇಮ ಪಕ್ಷಿಗಳು ಗಡಿದಾಟಿಕೊಂಡು ಹಾರಿ ಬರುತ್ತಿವೆ. ಇದು ಭಾವನಾತ್ಮಕವಾಗಿ ನೋಡಿದಾಗ ಖುಷಿಯ ವಿಷಯವೇ ಆದ್ರೆ ದೇಶದ ಭದ್ರತಾ ದೃಷ್ಟಿಯಿಂದ ನೋಡಿದಾಗ ಅಪಾಯದ ಸುಳಿವು ಕೂಡ ಕಾಣುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment