ನಿತ್ಯಾನಂದ ಬದುಕಿದ್ದಾರಾ? ದೇಹತ್ಯಾಗ ಮಾಡಿದ್ದಾರಾ? ಕೊನೆಗೂ ‘ಕೈಲಾಸದಿಂದ ಬಂತು ಅತಿ ದೊಡ್ಡ ಸುದ್ದಿ‘!

author-image
Gopal Kulkarni
Updated On
3,900 ಚದರ ಕಿ.ಮೀ ಭೂಕಬಳಿಕೆಗೆ ಯತ್ನ.. ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ನಿತ್ಯಾನಂದ! ಅಸಲಿಯತ್ತು ಏನು?
Advertisment
  • ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ದೇಹತ್ಯಾಗವಾಯ್ತಾ?
  • ಏನಿದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸಾವಿನ ಸುದ್ದಿ?
  • ನಿತ್ಯಾನಂದನ ಸಾವಿನ ಬಗ್ಗೆ ಕೈಲಾಸದಿಂದಲೇ ಬಂತು ‘ಅಧಿಕೃತ ಸ್ಪಷನೆ‘

ಹಲವು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡು, ನೂರಾರು ಕೇಸ್​ಗಳನ್ನು ಎದುರಿಸುತ್ತಾ ಕೊನೆಗೆ ದೇಶವನ್ನೇ ತೊರೆದು. ಕೈಲಾಸವೆಂಬ ತನ್ನದೇ ಒಂದು ಭೂಮಿಯನ್ನು ಮಾಡಿಕೊಂಡು ಅಲ್ಲಿ ಜೀವನ ಸಾಗಿಸುತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸತ್ತು ಹೋದನಾ? ಹೀಗಂತ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಹರಡುತ್ತಿರುವುದೇಕೆ. ನಿತ್ಯಾನಂದನ ಭಕ್ತರು ಈ ಬಗ್ಗೆ ಹೇಳುತ್ತಿರುವುದೇನು?

ಇದನ್ನೂ ಓದಿ:ಪ್ರೀತಿಯ ಶ್ವಾನದ ಜೊತೆ ಮತ್ತೆ ಒಂದಾದ ಸುನಿತಾ ವಿಲಿಯಮ್ಸ್.. ಮನಮಿಡಿಯುವ ವಿಡಿಯೋ ಇಲ್ಲಿದೆ!

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಏಪ್ರಿಲ್ 1 ರಿಂದ ನಿತ್ಯಾನಂದ ಇನ್ನಿಲ್ಲ ಎಂದು ದೊಡ್ಡ ಮಟ್ಟದಲ್ಲಿ ಸುದ್ದಿ ಹರಿದಾಡತೊಡಗಿದೆ. ಬಹುತೇಕ ಜನರು ಸ್ವಯಂಘೋಷಿತ ದೇವಮಾನವ ಸತ್ತೇ ಹೋಗಿರುವ ಎಂದು ತಿಳಿದುಕೊಂಡು ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ. ಈ ದೇಶದಲ್ಲಿರುವ ಆತನ ಅನೇಕ ಭಕ್ತರಿಗೆ ಶಾಕ್​ ಕೂಡ ಆಗಿತ್ತು. ಆದ್ರೆ ಈಗ ಇದರ ಬಗ್ಗೆ ನಿತ್ಯಾನಂದನ ಕೈಲಾಸದ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸ್ಪಷ್ಟನೆ ನೀಡಲಾಗಿದೆ. ನಿತ್ಯಾನಂದ ಸ್ವಾಮಿ ಆರೋಗ್ಯವಾಗಿದ್ದಾರೆ. ಇಷ್ಟೇ ಅಲ್ಲ ಸಕ್ರಿಯವಾಗಿ ಯುಗಾದಿ ಹಬ್ಬದಲ್ಲೂ ಪಾಲ್ಗೊಂಡಿದ್ದಾರೆ. ಸುಳ್ಳು ಸುದ್ದಿಗಳ ಮೂಲಕ ಹಿಂದೂ ಸರ್ವೋಚ್ಚ ಪೀಠಾಧಿಪತಿಗೆ ಅವಮಾನ ಮಾಡಲಾಗುತ್ತಿದೆ. ಇದನ್ನು ಸಹಿಸಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೆ ಈ ಸ್ಪಷ್ಟನೆ ಅನುಮಾನ ಹೆಚ್ಚಿಸಿದೆ.

ಇದನ್ನೂ ಓದಿ:ಭಾರತದಿಂದ ತುಳಸಿ ಎಲೆಗಳನ್ನು ಆಮದು ಮಾಡಿಕೊಳ್ಳುತ್ತಿವೆ ಈ 80 ದೇಶಗಳು! ಕಾರಣವೇನು ಗೊತ್ತಾ?

ನಿತ್ಯಾನಂದನ ಅಧಿಕೃತ ಕೈಲಾಶ ಪೇಜ್ ಮೂಲಕ ಈ ಸ್ಪಷ್ಟನೆ ನೀಡಲಾಗಿದೆ. ಇದೇ ವೇಳೆ ದೊಡ್ಡ ಸಂದೇಶ ನೀಡಲಾಗಿದೆ. ಆದರೆ ಈ ಸ್ಪಷ್ಟನೆ ವೇಳೆ ಬಳಸಿರುವ ಫೋಟೋ 15 ವರ್ಷ ಹಳೆಯ ಪೋಟೋ ಆಗಿದೆ. ನಿತ್ಯಾನಂದ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟನೆ ನೀಡುವಾಗ ಇತ್ತೀಚಿನ ಫೋಟೋ ಬಳಸಬೇಕಿತ್ತು. ಆದರೆ 15 ವರ್ಷ ಹಳೇ ಫೋಟೋವನ್ನು ಬಳಸಿದ್ದು ಯಾಕೆ ಅನ್ನೋ ಅನುಮಾನ ಶುರುವಾಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಲವು ಪ್ರಶ್ನೆ ಎದ್ದಿದೆ.

publive-image

70 ಬಾರಿ ಹತ್ಯೆ ಪ್ರಯತ್ನ ನಡೆದಿದೆ!
ನಿತ್ಯಾನಂದ ಸ್ವಾಮಿ ವಿರುದ್ದ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಸ್ವಾಮಿಗೆ ಅಪಮಾನಿಸುವ ಹಾಗೂ ಜನಪ್ರಿಯತೆಯನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಇದು ಕೋಟ್ಯಾಂತರ ಹಿಂದೂಗಳಿಗೆ ಮಾಡಿದ ಅಪಮಾನವಾಗಿದೆ.ಕಾನೂನಿನ ಉಲ್ಲಂಘನೆಯಾಗಿದೆ. ಸುಳ್ಳು ಸುದ್ದಿ ಹರಡುವ ಮೂಲಕ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದೆ. ಈಗಾಗಲೇ ನಿತ್ಯಾನಂದ ಸ್ವಾಮಿ ಮೇಲೆ 70 ಬಾರಿ ಹತ್ಯೆ ಪ್ರಯತ್ನ ನಡೆದಿದೆ. ಆದರೆ ಪ್ರತಿ ಪ್ರಯತ್ನವೂ ವಿಫಲವಾಗಿದೆ. ಇದೀಗ ಸುಳ್ಳು ಸುದ್ದಿ, ನಿಯಮ ಬಾಹಿರವಾಗಿ ಕೆಲ ಹಿತಾಸಕ್ತಿಗಳು ಕೆಲಸ ಮಾಡುತ್ತಿದೆ ಎಂದು ಕೈಲಾಸ ತನ್ನ ಅಧಿಕೃತ ಸ್ಪಷ್ಟನೆಯಲ್ಲಿ ಹೇಳಿದೆ.

publive-image

4 ಸಾವಿರ ಕೋಟಿ ಯಾರಿಗೆ?
ಬೆಂಗಳೂರಿನ ಹೊರವಲಯದಲ್ಲಿರುವ ಬಿಡದಿ, ಗುಜರಾತ್ ನ ಅಹ್ಮದಾಬಾದ್, ಸೇರಿದಂತೆ ದೇಶದ 14 ಕಡೆಗಳಲ್ಲಿ ತನ್ನದೇ ಆಶ್ರಮ ಹೊಂದಿರುವ ನಿತ್ಯಾನಂದನಿಗೆ ಸುಮಾರು 4 ಸಾವಿರ ಕೋಟಿ ರೂ.ಗಳಷ್ಟು ಬೆಲೆಬಾಳುವ ಆಸ್ತಿಯಿದೆ ಎಂಬ ಮಾಹಿತಿಗಳು ಲಭ್ಯವಿವೆ. ಆದರೆ, 2023ರಲ್ಲಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಬಂದಿದ್ದ ವರದಿಯೊಂದರ ಪ್ರಕಾರ, ಆತನ ಆಸ್ತಿ 10,000 ಕೋಟಿ ರೂ.ಗೂ ಮೀರಿದ್ದು! ಈ ಆಸ್ತಿಗಾಗಿ ಈಗ ನಿತ್ಯಾನಂದನ ಎರಡು ಬಣಗಳ ನಡುವೆ ಕಿತ್ತಾಟವಾಗ್ತಿದ ಎನ್ನುವ ಮಾಹಿತಿಯೂ ಇದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment