/newsfirstlive-kannada/media/post_attachments/wp-content/uploads/2025/03/VINOD-SEHWAG.jpg)
ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರೆ ಸೆಹ್ವಾಗ ಸಹೋದರ ವಿನೋದ್ ಸೆಹ್ವಾಗರನ್ನು ಚಂಡಿಗಢ ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷದ ಹಿಂದೆ ನೀಡಿದ್ದ ಚೆಕ್ಬೌನ್ಸ್ ಪ್ರಕರಣದಲ್ಲಿ ವಿನೋದ್ ಸೆಹ್ವಾಗರ ಬಂಧನವಾಗಿದೆ. ಚಂಡಿಗಢದ ಮನಿಮಾಜ್ರೊ ಪೊಲೀಸ್ ಠಾಣೆಯ ಪೊಲೀಸರು ವಿನೋದ್ ಸೆಹ್ವಾಗ್ರನ್ನು ಬಂಧಿಸಿದ್ದಾರೆ.
ನ್ಯಾಯಲಯದಲ್ಲಿ ಜಾಮೀನಿನ ವಿಚಾರವಾಗಿ ಮಾತನಾಡಿದ ಪೊಲೀಸರು, ಈಗಾಗಲೇ ವಿನೋದ್ ಸೆಹ್ವಾಗ್ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮತ್ತೆ ಅದೇ ಅಪರಾಧವನ್ನು ಮಾಡಿದ್ದಾರೆ ಎಂದು ಆರೋಪಿಸಿದೆ. ಸದ್ಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಮಾರ್ಚ್ 10ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದು ಸದ್ಯ ಸೆಹ್ವಾಗರ ಸಹೋದರ ಪೊಲೀಸ್ ಬಂಧನದಲ್ಲಿಯೇ ಇದ್ದಾರೆ.
ಇದನ್ನೂ ಹೇಳಿ:ಫೈನಲ್ ವೇಳೆ ಹೊರ ಬಿದ್ದ ಹೊಸ ಲವ್ ಸ್ಟೋರಿ.. ಇದು ಕ್ರಿಕೆಟರ್ನ ಸುಂದರ್ ಪ್ರೇಮ್ ಕಹಾನಿ!
ವಿನೋದ್ ಮತ್ತು ಅವರೊಂದಿಗಿನ ಇಬ್ಬರು ಸಹಚರರು M/s Xalta Food Beverages Private Limitedನ ನಿರ್ದೇಶಕರಾಗಿದ್ದರು. ಈ ಒಂದು ಕಂಪನಿ ವಿರುದ್ಧ ಐಪಿಸಿ ಸೆಕ್ಷನ್ 174-A ಅಡಿಯಲ್ಲಿ ಕೇಸ್ ಬುಕ್ ಆಗಿತ್ತು. ಮನಿಮಾಜ್ರೊ ಪೊಲೀಸ್ ಸ್ಟೇಷನ್ನಲ್ಲಿ 2023ರಲ್ಲಿ ಪ್ರಕರಣದ ದಾಖಲಾಗಿತ್ತು
ಕೃಷ್ಣರಾವ್ ಮೋಹನ್ ಖನ್ನಾ ಅವರ ದೂರಿನನ್ವಯ ಎಫ್ಐಆರ್ ದಾಖಲಾಗಿದ್ದು. ಶ್ರೀನೈನಾ ಪ್ಲಾಸ್ಟಿನ್ ಐಎನ್ಸಿ, ಖಟ್ಟಾ ಬಡ್ಡಿ ಸಂಸ್ಥೆಯ ಮಾಲೀಕರು ನೀಡಿದ್ದ ಚೆಕ್ ಬೌನ್ಸ್ ಆಗಿದ್ದು. ಖನ್ನಾ ನೀಡಿದ ದೂರಿನ ಮೇಲೆ ಎಫ್ಐಆರ್ ದಾಖಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ