/newsfirstlive-kannada/media/post_attachments/wp-content/uploads/2025/05/SEETHA-RAMA.jpg)
ಕಿರುತೆರೆಯ ಅಂಗಳದಲ್ಲೇ ಮೋಸ್ಟ್ ಅವೈಟೆಡ್ ಮೂಮೆಂಟ್ ಅಂದರೆ ಸೀತಾ ರಾಮ ಧಾರಾವಾಹಿಯ ಸ್ಲಾಟ್. ಈ ಧಾರಾವಾಹಿ ಸ್ವಲ್ಪ ಸ್ಪೆಷಲ್ ಅಂದ್ರೆ ತಪ್ಪಾಗೋಲ್ಲ. ಏಕೆಂದರೆ ಕಿರುತೆರೆಗೆ ನಿಧಾನವಾಗಿ ಒಂದೊಂದೆ ಹೆಜ್ಜೆ ಇಟ್ಟುಕೊಂಡು ಧಾರಾವಾಹಿ ತೆರೆ ಮೇಲೆ ಬಂದಿತ್ತು. ಸದ್ಯ ಸೀತಾರಾಮ ಧಾರಾವಾಹಿ ತಂಡದಿಂದ ವೀಕ್ಷಕರಿಗೆ ಶಾಕಿಂಗ್ ಸುದ್ದಿಯೊಂದು ಕಾದಿದೆ.
ಇದನ್ನೂ ಓದಿ: ಜಸ್ಟ್ 7 ತಿಂಗಳಲ್ಲಿ 25 ಮದುವೆ.. 23 ವರ್ಷದ ಸುಂದರಿ ಸಂಚು ಬಾಲಿವುಡ್ ಸಿನಿಮಾನೂ ಮೀರಿಸಿದ ಸ್ಟೋರಿ!
ಹೌದು, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ‘ಸೀತಾ ರಾಮ’ ಧಾರಾವಾಹಿಯ ತನ್ನ ಕಥೆಗೆ ಅಂತ್ಯ ಹಾಡುತ್ತಿದೆ. 2023 ಜುಲೈ 17ರಂದು ಸೀತಾ ರಾಮ ಧಾರಾವಾಹಿ ತೆರೆಗೆ ಬಂದಿತ್ತು. ಆದ್ರೆ 2025ಕ್ಕೆ ಅಂತ್ಯಗೊಳ್ಳುತ್ತಿರೋದು ಅಭಿಮಾನಿಗಳಿಗೆ ಬೇಸರ ತಂದಿದೆ. ಮೊದಲು ಟೈಟಲ್ ಹಾಗೂ ಟೀಸರ್ ಮೂಲಕವೇ ಕುತೂಹಲ ಹೆಚ್ಚಿಸಿತ್ತು. ಸದ್ಯ ಮೇ 20ರಂದು ಸೀತಾರಾಮ ಧಾರಾವಾಹಿಯ ಕೊನೆಯ ದಿನದ ಶೂಟಿಂಗ್ ಮುಗಿದಿದೆ.
ಆ ಶೂಟಿಂಗ್‌ನಲ್ಲಿ ನಟ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ಪದ್ಮಕಲಾ ಡಿ ಎಸ್, ಕಲಾಗಂಗೋತ್ರಿ ಮಂಜು, ಮುಖ್ಯಮಂತ್ರಿ ಚಂದ್ರು, ಸಿಂಧು ರಾವ್, ಪೂಜಾ ಲೋಕೇಶ್, ಜಯದೇವ್ ಮೋಹನ್, ಅಶೋಕ್ ಶರ್ಮಾ, ರೀತು ಸಿಂಗ್ ನೇಪಾಳ, ಪೂರ್ಣಚಂದ್ರ ಮುಂತಾದವರು ಕೊನೆಯ ದಿನದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು.
ಇನ್ನೂ, ಸೀರಿಯಲ್ ಮುಕ್ತಾಯದ ಬಗ್ಗೆ ಸೀತಾರಾಮ ಸೀರಿಯಲ್ ನಟ ಅಶೋಕ ಅವರು ಫ್ಯಾನ್ಸ್ ಪೇಜ್ ಶೇರ್ ಮಾಡಿಕೊಂಡಿದ್ದ ಪೋಸ್ಟ್‌ನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ರೀ ಪೋಸ್ಟ್ ಮಾಡಿಕೊಂಡಿದ್ದಾರೆ.
View this post on Instagram
ಆ ಸ್ಟೋರಿಯಲ್ಲಿ, ಸೀತಾರಾಮ ಧಾರಾವಾಹಿ ಅಂತ್ಯ ಆಗ್ತಿದೆ. ಇದನ್ನು ನಂಬಲಾಗುತ್ತಿಲ್ಲ, ಅರಗಿಸಿಕೊಳ್ಳಲೂ ಆಗ್ತಿಲ್ಲ. ಇದು ನಿಜಕ್ಕೂ ನಮಗೆ ಹೃದಯವಿದ್ರಾವಕ ವಿಚಾರವಾಗಿದೆ. ಇಂದು ಈ ಸೀರಿಯಲ್‌ನ ಕೊನೆಯ ಎಪಿಸೋಡ್ ಶೂಟಿಂಗ್ ಮುಗಿದಿದೆ. ಈ ಧಾರಾವಾಹಿಯಲ್ಲಿ ಪ್ರೀತಿ, ನೆನಪುಗಳು ಎಲ್ಲವೂ ನಮ್ಮೊಳಗಡೆ ಇರುತ್ತವೆ. ಸೀತಾರಾಮ ಧಾರಾವಾಹಿ ರಾಮ್, ಸೀತಾ, ಸಿಹಿ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ ಎಂದಿದ್ದಾರೆ.
ಜೊತೆಗೆ ಸೀತಾರಾಮ ಧಾರಾವಾಹಿ ಡಾ ಅನಂತಲಕ್ಷ್ಮೀ ಪಾತ್ರಧಾರಿಯಲ್ಲಿ ನಟಿಸಿದ್ದ ಗಾಯಕಿ ಶಶಿಕಲಾ ಸುನಿಲ್ ಅವರು ಕೂಡ ಈ ಬಗ್ಗೆ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಸೀತಾ ರಾಮ ಧಾರಾವಾಹಿಯ ಕಡೆಯ ದಿನದ ಶೂಟಿಂಗ್‌ನಲ್ಲಿ ಪ್ರತಿಯೊಬ್ಬ ಕಲಾವಿದರಿಗೂ ಜೀ ವಾಹಿನಿಯಿಂದ ಪ್ರೀತಿಯ ಗೌರವ. ಧನ್ಯವಾದಗಳು ಜೀ ವಾಹಿನಿಗೆ ನನಗೂ ಅರಿವಿರದ ಕಲಾವಿದೆಗೆ ಅದ್ಭುತ ಅವಕಾಶವಿಟ್ಟು ಅದ್ಭುತ ಪಾತ್ರ ನೀಡಿದಕ್ಕೆ. ಧನ್ಯವಾದಗಳು ಡೈರೆಕ್ಟರ್ ಮಧುಸೂದನ್ ಸರ್, ಮಂಜು ಸರ್, ವಸಂತ್ ಸರ್, ಮೋಹನ್ ಸರ್, ಸುಧೀಂದ್ರ ಸರ್. ಧನ್ಯವಾದಗಳು ಧಾರಾವಾಹಿಯ ಎಲ್ಲಾ ಪ್ರೀತಿಯ ಕಲಾವಿದರಿಗೆ. ಧನ್ಯವಾದಗಳು ಪಾತ್ರಕ್ಕೆ ಸಾಗರದಷ್ಟು ಪ್ರೀತಿ ಸುರಿದ ಕರುನಾಡ ಕನ್ನಡಿಗರಿಗೆ ಅಂತ ಬರೆದುಕೊಂಡಿದ್ದಾರೆ.
ಸದ್ಯ ಸೀತಾಳಿಗೆ ಸಿಹಿ ಮೃತಪಟ್ಟಿರೋ ವಿಚಾರ ಗೊತ್ತಾಗಿದೆ, ಅಲ್ಲದೇ ಸುಬ್ಬಿ ನನ್ನ ತನ್ನ ಸಿಹಿ ಅಲ್ಲ ಅನ್ನೋ ಸತ್ಯ ಕೂಡ ಎಲ್ಲರ ಮುಂದೆ ರಿವೀಲ್ ಆಗಿದೆ. ಆದ್ರೆ ನೆಚ್ಚಿನ ಸೀರಿಯಲ್ ಇಷ್ಟು ಬೇಗ ಮುಕ್ತಾಯ ಆಗುತ್ತಿರೋದಕ್ಕೆ ವೀಕ್ಷಕರು ಬೇಸರ ಹೊರ ಹಾಕುತ್ತಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ತಂಡ ಅನೌನ್ಸ್ ಮಾಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ