newsfirstkannada.com

‘BJP ಅಭ್ಯರ್ಥಿ ಅಡುಗೆ ಮಾಡೋದಕ್ಕೆ ಮಾತ್ರ ಲಾಯಕ್ಕು’- ಶಾಮನೂರು ಶಿವಶಂಕರಪ್ಪ ಲೇವಡಿ

Share :

Published March 27, 2024 at 4:52pm

Update March 27, 2024 at 6:50pm

  ‘ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕೂ’

  ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿಕೆ

  ಬಿಜೆಪಿ ಸಂಸದ ಸಿದ್ದೇಶ್ವರ್ ಪತ್ನಿ ವಿರುದ್ಧ ಕಿಡಿಕಾರಿದ ಲಿಂಗಾಯತ ಲೀಡರ್

ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ಬಿಜೆಪಿ ಮಹಿಳಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ ಅವರ ಬಗ್ಗೆ ಲೇವಡಿ ಮಾಡಿದ್ದಾರೆ. ಬಿಜೆಪಿ ಸಂಸದ ಸಿದ್ದೇಶ್ವರ್ ಪತ್ನಿ ಅಡುಗೆ ಮಾಡೋದಕ್ಕೆ ಲಾಯಕ್ಕು. ಮೊದಲು ದಾವಣಗೆರೆ ಜಿಲ್ಲೆಯ ಸಮಸ್ಯೆ ತಿಳಿಯಲಿ. ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದು ಪ್ರಧಾನಿ ಮೋದಿ ಅವರಿಗೆ ಕಮಲದ ಹೂ ಅರ್ಪಿಸುತ್ತೇನೆ ಅಂತಾರೆ. ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕೂ ಎಂದಿದ್ದಾರೆ.

ದಾವಣಗೆರೆ ಬಂಟರ ಭವನದಲ್ಲಿ ಇಂದು ಕಾಂಗ್ರೆಸ್‌ ಜನಪ್ರತಿನಿಧಿಗಳು ಮುಖಂಡರ ಸಭೆ ನಡೀತು. ಈ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಮನೆಯಿಂದ ಒಬ್ಬ ಮಹಿಳೆ ಸ್ಪರ್ಧೆ ಮಾಡಿದ್ದಾರೆ ಅನ್ನೋದು ಮರೆತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿದೆ. ಪ್ರಭಾ ಮಲ್ಲಿಕಾರ್ಜುನ್‌ ಅವರು ಸಚಿವ ಎಸ್.ಎಸ್‌ ಮಲ್ಲಿಕಾರ್ಜುನ್ ಅವರ ಪತ್ನಿ. ಕಾಂಗ್ರೆಸ್‌ ಮಹಿಳಾ ಅಭ್ಯರ್ಥಿ ಕಣದಲ್ಲಿ ಇರುವಾಗಲೇ ಬಿಜೆಪಿ ಮಹಿಳಾ ಅಭ್ಯರ್ಥಿ ಬಗ್ಗೆ ಶಾಮನೂರು ಶಿವಶಂಕರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘BJP ಅಭ್ಯರ್ಥಿ ಅಡುಗೆ ಮಾಡೋದಕ್ಕೆ ಮಾತ್ರ ಲಾಯಕ್ಕು’- ಶಾಮನೂರು ಶಿವಶಂಕರಪ್ಪ ಲೇವಡಿ

https://newsfirstlive.com/wp-content/uploads/2024/03/Shamanur-Shivashankarappa-1.jpg

Load More