ಪತಿ ಬರ್ತ್​ ಡೇಗೆ ಸ್ಪೆಷಲ್​ ಗಿಫ್ಟ್ ಕೊಟ್ಟ ಸೀತಾ ರಾಮ ಖ್ಯಾತಿಯ ಮೇಘನಾ ಶಂಕರಪ್ಪ​

author-image
Veena Gangani
Updated On
ಪತಿ ಬರ್ತ್​ ಡೇಗೆ ಸ್ಪೆಷಲ್​ ಗಿಫ್ಟ್ ಕೊಟ್ಟ ಸೀತಾ ರಾಮ ಖ್ಯಾತಿಯ ಮೇಘನಾ ಶಂಕರಪ್ಪ​
Advertisment
  • ಸೀತಾ ರಾಮ ಸೀರಿಯಲ್​ನಲ್ಲಿ ಪ್ರಿಯಾ ಪಾತ್ರದಲ್ಲಿ ಮೇಘನಾ ನಟನೆ
  • ಸೀತಾ ರಾಮ ಸೀರಿಯಲ್​ ಮೂಲಕ ಫೇಮಸ್​ ಆದ ಮೇಘಾನಾ
  • ಪತಿ ಜಯಂತ್​ ಜೊತೆಗೆ ಮೇಘನಾ ಶಂಕರಪ್ಪ ಫುಲ್​ ಜಾಲಿ ಜಾಲಿ

ಸೀತಾರಾಮ ಧಾರಾವಾಹಿಯ ಕ್ಯೂಟ್​ ಬೆಡಗಿ ಪ್ರಿಯಾ ಯಾರಿಗೇ ಗೊತ್ತಿಲ್ಲ. ಬಿಂದಾಸ್​ ಪ್ರಿಯಾ ಅವರು ತರ್ಲೆ, ತಮಾಷೆ ಅಭಿನಯಕ್ಕೆ ವೀಕ್ಷಕರು ಮನಸೋತಿದ್ದರು. ಪ್ರಿಯಾ ಅಶೋಕ ರೀಲ್ ಮದುವೆ ಅಂದ, ಚಂದವಾಗಿ ಮೂಡಿ ಬಂದಿತ್ತು. ಸೀತಾರಾಮ ಧಾರಾವಾಹಿಯಲ್ಲಿ ಅಶೋಕನ ಮನದರಸಿಯಾಗಿರುವ ನಟಿ ಮೇಘನಾ ಶಂಕರಪ್ಪ ಇದೀಗ ಪತಿ ಜೊತೆಗೆ ಜಾಲಿ ಮೂಡ್​ನಲ್ಲಿದ್ದಾರೆ.

ಇದನ್ನೂ ಓದಿ:ಶೆಫಾಲಿ ಜೀವಬಿಟ್ಟಿದ್ದು ಹೃದಯಾಘಾತದಿಂದ ಅಲ್ವಾ? ನಟಿಯ ಸಾವಿನ ಹಿಂದೆ ಹಲವು ಅನುಮಾನ..!

ಹೌದು, ಪ್ರಿಯಾ ಅಲಿಯಾಸ್ ಮೇಘನಾ ಶಂಕರಪ್ಪ ಇತ್ತೀಚಿಗಷ್ಟೇ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪತಿ ಜೊತೆಗೆ ಮೇಘನಾ ಶಂಕರಪ್ಪ ಅವರು ತುಂಬಾ ಅನ್ಯೋನ್ಯವಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಸೋಷಿಯಲ್​ ಮೀಡಿಯಾದಲ್ಲಿ ಆಗಾಗ ಹೊಸ ಹೊಸ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾ ಇರುತ್ತಾರೆ.

ಇನ್ನೂ, ಮೊನ್ನೆಯಷ್ಟೇ ಪತಿ ಜಯಂತ್ ಜೊತೆಗೆ ಮೇಘನಾ ಮೊದಲ ಬಾರಿಗೆ ಲಾಂಗ್ ಬೈಕ್ ರೈಡ್ ಹೋಗಿ ಖುಷಿ ಪಟ್ಟಿದ್ದಾರೆ. ಕೂರ್ಗ್‌ ಕಡೆಗೆ ಬೈಕ್ ಮೇಲೆ ಈ ದಂಪತಿ ಪ್ರವಾಸ ಹೋಗಿದ್ದು, ತಮ್ಮ ಬೈಕ್‌ ರೈಡ್‌ ಅನುಭವವನ್ನು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಮೊನ್ನೆಯಷ್ಟೇ ಮೇಘನಾ ಪತಿ ಜಯಂತ್ ಅವರ ಹುಟ್ಟು ಹಬ್ಬವಿತ್ತು. ಹೀಗಾಗಿ ಬರ್ತ್​ ಡೇಗೆ ರೂಂ ತುಂಬಾ ಮಸ್ತ್​ ಡೆಕೋರೇಟ ಮಾಡಿ ಸರ್​ಪ್ರೈಸ್​ ಕೊಟ್ಟಿದ್ದಾರೆ. ಅಲ್ಲದೇ ಕೇಕ್​ ಕಟ್​ ಮಾಡಿ ವಿಶ್​ ಮಾಡಿದ್ದರು. ಇದಕ್ಕೆ ಪತಿ ಕೂಡ ಫುಲ್ ಖುಷ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment