newsfirstkannada.com

ಕೇಂದ್ರ ಸರ್ಕಾರದಿಂದ ಗುಡ್​ನ್ಯೂಸ್​​.. ಇನ್ಮುಂದೆ ಅತೀ ಕಡಿಮೆ ಬೆಲೆಗೆ ಸಿಗುತ್ತೆ ಅಕ್ಕಿ; 1 ಕೆಜಿ ಎಷ್ಟು..?

Share :

Published February 7, 2024 at 6:41am

  ಬಡವರಿಗಾಗಿ ಬಂತು ‘ಭಾರತ್ ಬ್ರ್ಯಾಂಡ್’​​ ಅಕ್ಕಿ

  1 ಕೆ.ಜಿ 29 ರೂ. 5, 10 ಕೆ.ಜಿ ಪ್ಯಾಕೇಟ್​​ನಲ್ಲಿ ಸೇಲ್

  ಬೆಂಗಳೂರಲ್ಲಿ ಮಾತ್ರ ಭಾರತ್ ಬ್ರ್ಯಾಂಡ್​​​ ಲಭ್ಯ

ಬೆಲೆ ಏರಿಕೆಯಿಂದ ತತ್ತರಿಸ್ತಿದ್ದ ಸಾಮಾನ್ಯ ಜನರಿಗೆ ಕೇಂದ್ರ ಸರ್ಕಾರ ಗುಡ್​ ನ್ಯೂಸ್ ಕೊಟ್ಟಿದೆ. ಜನ ಸಾಮಾನ್ಯರಿಗಾಗಿಯೇ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಡಿಮೆ ಬೆಲೆಗೆ ಬೆಸ್ಟ್ ಅಕ್ಕಿ ಮಾರಾಟ ಮಾಡಲು ನಿರ್ಧಾರ ಮಾಡಿದೆ. ಈ ವಿಚಾರ ಕೇಳಿ ದುಬಾರಿ ದುನಿಯಾದಿಂದ ಬೇಸತ್ತಿದ್ದ ಜನ ಸಾಮಾನ್ಯ ಕೂಡ ಫುಲ್​ ಖುಷ್ ಆಗಲಿದ್ದಾನೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರತ್ ಬ್ರ್ಯಾಂಡ್ ಪ್ರಾರಂಭವಾಗಲಿದೆ. ಈ ಮೂಲಕ ಅಕ್ಕಿ ಪ್ರತಿ ಕೆ.ಜಿಗೆ ಕೇವಲ 29 ರೂಪಾಯಿಯಂತೆ ಗ್ರಾಹಕರಿಗೆ ಅಕ್ಕಿ ಮಾರಾಟ ಮಾಡಲಾಗ್ತಿದೆ. ಈ ಮಾರಾಟ ದೇಶದಾದ್ಯಂತ ಆರಂಭವಾಗಿದ್ದು, ಸಿಲಿಕಾನ್​ ಸಿಟಿಯಲ್ಲಿ ಈಗಾಗಲೇ ಚಾಲ್ತಿಗೆ ಬಂದಿದೆ.

ಭಾರತ್​ ಬ್ರ್ಯಾಂಡ್​ ಅಕ್ಕಿ ಮಾರಾಟ ಆರಂಭ!

ಸಿಲಿಕಾನ್ ಸಿಟಿಯಲ್ಲಿ ಚೀಪ್​ ಅಂಡ್​ ಬೆಸ್ಟ್ ಆದಂತಹ ಭಾರತ್ ಬ್ರ್ಯಾಂಡ್​ ಅಕ್ಕಿ ಮಾರಾಟ ಶುರುವಾಗಿದೆ. ಗ್ರಾಹಕರಿಗೂ ಆನ್​ಲೈನ್​ ಮೂಲಕ ಸಹ ಸಿಗಲಿದ್ದು, ಪ್ರತಿ ಕೆ.ಜಿ ಅಕ್ಕಿಗೆ 29 ರೂಪಾಯಿ ದರ ನಿಗದಿ ಮಾಡಲಾಗಿದೆ. ಇನ್ನು, 5 ರೂಪಾಯಿ ಹಾಗೂ 10 ರೂಪಾಯಿ ಪ್ಯಾಕೆಟ್​ಗಳಲ್ಲಿ ಅಕ್ಕಿ ದೊರೆಯಲಿದೆ. ಇನ್ನು, ಕೇಂದ್ರೀಯ ಭಂಡಾರಗಳು ಹಾಗೂ ಇ-ಕಾಮರ್ಸ್​ ತಾಣಗಳ ಮೂಲಕ ಅಕ್ಕಿ ಮಾರಾಟ ಮಾಡಲಾಗ್ತಿದೆ. ಮೊದಲ ಹಂತದಲ್ಲಿ 5 ಲಕ್ಷ ಟನ್ ಅಕ್ಕಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.

ಈಗಾಗಲೇ ಭಾರತ್ ಆಟವನ್ನ ಪ್ರತಿ ಕೆ.ಜಿಗೆ 27.50 ರೂಪಾಯಿಗೆ ಹಾಗೂ ಭಾರತ್ ದಾಲ್ ಅಕ್ಕಿಯನ್ನ ಕೆ.ಜಿಗೆ 60 ರೂಪಾಯಿಗೆ ಕೇಂದ್ರ ಸರ್ಕಾರ ಮಾರಾಟ ಮಾಡ್ತಿದೆ. ಇನ್ನೊಂದು ವಾರದಲ್ಲಿ ಇತರೆ ಜಿಲ್ಲೆಗಳ ಗ್ರಾಹಕರಿಗೆ ಈ ಸೇವೆ ಸಿಗಲಿದೆ. ಬಿಗ್ ಬಾಸ್ಕೆಟ್, ಫ್ಲಿಪ್‌ಕಾರ್ಟ್, ರಿಲೈಯನ್ಸ್ ಸ್ಟೋರ್ಸ್, ಸ್ಟಾರ್ ಹೈಪರ್ ಬಝಾರ್‌ಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇಂದಿನಿಂದ ರಿಲೈಯನ್ಸ್ ಸ್ಟೋರ್ಸ್‌ಗಳಲ್ಲಿ ಅಕ್ಕಿ ಸಿಗಲಿದೆ.

ಕೆ.ಜಿಗೆ 29 ₹.. 5 ಹಾಗೂ 10 ಕೆ.ಜಿ ಪ್ಯಾಕೆಟ್​ನಲ್ಲಿ ಮಾರಾಟ!

ಬೆಂಗಳೂರಿಗೆ ಮಾತ್ರ ಕೇಂದ್ರದ ಅಕ್ಕಿ ಸಿಗಲಿದೆ. ಮಂಡ್ಯ, ಈಗೇ ಕ್ರಮವಾಗಿ ಎಲ್ಲ ಜಿಲ್ಲೆಗಳಿಗೂ‌ 29 ರೂಪಾಯಿಗೆ ಅಕ್ಕಿ ಸಿಗಲಿದೆ. ಭಾರತ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದಿಂದ 7 ಸಂಚಾರಿ ವಾಹನಗಳಲ್ಲಿ ಮಾರಾಟ ಪ್ರಾರಂಭವಾಗಿದೆ. ನಗರದ ವಿವಿಧೆಡೆ ಈ ವಾಹನಗಳು ಸಂಚರಿಸಿ ಅಕ್ಕಿ ಮಾರಾಟವಾಗಲಿದೆ. ಕೇಂದ್ರ ಸರ್ಕಾರ ಜನರಿಗೆ ಅನುಕೂಲವಾಗಲಿ ಅನ್ನೋ ನಿಟ್ಟಿನಲ್ಲಿ ಕಡಿಮೆ ಬೆಲೆಗೆ ಅಕ್ಕಿ ಮಾರಾಟ ಮಾಡೋ ನಿರ್ಧಾರ ಮಾಡಿದೆ. ಇನ್ನು, ಮುಂದಿನ ದಿನಗಳಲ್ಲಿ ಜನ ಸಾಮಾನ್ಯನಿಗೆ ಎಷ್ಟರ ಮಟ್ಟಿಗೆ ಸಹಾಯಕವಾಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಂದ್ರ ಸರ್ಕಾರದಿಂದ ಗುಡ್​ನ್ಯೂಸ್​​.. ಇನ್ಮುಂದೆ ಅತೀ ಕಡಿಮೆ ಬೆಲೆಗೆ ಸಿಗುತ್ತೆ ಅಕ್ಕಿ; 1 ಕೆಜಿ ಎಷ್ಟು..?

https://newsfirstlive.com/wp-content/uploads/2023/06/Rice.jpg

Load More