Advertisment

ಸಿಎಂ ಬೆನ್ನಿಗೆ ನಿಂತ ಸುಪ್ರೀಂ ಕೋರ್ಟ್ ಹಿರಿಯ ವಕೀಲರು.. ಸಿದ್ದರಾಮಯ್ಯನವರ ಮೇಲಿರೋ ಆರೋಪಕ್ಕೆ ಮುಕ್ತಿ ಸಿಗುತ್ತಾ?

author-image
AS Harshith
Updated On
ಸಿಎಂ ಬೆನ್ನಿಗೆ ನಿಂತ ಸುಪ್ರೀಂ ಕೋರ್ಟ್ ಹಿರಿಯ ವಕೀಲರು.. ಸಿದ್ದರಾಮಯ್ಯನವರ ಮೇಲಿರೋ ಆರೋಪಕ್ಕೆ ಮುಕ್ತಿ ಸಿಗುತ್ತಾ?
Advertisment
  • ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಗವರ್ನರ್​
  • ರಾಜ್ಯಪಾಲರ ವಿರುದ್ಧ ಸಿಡಿದ ಕೈ ನಾಯಕರು.. ಇಂದು ಪ್ರತಿಭಟನೆ
  • ಸಿಎಂ ಸಿದ್ದರಾಮಯ್ಯನವರ ಮೇಲಿನ ಆರೋಪಕ್ಕೂ ಮುಕ್ತಿ ಸಿಗಲಿದೆ

ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ಸಂಬಂಧಿಸಿ ಸಿಎಂ ಸಿದ್ದರಾಮಯ್ಯನವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಆದೇಶ ರದ್ದುಗೊಳಿಸುವಂತೆ ಸಿದ್ದರಾಮಯ್ಯ ಹೈಕೋರ್ಟ್ ಮೊರೆ ಹೋಗುತ್ತಿದ್ದಾರೆ. ಮಾತ್ರವಲ್ಲದೆ, ಇದನ್ನು ಖಂಡಿಸಿ ಹೋರಾಟ ನಡೆಸಲಿದ್ದಾರೆ.

Advertisment

ಇಂದು ಹೈಕೋರ್ಟ್​ನಲ್ಲಿ ಸಿಎಂ ಸಿದ್ದರಾಮಯ್ಯನವರು ಅರ್ಜಿ ಸಲ್ಲಿಸಲಿದ್ದಾರೆ. ‘ಕೈ’ ಪಾಳಯದಿಂದಲೂ ರಾಜ್ಯಪಾಲರ ನಡೆ ಖಂಡಿಸಿ ಹೋರಾಟ ನಡೆಸಲಿದ್ದಾರೆ. ಇತ್ತ ಡಿಕೆಶಿ ನೇತೃತ್ವದಲ್ಲಿಂದು ಫ್ರೀಡಂಪಾರ್ಕ್​ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

ಸಿಎಂ ಸಿದ್ದರಾಮಯ್ಯನವರು ಕಾನೂನು ಹೋರಾಟದಿಂದ ತನ್ನ ತಪ್ಪಿಲ್ಲವೆಂದು ಸಾಬೀತುಪಡಿಸಲು ಮುಂದಾಗಿದ್ದಾರೆ. ಈಗಾಗಲೇ ವಿಪಕ್ಷಗಳ ಆರೋಪದಿಂದಾಗಿ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ಉಂಟಾಗಿದ್ದು, ಕಾನೂನು ಹೋರಾಟ ಮಾಡುವ ಮೂಲಕ ಕ್ಲೀನ್ ಚಿಟ್ ಪಡೆದ್ರೆ ವರ್ಚಸ್ಸು ವೃದ್ಧಿಯಾಗಲಿದೆ.

publive-image

ಇದನ್ನೂ ಓದಿ: ಇನ್ಮುಂದೆ ಬೆಳ್ಳುಳ್ಳಿ ಕಬಾಬ್​ ತಿನ್ನೋ ಮುಂಚೆ ಇರಲಿ ಎಚ್ಚರ.. ಮಾರುಕಟ್ಟೆಯಲ್ಲಿ ಸಿಕ್ಕ ನಕಲಿ ಬೆಳ್ಳುಳ್ಳಿ ಅಸಲಿಯತ್ತೇನು?

Advertisment

ಕಾನೂನು ಹೋರಾಟದ ಮೂಲಕ ಜಯ ದೊರಕಿದರೆ 40 ವರ್ಷಗಳ ರಾಜಕೀಯ ಜೀವನದಲ್ಲಿ ಎದುರಾದ ಆರೋಪಕ್ಕೂ ಮುಕ್ತಿ ಸಿಗಲಿದೆ. ಕ್ಲೀನ್ ಚಿಟ್ ಸಿಕ್ತು ಅಂದ್ರೆ, ವಿಪಕ್ಷ ನಾಯಕರಿಗೂ ಕೌಂಟರ್ ಕೊಡಬಹುದು. ಒಂದು ವೇಳೆ ಕಾನೂನಾತ್ಮಕವಾಗಿ ಕ್ಲೀನ್ ಚಿಟ್ ಸಿಗದಿದ್ರೆ ರಾಜಕೀಯವಾಗಿ ಅವರಿಗೆ ಅದು ಕಪ್ಪು ಚುಕ್ಕೆ.

ಸಿಎಂ ಬೆನ್ನಿಗೆ ನಿಂದ ಸುಪ್ರೀಂ ಕೋರ್ಟ್ ಹಿರಿಯ ವಕೀಲರು

ಮುಡಾ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಸುಪ್ರೀಂಕೋರ್ಟ್ ಹಿರಿಯ ವಕೀಲರು ನಿಂತಿದ್ದಾರೆ. ಅಭಿಷೇಕ್ ‌ಮನು ಸಿಂಘ್ವಿ, ಕಪಿಲ್ ಸಿಬಲ್​ರಿಂದ ಸಿಎಂ ಪರ ಅರ್ಜಿ ಸಲ್ಲಿಸಲಿದ್ದಾರೆ. ರಾಜ್ಯಪಾಲರ ಆದೇಶ ಪ್ರಶ್ನಿಸಿ ಹೈಕೋರ್ಟ್​ನಲ್ಲಿ ವಕೀಲರ ವಾದ ಮಂಡಿಸಲಿದ್ದಾರೆ.

[caption id="attachment_81784" align="alignnone" width="800"]ಅಭಿಷೇಕ್​​ ಮನು ಸಿಂಘ್ವಿ ಮತ್ತು ಕಪಿಲ್​ ಸಿಬಲ್ ಅಭಿಷೇಕ್​​ ಮನು ಸಿಂಘ್ವಿ ಮತ್ತು ಕಪಿಲ್​ ಸಿಬಲ್[/caption]

Advertisment

ಇದನ್ನೂ ಓದಿ: ಇನ್​ಸ್ಟಾದಲ್ಲಿ ರೀಲ್ಸ್​ ಮಾಡುತ್ತಿದ್ದಳು ಈಗ ಡಾರ್ಲಿಂಗ್​ ಪ್ರಭಾಸ್​ಗೆ ಹಿರೋಯಿನ್​; ಯಾರು ಈ ಬ್ಯೂಟಿ!

ಇದರ ಜೊತೆಗೆ ಕಾಂಗ್ರೆಸ್​ನಿಂದ ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಯಲಿದೆ. ಇದು ಬಿಜೆಪಿಯವರ ಷಡ್ಯಂತ್ರ ಅಂತ ‘ಕೈ’ ಕಾರ್ಯಕರ್ತರ ಪ್ರತಿಭಟನೆ ಮಾಡಲಿದ್ದಾರೆ.

ಅಭಿಷೇಕ್​​ ಮನು ಸಿಂಘ್ವಿ ಯಾರು?

ಅಭಿಷೇಕ್​​ ಮನು ಸಿಂಘ್ವಿ ಭಾರತೀಯ ಹಿರಿಯ ವಕೀಲ ಮತ್ತು ರಾಜಕಾರಣಿ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​ ಸದಸ್ಯ.
ಅಂದಹಾಗೆಯೇ, ಅಭಿಷೇಕ್​​ ಮನು ಸಿಂಘ್ವಿ ಮಾರ್ವಾಡಿ ಕುಟುಂಬದಲ್ಲಿ ಜನಿಸಿದರು. ತಂದೆ ಲಕ್ಷ್ಮಿ ಮಾಲ್​​ ಸಿಂಘ್ವಿ ಜೈನ. ಇವರು ಇತಿಹಾಸ ಮತ್ತು ಸಂಸ್ಕೃತ ವಿದ್ವಾಂಸರು. ತಾಯಿ ಕಮಲಾ ಸಿಂಘ್ವಿ.

Advertisment

ಕಪಿಲ್​ ಸಿಬಲ್​ ಯಾರು?

ಭಾರತೀಯ ವಕೀಲ ಮತ್ತು ರಾಜಕಾರಣಿ. ಪ್ರಸ್ತುತ ಸುಪ್ರೀಂ ಕೋರ್ಟ್​ ಬಾರ್​ ಅಸೋಸಿಯೇಷನ್​​ ಅಧ್ಯಕ್ಷರಾಗಿದ್ದಾರೆ. ಮಾತ್ರವಲ್ಲದೆ ಇವರು ಭಾರತದ ಪ್ರಸಿದ್ಧ ವಕೀಲರಲ್ಲಿ ಒಬ್ಬರು.

ಇದನ್ನೂ ಓದಿ: ಬೆಂಗಳೂರಲ್ಲಿ ನಡೆದ ಅತ್ಯಾಚಾರ ಕೇಸ್​​ಗೆ ಟ್ವಿಸ್ಟ್; ಆರೋಪಿ ಅರೆಸ್ಟ್, ಆತನ ಹಿನ್ನೆಲೆ ಏನು?​

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಿರಿಯ ಸದಸ್ಯರಾಗಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಡಿಯಲ್ಲಿ ಸಚಿವರಾಗಿ ಹಲವಾರು ವರ್ಷಗಳಿಂದ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ನಿಯೋಗಗಳ ನೇತೃತ್ವ ವಹಿಸಿದ್ದರು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment