ಪ್ರಯಾಗರಾಜ್​​​ ಕಾಲ್ತುಳಿತದಲ್ಲಿ 17 ಜನ ಜೀವ ಬಿಟ್ಟ ಕೇಸ್​ಗೆ ಟ್ವಿಸ್ಟ್​​; ಮೊದಲೇ ಸೂಚನೆ ನೀಡಿದ್ದ ಕಮಿಷನರ್​​!

author-image
Gopal Kulkarni
Updated On
ಪ್ರಯಾಗರಾಜ್​​​ ಕಾಲ್ತುಳಿತದಲ್ಲಿ 17 ಜನ ಜೀವ ಬಿಟ್ಟ ಕೇಸ್​ಗೆ ಟ್ವಿಸ್ಟ್​​; ಮೊದಲೇ ಸೂಚನೆ ನೀಡಿದ್ದ ಕಮಿಷನರ್​​!
Advertisment
  • ಪ್ರಯಾಗರಾಜ್​ನಲ್ಲಿ ಕಾಲ್ತುಳಿತದ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತಾ?
  • ಡಿವಿಜನಲ್ ಕಮೀಷನರ್ ಹೇಳಿದ ಮಾತನ್ನು ಭಕ್ತಾದಿಗಳು ಕೇಳಲಿಲ್ಲವಾ?
  • ಮಧ್ಯರಾತ್ರಿ 12.30ಗೆ ವಿಜಯ್ ವಿಶ್ವಾಸ್​ ಮೈಕ್​ನಲ್ಲಿ ಏನು ಹೇಳಿದ್ದರು ಗೊತ್ತಾ?

ಮೌನಿ ಅಮಾವಾಸ್ಯೆಯಂದು ಭಕ್ತರ ಸಂಖ್ಯೆಯಲ್ಲಿ ಏರಿಕೆಯಾದ ಕಾರಣ ಕಾಲ್ತುಳಿತದಂತಹ ದುರಂತ ನಡೆದು 17 ಜನರು ದುರಂತ ಅಂತ್ಯ ಕಂಡಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಇನ್ನೂ ಏರಿಕೆಯಾಗುವ ಸಂಭವವಿದೆ ಎಂದು ಕೂಡ ಹೇಳಲಾಗುತ್ತಿದೆ. ಆದ್ರೆ ಈ ಒಂದು ದುರ್ಘಟನೆ ನಡೆಯುವ ಮುಂಚೆಯೇ ಜಿಲ್ಲಾಡಳಿತ ಒಂದು ಎಚ್ಚರಿಕೆಯನ್ನು ಯಾತ್ರಾರ್ಥಿಗಳಿಗೆ ನೀಡಿತ್ತು ಎಂಬ ಸುದ್ದಿ ಈಗ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ನಡೆಯುವ ಮೊದಲೇ ಬೆಳಗಿನ ಜಾವ ನಸುಕಿನಲ್ಲಿ ಪ್ರಯಾಗರಾಜ್​ನ ಡಿವಿಜನಲ್ ಕಮಿಷನರ್ ವಿಜಯ್ ವಿಶ್ವಾಸ್​ ಪಂತ್ ಒಂದು ಎಚ್ಚರಿಕೆ ಕೊಟ್ಟಿದ್ದರು. ಅವರು ನೀಡಿದ ಎಚ್ಚರಿಕೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಐಎಎಸ್ ಆಫೀಸರ್ ಘಾಟ್​ನಲ್ಲಿ ನಿದ್ರೆಗೆ ಜಾರಿದ್ದ ಜನರಿಗೆ ಬೇಗನೆ ಎದ್ದು ಸ್ನಾನ ಮಾಡುವಂತ ಮನವಿ ಮಾಡಿಕೊಂಡಿದ್ದರು. ಕೂಡಲೇ ಇಲ್ಲಿ ಜಾಗವನ್ನು ಖಾಲಿ ಮಾಡಿ ನೀವು ನಿಮ್ಮ ಸ್ನಾನವನ್ನು ಮುಗಿಸಿಕೊಳ್ಳಿ ಎಂದು ಕೂಡ ಹೇಳಿದ್ದರು. ಮೈಕ್​ನಲ್ಲಿ ಈ ಬಗ್ಗೆ ಅವರು ಅನೌನ್ಸ್ ಕೂಡ ಮಾಡಿದ್ದರು. ನಸುಕಿನ ಜಾವದಲ್ಲಿಯೇ ತಮ್ಮ ಸಿಬ್ಬಂದಿಯೊಂದಿಗೆ ಬಂದ ವಿಜಯ್ ವಿಶ್ವಾಸ್ ಪಂತ್ ಅವರು ಮೈಕ್ ಹಿಡಿದುಕೊಂಡು ಎಲ್ಲಾ ಭಕ್ತಾದಿಗಳಲ್ಲಿ ಒಂದು ವಿನಂತಿ, ನೀವು ಇಲ್ಲಿ ಮಲಗುವುದರಿಂದ ಏನು ಪ್ರಯೋಜನವಿಲ್ಲ. ಯಾರೆಲ್ಲಾ ಮಲಗಿದ್ದಿರೋ ಅವರು ಎದ್ದು ಬೇಗನ ಪವಿತ್ರ ಸ್ನಾನವನ್ನು ಮುಗಿಸಿ. ಇದು ನಾವು ನಿಮ್ಮ ಸುರಕ್ಷತೆಗಾಗಿಯೇ ಹೇಳುತ್ತಿದ್ದೇವೆ. ತಡವಾದಲ್ಲಿ ಕಾಲ್ತುಳಿತವಾಗುವ ಸಂಭವವವಿದೆ ಎಂದು ಮೈಕ್​​ನಲ್ಲಿ ಅನೌನ್ಸ್​​ಮೆಂಟ್ ನೀಡಿದ್ದರು.


">January 29, 2025

ಇದನ್ನೂ ಓದಿ:BREAKING ಕುಂಭ ಮೇಳದಲ್ಲಿ ಕರ್ನಾಟಕದ ಇಬ್ಬರು ನಿಧನ.. ಜೀವ ಚೆಲ್ಲಿದ ತಾಯಿ, ಮಗಳು

ಬೇಗನೇ ಎದ್ದೇಳೀ, ಬೇಗನೇ ಎದ್ದೇಳಿ ಎಂದು ಸುಮಾರು ಬಾರಿ ಹೇಳಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದೆ. ಇದಾದ ಕೆಲವೇ ಗಂಟೆಗಳಲ್ಲಿಯೇ ಕಾಲ್ತುಳಿತದಂತಹ ಭೀಕರ ಘಟನೆಯೊಂದು ನಡೆದು ಹೋಗಿದೆ. ಅಲ್ಲಿದ್ದ ಭಕ್ತಾದಿಗಳು ಡಿವಿಜನಲ್ ಕಮಿಷನರ್ ಮಾತಿನಂತೆ ನಡೆದುಕೊಂಡಿದ್ದರೆ ಈ ಒಂದು ಅಪಾಯವನ್ನು ತಪ್ಪಿಸಬಹುದಿತ್ತು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮಧ್ಯರಾತ್ರಿ 12.33 ಕ್ಕೆ ಈ ಒಂದು ಅನೌನ್ಸ್​ಮೆಂಟ್ ಮಾಡಲಾಗಿತ್ತು. ಇದಾದು ಒಂದೂವರೆ ಗಂಟೆಗೆ ಅಂದ್ರೆ ಮಧ್ಯರಾತ್ರಿ ಸುಮಾರು 2 ಗಂಟೆಗೆ ಕಾಲ್ತುಳಿತದ ದುರಂತ ನಡೆದು ಹೋಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment