ಕಲಬುರಗಿ ಕೋರ್ಟ್‌ನಲ್ಲಿ ಹಿರಿಯ ನ್ಯಾಯಾಧೀಶರಿಗೆ ಹೃದಯಾಘಾತ.. ಘೋರ ದುರಂತ!

author-image
admin
Updated On
ಕಲಬುರಗಿ ಕೋರ್ಟ್‌ನಲ್ಲಿ ಹಿರಿಯ ನ್ಯಾಯಾಧೀಶರಿಗೆ ಹೃದಯಾಘಾತ.. ಘೋರ ದುರಂತ!
Advertisment
  • ಜಿಲ್ಲಾ 3 ನೇ ಹಿರಿಯ ಶ್ರೇಣಿ ನ್ಯಾಯಾಧೀಶರಾಗಿದ್ದ ವಿಶ್ವನಾಥ್
  • ಕಳೆದ ವಾರವಷ್ಟೇ ಕಲಬುರಗಿಗೆ ವರ್ಗಾವಣೆಯಾಗಿ ಬಂದಿದ್ದರು
  • ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಕೊನೆಯುಸಿರು

ಕಲಬುರಗಿ ಜಿಲ್ಲಾ ಕೋರ್ಟ್‌ನಲ್ಲಿ ಹಿರಿಯ ನ್ಯಾಯಾಧೀಶರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಎಂದಿನಂತೆ ನ್ಯಾಯಾಧೀಶ ವಿಶ್ವನಾಥ್ ವಿ ಮೂಗತಿ (44) ಅವರು ಕೋರ್ಟ್‌ಗೆ ಬಂದಿದ್ದರು.

ವಿಶ್ವನಾಥ್ ವಿ ಮೂಗತಿ ಅವರು ಕಲಬುರಗಿ ಜಿಲ್ಲಾ 3 ನೇ ಹಿರಿಯ ಶ್ರೇಣಿ ನ್ಯಾಯಾಧೀಶರಾಗಿದ್ದರು. ಕಳೆದ ವಾರವಷ್ಟೇ ಕಲಬುರಗಿಗೆ ವರ್ಗಾವಣೆಯಾಗಿ ಬಂದಿದ್ದರು.

ಇದನ್ನೂ ಓದಿ: ಲಾರಿ-ಬೈಕ್ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಇಬ್ಬರು ಡ್ಯಾನ್ಸರ್ 

ಇಂದು ಬೆಳಗ್ಗೆ ಕೋರ್ಟ್‌ಗೆ ಬಂದಿದ್ದ ನ್ಯಾಯಾಧೀಶರಿಗೆ ಕೋರ್ಟ್ ಹಾಲ್‌ಗೆ ಬರುವುದಕ್ಕೆ ಮುಂಚೆಯೇ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಕೊನೆಯುಸಿರೆಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment