ಸೀತಾರಾಮ ಅಂತ್ಯ; ನಟಿ ವೈಷ್ಣವಿ ಗೌಡ ಕಡೆಯಿಂದ ಮತ್ತೊಂದು ಗುಡ್​ನ್ಯೂಸ್​!

author-image
Veena Gangani
Updated On
ಸೀತಾರಾಮ ಅಂತ್ಯ; ನಟಿ ವೈಷ್ಣವಿ ಗೌಡ ಕಡೆಯಿಂದ ಮತ್ತೊಂದು ಗುಡ್​ನ್ಯೂಸ್​!
Advertisment
  • ವೀಕ್ಷಕರಿಗೆ ಗುಡ್​ ಬೈ ಹೇಳಲು ಮುಂದಾದ ಕನ್ನಡದ ಟಾಪ್ ಸೀರಿಯಲ್
  • ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಫೇಮಸ್​ ಆಗಿದ್ದ ನಟಿ ವೈಷ್ಣವಿ ಗೌಡ
  • ವೈಷ್ಣವಿ ಗೌಡ, ಅಶೋಕ, ಮುಖ್ಯಮಂತ್ರಿ ಚಂದ್ರು ಸೀರಿಯಲ್​ನಲ್ಲಿ ನಟನೆ

ಕಿರುತೆರೆಯ ಅಂಗಳದಲ್ಲೇ ಮೋಸ್ಟ್ ಅವೈಟೆಡ್ ಮೂಮೆಂಟ್ ಅಂದರೆ ಸೀತಾ ರಾಮ ಧಾರಾವಾಹಿಯ ಸ್ಲಾಟ್. ಈ ಧಾರಾವಾಹಿ ಸ್ವಲ್ಪ ಸ್ಪೆಷಲ್ ಅಂದ್ರೆ ತಪ್ಪಾಗೋಲ್ಲ. ಏಕೆಂದರೆ ಕಿರುತೆರೆಗೆ ನಿಧಾನವಾಗಿ ಒಂದೊಂದೆ ಹೆಜ್ಜೆ ಇಟ್ಟುಕೊಂಡು ಧಾರಾವಾಹಿ ತೆರೆ ಮೇಲೆ ಬಂದಿತ್ತು.  ಸದ್ಯ ಸೀತಾರಾಮ ಧಾರಾವಾಹಿ ತಂಡದಿಂದ ವೀಕ್ಷಕರಿಗೆ ಶಾಕಿಂಗ್​ ಸುದ್ದಿಯೊಂದು ಕಾದಿದೆ.

ಇದನ್ನೂ ಓದಿ:ಸೀತಾರಾಮ ತಂಡದಿಂದ ಬಿಗ್​ ಶಾಕ್​.. ವೀಕ್ಷಕರಿಗೆ ಗುಡ್​ ಬೈ ಹೇಳಲು ಮುಂದಾದ ಟಾಪ್ ಸೀರಿಯಲ್

publive-image

ಹೌದು, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಮುಖ್ಯಭೂಮಿಕೆಯಲ್ಲಿದ್ದ ಸೀತಾ ರಾಮ ಧಾರಾವಾಹಿ ಮುಕ್ತಾಯವಾಗುತ್ತಿದೆ. ತೆರೆಗೆ ಬಂದ ಕೆಲವೇ ದಿನಗಳಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಆದ್ರೆ ಇದೀಗ ಧಾರಾವಾಹಿ ಅಂತ್ಯವಾಗುವ ಸಮಯ ಬಂದಿದೆ. ಈಗಾಗಲೇ ಸೀತಾ ರಾಮ ಸೀರಿಯಲ್‌ನ ಕೊನೇ ದಿನದ ಶೂಟಿಂಗ್‌ನಲ್ಲಿ ಕೂಡ ನಡೆದಿದ್ದು, ಈ ವೇಳೆ ಇಡೀ ತಂಡ ಭಾಗಿಯಾಗಿತ್ತು. ಆ ಭಾವುಕ ಕ್ಷಣಗಳ ಫೋಟೋಗಳನ್ನು ನಟಿ ವೈಷ್ಣವಿ ಗೌಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಬರೆದುಕೊಂಡ ನಟಿ, ಈ ಅಂತ್ಯವು ಉತ್ತಮವೊಂದರ ಆರಂಭ ಮಾತ್ರ. ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಪ್ರಾಜೆಕ್ಟ್‌ಗಳಲ್ಲಿ ಇದು ಒಂದಾಗಿದೆ. ಇದನ್ನು ಮಾಡಿದವರಿಗೆ ಧನ್ಯವಾದ ಹೇಳುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ಸೀತಾ ಎಂದು ಸಹಿ ಹಾಕುತ್ತಿದ್ದೇನೆ. ಆದರೆ ಶೀಘ್ರದಲ್ಲೇ ಅದ್ಭುತವಾದ ಯೋಜನೆಯೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಭರವಸೆ ನೀಡುತ್ತೇನೆ ಅಂತ ಹೇಳಿಕೊಂಡಿದ್ದಾರೆ.


ಅಂದ್ರೆ ಸೀತಾ ರಾಮ ಸೀರಿಯಲ್​ ಮುಗಿಯುತ್ತಿದ್ದಂತೆ ನಟಿ ವೈಷ್ಣವಿ ಗೌಡ ಮತ್ತೆ ತೆರೆ ಮೇಲೆ ಬರೋದಕ್ಕೆ ಸಜ್ಜಾಗಿರಬಹುದು. ಹೀಗಾಗಿ ನಟಿ ಶೀಘ್ರದಲ್ಲೇ ಅದ್ಭುತವಾದ ಯೋಜನೆಯೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ ಅಂತ ಕೊನೆಯಲ್ಲಿ ಬರೆದುಕೊಂಡಿದ್ದಾರೆ. 2023 ಜುಲೈ 17ರಂದು ಸೀತಾ ರಾಮ ಧಾರಾವಾಹಿ ತೆರೆಗೆ ಬಂದಿತ್ತು. ಆದ್ರೆ 2025ಕ್ಕೆ ಅಂತ್ಯಗೊಳ್ಳುತ್ತಿರೋದು ಅಭಿಮಾನಿಗಳಿಗೆ ಬೇಸರ ತಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment