/newsfirstlive-kannada/media/post_attachments/wp-content/uploads/2025/06/DODDARANGEGOWDA.jpg)
ಬೆಂಗಳೂರು: ಹಿರಿಯ ಸಾಹಿತಿ ಪ್ರೊ.ದೊಡ್ಡರಂಗೇಗೌಡ ಅವರು ತೀವ್ರ ಅನಾರೋಗ್ಯದಿಂದ ಕೆಂಗೇರಿಯಲ್ಲಿರುವ ಗ್ಲೆನೆಗಲ್ ಬಿಜಿಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
79 ವರ್ಷದ ಸಾಹಿತಿ ಪ್ರೊ.ದೊಡ್ಡರಂಗೇಗೌಡ ಅವರು ದಾಖಲಾದ ಬಿಜಿಎಸ್ ಆಸ್ಪತ್ರೆಗೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಭೇಟಿ ನೀಡಿದ್ದಾರೆ. ಈ ವೇಳೆ ಪ್ರೊ.ದೊಡ್ಡರಂಗೇಗೌಡ ಅವರ ಆರೋಗ್ಯದ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡಿದ್ದಾರೆ.
ಸಚಿವ ಶಿವರಾಜ ತಂಗಡಗಿ ಅವರು ಆಸ್ಪತ್ರೆಯ ವೈದ್ಯರಲ್ಲಿ ದೊಡ್ಡರಂಗೇಗೌಡ ಅವರ ಆರೋಗ್ಯ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಅವರ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸುತ್ತದೆ ಎಂದು ಹೇಳಿದ್ದಾರೆ. ಹಿರಿಯ ಸಾಹಿತಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ಪ್ರಾಂಶುಪಾಲ ಜೊತೆ ಸೇರಿ ವಯಸ್ಸಿಗೆ ಬಂದ ಮಗನನ್ನೇ ಮುಗಿಸಿದ ಹೆತ್ತ ತಾಯಿ.. ಅಸಲಿಗೆ ಆಗಿದ್ದೇನು?
/newsfirstlive-kannada/media/post_attachments/wp-content/uploads/2025/06/DODDARANGEGOWDA_1.jpg)
ಪ್ರೊ.ದೊಡ್ಡರಂಗೇಗೌಡರ ಕುಟುಂಬ ಸದಸ್ಯರನ್ನು ಶಿವರಾಜ ತಂಗಡಗಿ ಅವರು ಭೇಟಿ ಮಾಡಿ ಧೈರ್ಯ ಹೇಳಿದರು. ಹಿರಿಯ ಸಾಹಿತಿ ಕನ್ನಡ ಸಾಂಸ್ಕೃತಿಕ ಲೋಕದ ಆಸ್ತಿ. ಅವರ ಬಗ್ಗೆ ಅಪಾರವಾದ ಕಾಳಜಿ ಇದೆ. ಎಲ್ಲ ರೀತಿಯ ನೆರವನ್ನು ಸರ್ಕಾರದಿಂದ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮನುಜ ಕಾವ್ಯನಾಮದ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರೊ.ದೊಡ್ಡರಂಗೇಗೌಡ ಅವರು ಗುರುತಾಗಿದ್ದಾರೆ. ಇವರು ಕೆ.ರಂಗೇಗೌಡ, ಅಕ್ಕಮ್ಮ ದಂಪತಿಯ ಮಗನಾಗಿ 1946 ಫೆಬ್ರುವರಿ 7 ರಂದು ಮಧುಗಿರಿ ತಾಲೂಕಿನ ಕುರುಬರಹಳ್ಳಿಯಲ್ಲಿ ಜನಿಸಿದ್ದರು. ಪ್ರೊ.ದೊಡ್ಡರಂಗೇಗೌಡ ಅವರು ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us