/newsfirstlive-kannada/media/post_attachments/wp-content/uploads/2025/05/gagan.jpg)
- ಗಗನ್ ಚಿನ್ನಪ್ಪಗೆ ಸಖತ್ ಕ್ಲೋಸ್ ನಟ ದರ್ಶನ್ ತಾಯಿ
- ಸೀತಾರಾಮ ಸೀರಿಯಲ್ ಮೂಲಕ ಫೇಮಸ್ ಆಗಿದ್ದ ನಟ
- ದರ್ಶನ್ ತಾಯಿ ಮೀನಮ್ಮ ಬಗ್ಗೆ ನಟ ಗಗನ್ ಚಿನ್ನಪ್ಪ ಏನಂದ್ರು?
ಕನ್ನಡದ ಜನಪ್ರಿಯ ಧಾರಾವಾಹಿ ಸೀತಾರಾಮ ಕೊನೆಗೂ ಮುಕ್ತಾಯವಾಗಿದೆ. ಸರಿಸುಮಾರು 2 ವರ್ಷಗಳ ಕಾಲ ಕಿರುತೆರೆಯಲ್ಲಿ ಪ್ರಸಾರವಾದ ಈ ಧಾರಾವಾಹಿಗೆ ಆರಂಭದಲ್ಲಿ ದೊಡ್ಡಮಟ್ಟದ ಪ್ರೇಕ್ಷಕರಿದ್ದರು. ಕೊನೆಯ ಐದು ಸಂಚಿಕೆಗಳು ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸರಣಿ ಮಾದರಿಯಲ್ಲಿ ರೋಚಕವಾಗಿ ಮೂಡಿ ಬಂದಿದೆ. ಕೊನೆಗೂ ವಿಷವನ್ನೇ ತುಂಬಿಕೊಂಡ ಭಾರ್ಗವಿಗೆ ಶಿಕ್ಷೆ ಆಗಿದೆ. ತನ್ನ ಗಂಡ, ಮಗ ಎಲ್ಲರನ್ನೂ ಕಳೆದುಕೊಂಡು ದೂರವಾಗಿದ್ದಾಳೆ. ಹೀಗೆ ಸೀತಾರಾಮ ಸೀರಿಯಲ್ ಅಂತ್ಯ ಕಾಣಲಿದೆ. ​
ಇದನ್ನೂ ಓದಿ: ಕನ್ನಡ ಕಿರುತೆರೆ ದಂಪತಿ ಮನೆಯಲ್ಲಿ ಸಂಭ್ರಮ..ನಟಿ ಶಿಲ್ಪಾ ರವಿ ಕ್ಯೂಟ್ ಮಗನಿಗೆ ಇಟ್ಟ ಹೆಸರೇನು?
ಇನ್ನೂ, ಇದೇ ಸೀರಿಯಲ್ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದು ಎಂದರೆ ಅದು ರಾಮ. ರಾಮ ಪಾತ್ರಕ್ಕೆ ಬಣ್ಣ ಹಚ್ಚಿದ್ದರು ಗಗನ್​ ಚಿನ್ನಪ್ಪ. ಸದ್ಯ ಇದೇ ಸೀರಿಯಲ್​ ಕೊನೆಯ ದಿನದ ಶೂಟಿಂಗ್​ ವೇಳೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದರು. ಅಲ್ಲದೇ ಸಂದರ್ಶನವೊಂದರಲ್ಲಿ ಕೂಡ ತಾವು ಸೀತಾರಾಮ ಸೀರಿಯಲ್​ನಿಂದ ಎಷ್ಟು ಜನಪ್ರಿಯತೆ ಪಡೆದುಕೊಂಡೆ ಅಂತ ಕೂಡ ವಿವರಿಸಿದ್ದಾರೆ. ಅಷ್ಟೇ ಅಲ್ಲದೇ ನಟ ದರ್ಶನ್ ಅವರ ತಾಯಿ ಮೀನಮ್ಮ ಗಗನ್​ ಚಿನ್ನಪ್ಪ ದೊಡ್ಡ ಅಭಿಮಾನಿಯಂತೆ. ಈ ಬಗ್ಗೆ ಖುದ್ದು ನಟ ಗಗನ್​ ಅವರೇ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಮಾತಾಡಿದ್ದ ಗಗನ್ ಚಿನ್ನಪ್ಪ, ನಾನು ಶಾಲೆಗೆ ಹೋಗುವಾಗಲೇ ನನಗೆ ದರ್ಶನ್​ ಸರ್​ ಗೊತ್ತಿತ್ತು. ದರ್ಶನ್ ಅವರ ತಾಯಿ ನನಗೆ ತುಂಬಾ ಪರಿಚಯ. ನಮ್ಮ ತೋಟದಿಂದ ಬರೋ ಬಟರ್ ಫ್ರೂಟ್ ಎಲ್ಲ ಅವರಿಗೆ ಹೋಗುತ್ತೆ. ಹೀಗಾಗಿ ನಾವು ತುಂಬಾ ಕ್ಲೋಸ್​. ದರ್ಶನ್​ ಸರ್ ಹಾಗೂ ನಾವು ಸಖತ್​ ಕ್ಲೋಸ್​​. ಗಿಳಿಯಿಂದ ನನಗೆ ಕಚ್ಚೋದಕ್ಕೆ ಚೂ ಬಿಡ್ತಾ ಇದ್ರು. ಈಗಲೂ ಫೋನ್ ಮಾಡಿದ್ರೆ 15 ನಿಮಿಷ ಮಾತಾಡ್ತಾರೆ. ನನ್ನ ದೊಡ್ಡ ಫ್ಯಾನ್​ ಅವರು, ನನ್ನ ಮಗ ಅಂತಲೇ ಮಾತಾಡಿಸುತ್ತಾರೆ. ನಮ್ಮ ಕುಟುಂಬಸ್ಥರ ಜೊತೆಗೆ ಸಖತ್​ ಕ್ಲೋಸ್​ ಅವರು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ