/newsfirstlive-kannada/media/post_attachments/wp-content/uploads/2025/05/Seema-haider.jpg)
ಪಹಲ್ಗಾಮ್ ದಾಳಿ ಬೆನ್ನಲ್ಲೇ ಮೋದಿ ಸರ್ಕಾರ, ಭಾರತದಲ್ಲಿ ವಾಸಿಸುವ ಪಾಕಿಸ್ತಾನಿ ನಾಗರಿಕರ ವೀಸಾ ರದ್ದುಗೊಳಿಸಿದೆ. ಅವರನ್ನು ಪಾಕ್ಗೆ ವಾಪಸ್ ಕಳುಹಿಸುವ ಪ್ರಯತ್ನ ನಡೆಯುತ್ತಿದೆ. ಅಂತೆಯೇ ಎಲ್ಲಾ ಪಾಕಿಸ್ತಾನಿಯರು ತಮ್ಮ ಪ್ರೀತಿಪಾತ್ರರ ಬಿಟ್ಟು ತವರಿಗೆ ಮರಳಬೇಕಿದೆ.
ಇದನ್ನೂ ಓದಿ: ‘ಅಯ್ಯಯ್ಯೋ, ನಮ್ಮನ್ನು ಕಾಪಾಡಿ..’ ಅಮೆರಿಕ ಮುಂದೆ ಕಣ್ಣೀರಿಟ್ಟು ಬೇಡಿದ ಪಾಕ್ ಪ್ರಧಾನಿ
ಈಗಾಗಲೇ ಅನೇಕರು ಪಾಕ್ಗೆ ಹಿಂತಿರುಗುತ್ತಿದ್ದಾರೆ. ಈ ಮಧ್ಯೆ ಸೀಮಾ ಹೈದರ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆಕೆಯನ್ನೂ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಬೇಕೆಂಬ ಒತ್ತಾಯ ಜೋರಾಗಿದೆ. ಆದರೆ ಸೀಮಾ ಹೈದರ್ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುವ ಸಾಧ್ಯತೆ ತುಂಬಾನೇ ಕಡಿಮೆ ಇದೆ. ಭಾರತ ಸರ್ಕಾರ ಹೊಸ ಆದೇಶ ಸೀಮಾ ಹೈದರ್ಗೆ ಅನ್ವಿಯಿಸಲ್ಲ.
ಏನು ಕಾರಣ..?
ಅಂದು ಸೀಮಾ ಹೈದರ್ ಆನ್ಲೈನ್ನಲ್ಲಿ PUBGಗೆ ಅಡಿಕ್ಟ್ ಆಗಿದ್ದಳು. ಈ ವೇಳೆ ಗ್ರೇಟರ್ ನೋಯ್ಡಾದ ರಬುಪುರ ನಿವಾಸಿ ಸಚಿನ್ ಮೀನಾ ಎಂಬಾತನ ಪರಿಚಯವಾಗಿ, ಪ್ರೀತಿಗೆ ತಿರುಗುತ್ತದೆ. ಮೇ 2023 ರಲ್ಲಿ ನೇಪಾಳ ಮೂಲಕ ಅಕ್ರಮವಾಗಿ ಆಕೆ ಭಾರತಕ್ಕೆ ಬರುತ್ತಾಳೆ. ಇಲ್ಲಿಗೆ ಬಂದ ಆಕೆ, ಆತನನ್ನು ಮದುವೆ ಕೂಡ ಆಗುತ್ತಾಳೆ. ಭಾರತಕ್ಕೆ ಬಂದು 2 ತಿಂಗಳ ಬಳಿಕ ಆಕೆ ದಾಖಲೆಗಳನ್ನು ಸಿದ್ಧಪಡಿಸಲು ವಕೀಲರ ಬಳಿಗೆ ಹೋಗುತ್ತಾಳೆ. ಆಗ ಪೊಲೀಸರಿಗೆ ಗೊತ್ತಾಗುತ್ತದೆ. ನಂತರ ಪೊಲೀಸರು ಸೀಮಾ ಹೈದರ್ ಹಾಗೂ ಸಚಿನ್ ಮೀನಾನನ್ನು ಬಂಧಿಸಿದ್ದರು.
ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಪ್ರವೀಣ್ ನೆಟ್ಟಾರು ಪ್ರಕರಣ ಲಿಂಕ್..?
ನಂತರ ಏನಾಯ್ತು..?
ಸದ್ಯ ಸೀಮಾ ಹೈದರ್ ಜೋಡಿಗೆ ಜಾಮೀನು ಸಿಕ್ಕಿದೆ. ಜಾಮೀನು ನೀಡಿರುವ ಕೋರ್ಟ್ ಷರತ್ತುಗಳನ್ನು ವಿಧಿಸಿದೆ. ವೀಸಾ ಇಲ್ಲದೇ ಭಾರತ ಪ್ರವೇಶಿಸಿದ ತಪ್ಪಿನ ಲಾಭವನ್ನು ಸೀಮಾ ಅನುಭವಿಸುತ್ತಿದ್ದಾಳೆ. ಭಾರತಕ್ಕೆ ಅಕ್ರಮ ಪ್ರವೇಶ ಮಾಡಿ ಅರೆಸ್ಟ್ ಆಗಿದ್ದ ಆಕೆಯ ಪ್ರಕರಣ ವಿಚಾರಣಾ ಹಂತದಲ್ಲಿದೆ. ಹೀಗಾಗಿ ಆಕೆಯನ್ನು ಪಾಕಿಸ್ತಾನಕ್ಕೆ ಕಳುಹಿಸಲು ಅವಕಾಶ ಸದ್ಯಕ್ಕೆ ಇಲ್ಲ. ಕೋರ್ಟ್ನ ಅಂತಿಮ ತೀರ್ಪು ಬರೋವರೆಗೂ ಆಕೆ ಭಾರತದಲ್ಲೇ ಇರಲಿದ್ದಾಳೆ.
ಮೋದಿಗೆ ಮನವಿ..
ಕೆಲವು ದಿನಗಳ ಹಿಂದೆ ಸೀಮಾ ಹೈದರ್ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಆಕೆ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಮನವಿ ಮಾಡಿದ್ದಳು. ನಾನು ಪಾಕಿಸ್ತಾನದ ಮಗಳಾಗಿದ್ದೆ, ಈಗ ಭಾರತದ ಸೊಸೆ. ನನಗೆ ಭಾರತದಲ್ಲಿ ಉಳಿಯಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಳು.
ಇದನ್ನೂ ಓದಿ: ಪಾಕ್ ಯುವತಿಯನ್ನು ಮದುವೆಯಾದ CRPF ಯೋಧನ ವಿರುದ್ಧ ಶಿಸ್ತು ಕ್ರಮ; ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ