/newsfirstlive-kannada/media/post_attachments/wp-content/uploads/2024/09/Smartphone-1.jpg)
ನಿಮ್ಮ ಹಳೆಯ ಫೋನ್ ಮಾರಾಟ ಮಾಡ್ತಿದ್ದೀರಾ? ಎಕ್ಸ್ಚೇಂಜ್ ಆಫರ್ನಲ್ಲಿ ಹೊಸ ಫೋನ್ ಖರೀದಿ ಮಾಡುವ ಪ್ಲಾನ್ ಇದ್ಯಾ? ಯಾವುದಕ್ಕೂ ಹುಷಾರಾಗಿರಿ! ನಿಮ್ಮ ಫೋನ್ ಪರಿಚಯವಿಲ್ಲದವರಿಗೆ ಮಾರಾಟ ಮಾಡಿದ್ರೆ ತೊಂದರೆಗೆ ಸಿಲುಕುತ್ತೀರಿ ಎಂದು ತೆಲಂಗಾಣ ಸೈಬರ್ ಸೆಕ್ಯುರಿಟಿ ಬ್ಯೂರೋ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಹಳೆಯ ಮೊಬೈಲ್ ಫೋನ್‌ಗಳನ್ನು ಖರೀದಿಸಿ ಸೈಬರ್ ಅಪರಾಧ ಎಸಗುತ್ತಿರುವ ಪ್ರಕರಣಗಳು ಒಂದರ ಹಿಂದೆ ಒಂದರಂತೆ ಬೆಳಕಿಗೆ ಬರುತ್ತಿವೆ. ಕಳೆದ ಆಗಸ್ಟ್‌ನಲ್ಲಿ ತೆಲಂಗಾಣದ ರಾಮಗುಂಡಂ ಸೈಬರ್ ಕ್ರೈಂ ಪೊಲೀಸರು ಬಿಹಾರ ಮೂಲದ ಗ್ಯಾಂಗ್ ಒಂದನ್ನು ಬಂಧಿಸಿತ್ತು. ಅವರಿಂದ ಸುಮಾರು 4,000ಕ್ಕೂ ಹೆಚ್ಚು ಸೆಲ್‌ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಟ್ರಂಪ್ ಭದ್ರಕೋಟೆಯಲ್ಲಿ ಕಮಲಾ ಹ್ಯಾರಿಸ್ಗೆ ಗೆಲುವು; ಅಮೆರಿಕ ಅಧ್ಯಕ್ಷರಾಗೋದು ಯಾರು?
ತನಿಖೆ ವೇಳೆ ಹಲವು ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ. ಬಂಧಿತ ರಾಜಸ್ಥಾನ ಗ್ಯಾಂಗ್‌ಗೂ ಈ ಹಳೆಯ ಫೋನ್‌ಗಳನ್ನು ಖರೀದಿಸಿ ಮಾರಾಟ ಮಾಡುವ ಗ್ಯಾಂಗ್‌ಗಳಿಗೂ ನೇರ ಲಿಂಕ್ ಇರೋದು ಗೊತ್ತಾಗಿದೆ. ಹಳೆಯ ಸೆಲ್‌ಫೋನ್‌ಗಳನ್ನು ಕಿಲೋ ಲೆಕ್ಕದಲ್ಲಿ ಖರೀದಿಸುತ್ತಿದ್ದರು. ನಂತರ ಅವುಗಳನ್ನು ಸೈಬರ್ ಕ್ರಿಮಿನಲ್ಗಳಿಗೆ ಮಾರಾಟ ಮಾಡ್ತಿರೋದು ಬೆಳಕಿಗೆ ಬಂದಿದೆ.
ಅದಕ್ಕೆ ಏನು ಮಾಡಬೇಕು?
ನೀವು ಫೋನ್ ಮಾರಾಟ ಮಾಡುವ ಮೊದಲು ಡಿಲೀಟ್ ಆಗಿರುವ ಡೇಟಾವನ್ನು ಬ್ಯಾಕಪ್ ಮಾಡಿಕೊಳ್ಳಿ. ನಂತರ ಫ್ಯಾಕ್ಟರಿ ರೀಸೆಟ್ ಆಯ್ಕೆಯ ಮೂಲಕ ಫೋನ್ನಲ್ಲಿರುವ ಎಲ್ಲಾ ಡೇಟಾಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಬೇಕು. ಹೀಗೆ ಮಾಡುವುದರಿಂದ ಇತರರು ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಾಗಲ್ಲ.
ಇಲ್ಲದಿದ್ದರೆ, ನಿಮ್ಮ ವೈಯಕ್ತಿಕ ವಿಚಾರಗಳನ್ನು ಸಂಗ್ರಹಿಸಿ ನಿಮಗೆ ಮೋಸ ಮಾಡುತ್ತಾರೆ. ಲಾಗಿನ್ ಆಗಿರುವ ಎಲ್ಲಾ ಜೊತೆಗೆ Google ಅಕೌಂಟ್ಗಳಿಂದ ಲಾಗ್ಔಟ್ ಆಗಿ ಅಪ್ಲಿಕೇಷನ್ಗಳನ್ನು ಅನ್ಇನ್ಸ್ಟಾಲ್ ಮಾಡಿ. ಸೆಟ್ಟಿಂಗ್‌ಗಳಲ್ಲಿ ಯ್ಯೂಸರ್ ಮತ್ತು ಅಕೌಂಟ್ ಆಯ್ಕೆಗೆ ಹೋಗಿ ರಿಮೂವ್ ಮಾಡಿ. ಅಷ್ಟೆಲ್ಲ ಮಾಡಿಯೂ ಅಪರಿಚಿತರಿಗೆ ಸೇಲ್ ಫೋನ್ ಮಾರಾಟ ಮಾಡಬೇಡಿ. ಮಾರಾಟ ಮಾಡುವ ಅಗತ್ಯಬಿದ್ದರೆ ಅವರ ವಿಳಾಸ, ಪುರಾವೆ, ಭಾವಚಿತ್ರ ಮತ್ತು ಸಹಿ ಹಾಕಿಸಿಕೊಂಡು ಫೋನ್ ಮಾರಾಟ ಮಾಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಆಕಾಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರೂ ಕರ್ತವ್ಯ ಮರೆಯದ ಸುನೀತಾ ವಿಲಿಯಮ್ಸ್; ಮತದಾನ ಹೇಗೆ ಮಾಡ್ತಿದ್ದಾರೆ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ