newsfirstkannada.com

ಬಸ್‌, ಪೊಲೀಸ್ ಜೀಪ್‌ ಮುಖಾಮುಖಿ ಡಿಕ್ಕಿ.. ಕರ್ನಾಟಕದ ಹಿರಿಯ ಅಧಿಕಾರಿ ಸೇರಿ ಇಬ್ಬರು ಸಾವು

Share :

Published April 11, 2024 at 8:47pm

    ಕೆಎಸ್‌ಆರ್‌ಪಿ ಸಿಬ್ಬಂದಿ, ತಮಿಳುನಾಡು ಪೊಲೀಸರು ಪ್ರಯಾಣಿಸುತ್ತಿದ್ದ ಜೀಪ್‌

    ತಮಿಳುನಾಡು ಚುನಾವಣೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಅಧಿಕಾರಿಗಳು

    ಡೆಪ್ಯೂಟಿ ಕಮಾಂಡೆಂಟ್‌ ಹೇಮಂತ್, ಕಾನ್ಸ್‌ಟೇಬಲ್ ವಿಠ್ಠಲ್ ಸ್ಥಿತಿ ಗಂಭೀರ

ತಮಿಳುನಾಡು ಚುನಾವಣೆಯ ಭದ್ರತೆಗೆ ನಿಯೋಜನೆಗೊಂಡು ತೆರಳಿದ್ದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ಪೊಲೀಸರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನ ತಿರುವಣಮಲೈ ಬಳಿ ಬಸ್ ಹಾಗೂ ಪೊಲೀಸ್ ಜೀಪ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ತಮಿಳುನಾಡಿನ ತಿರುವಣಮಲೈ ಬಳಿ ಈ ದುರಂತ ಸಂಭವಿಸಿದೆ. ಕೆಎಸ್‌ಆರ್‌ಪಿ ಸಿಬ್ಬಂದಿಗಳು ಹಾಗೂ ತಮಿಳುನಾಡು ಪೊಲೀಸರು ಜೀಪ್‌ನಲ್ಲಿ ತೆರಳುತ್ತಿದ್ದರು. ಅಪಘಾತದ ವೇಳೆ ಜೀಪ್‌ನಲ್ಲಿ ಮುಂದೆ ಕುಳಿತ್ತಿದ್ದ KSRP ಹಿರಿಯ ಅಧಿಕಾರಿ ಟಿ. ಪ್ರಭಾಕರ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ತಮಿಳುನಾಡು ಪೊಲೀಸ್ ಸಿಬ್ಬಂದಿ ಸಹಿತ ಮೂವರಿಗೆ ಗಾಯಗಳಾಗಿದೆ.

ಇದನ್ನೂ ಓದಿ: ಘೋರ ದುರಂತ.. ಯುಗಾದಿ ಮೆರವಣಿಗೆಗೆ ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶ; ಮಕ್ಕಳ ಬದುಕಿಸಲು ಹರಸಾಹಸ

ಟಿ. ಪ್ರಭಾಕರ್ ಅವರು ಕೆಎಸ್‌ಆರ್‌ಪಿ ಮೂರನೇ ಬೆಟಾಲಿಯನ್ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಪಘಾತದಲ್ಲಿ ತಮಿಳುನಾಡಿನ ಓರ್ವ ಪೊಲೀಸ್ ಸಿಬ್ಬಂದಿ ಕೂಡ ಸಾವನ್ನಪ್ಪಿದ್ದಾರೆ. ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೇಮಂತ್ ಕುಮಾರ್, ಡೆಪ್ಯೂಟಿ ಕಮಾಂಡೆಂಟ್‌ಗೆ ಗಂಭೀರ ಗಾಯಗಳಾಗಿದೆ. ಕಾನ್ಸ್‌ಟೇಬಲ್ ವಿಠ್ಠಲ್ ಎಂಬುವವರ ಸ್ಥಿತಿ ಗಂಭೀರವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸ್‌, ಪೊಲೀಸ್ ಜೀಪ್‌ ಮುಖಾಮುಖಿ ಡಿಕ್ಕಿ.. ಕರ್ನಾಟಕದ ಹಿರಿಯ ಅಧಿಕಾರಿ ಸೇರಿ ಇಬ್ಬರು ಸಾವು

https://newsfirstlive.com/wp-content/uploads/2024/04/Tamilnadu-Accident-1.jpg

Load More